ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ಮಣಿಪಾಲದ ರಸ್ತೆಯಲ್ಲೇ ಯುವತಿಯ ರಂಪಾಟ..!

Spread the love

ಒಳಗೆ ಸೇರಿದರೆ ಗುಂಡು…ಕುಡಿದ ಮತ್ತಿನಲ್ಲಿ ಮಣಿಪಾಲದ ರಸ್ತೆಯಲ್ಲೇ ಯುವತಿಯ ರಂಪಾಟ..!

ಮಣಿಪಾಲ: ಶಿಕ್ಷಣ ನಗರಿ ಮಣಿಪಾಲದ ಪ್ರಮುಖ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ಯುವತಿಯೊಬ್ಬಳು ಮೈಮರೆತು ಸಾರ್ವಜನಿಕರಿಗೆ ಹಲ್ಲೆಗೆ ಮುಂದಾದ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.

ಮಣಿಪಾಲದ ಜಿಲ್ಲಾಧಿಕಾರಿ ಸಂಕೀರ್ಣಕ್ಕೆ ತೆರಳುವ ರಸ್ತೆಯಲ್ಲಿನ ಪಿಜ್ಜಾ ಶಾಪ್ ಒಂದಕ್ಕೆ ಮದ್ಯ ಸೇವನೆ ಮಾಡಿಕೊಂಡು ಯುವಕ ಮತ್ತು ಯುವತಿ ಆಗಮಿಸಿದ್ದು ವಿನಾ ಕಾರಣ ಗಲಾಟೆ ಆರಂಭಿಸಿದ್ದಾರೆ. ಆದ್ದರಿಂದ ಅಲ್ಲಿದ್ದ ಪಿಜ್ಜಾ ಶಾಪ್ ಸಿಬಂದಿ ಅವರಿಬ್ಬರನ್ನು ಹೊರಗೆ ಕಳುಹಿಸಿದ್ದು ಈ ವೇಳೆ ಅವರುಗಳ ಮೇಲೆಯೇ ಯುವತಿ ಹಲ್ಲೆಗೆ ಯತ್ನಿಸಿದ್ದಾರೆ. ಬಳಿಕ ಹೊರಬಂದು ಸಾರ್ವಜನಿಕರೊಂದಿಗೆ ಸಹ ಗಲಾಟೆ ಮಾಡಿ ಹಲ್ಲೆಗೆ ಯತ್ನಿಸಿದ್ದು, ಯುವತಿಯ ತಲೆಗೆ ತಣ್ಣೀರು ಸುರಿಸಿ ಮದ್ಯದ ನಶೆ ಇಳಿಸಲು ಪ್ರಯತ್ನಿಸಲಾಗಿದೆ.

ಆದರೂ ಕೂಡ ಯುವತಿ ನಶೆ ಇಳಿಯದೆ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿದ ಯುವತಿ ತನ್ನ ಜೊತೆ ಇದ್ದ ಯುವಕನಿಗೂ ಸಹ ಚಪ್ಪಲಿಯಿಂದ ಹೊಡೆದಿದ್ದು ಕೊನೆಗೆ ಮಣಿಪಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.


Spread the love

Leave a Reply

Please enter your comment!
Please enter your name here