ಒಳಚರಂಡಿ ಕಾರ್ಮಿಕರು, ಕಸವಿಲೇವಾರಿ ನೌಕರರ ಸಮಸ್ಯೆ ಬಗೆಹರಿಸಿ – ವಿನಯ್ ರಾಜ್

Spread the love

ಒಳಚರಂಡಿ ಕಾರ್ಮಿಕರು, ಕಸವಿಲೇವಾರಿ ನೌಕರರ ಸಮಸ್ಯೆ ಬಗೆಹರಿಸಿ – ವಿನಯ್ ರಾಜ್

ರಾಜ್ಯಾದಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಸ ವಿಲೇವಾರಿ ಮಾಡುವ ಕೆಲಸಗಾರರು/ಚಾಲಕರು/ ಒಳಚರಂಡಿ ತೋಟಿಗಳು ಅವರನ್ನು ನೇರನೇಮಕಾತಿಯ ಅಡಿಯಲ್ಲಿ ಅವರನ್ನು ನೇರನೇಮಕಾತಿ ಮಾಡಲು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ರಾಜ್ಯಾದ್ಯಂತ ಕಸ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆಗಳು ಇರುವಂತಹ ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿ ಮತ್ತು ಒಳಚರಂಡಿ ವ್ಯವಸ್ಥೆಗಳು ಸುಮಾರು 3-4 ದಿನದಿಂದ ಅಸ್ತವ್ಯಸ್ಥವಾಗಿರುತ್ತದೆ.

ರಾಜ್ಯದ ಮುಖ್ಯಮಂತ್ರಿಗಳು ಪೌರ ಆಡಳಿತ ಮಂತ್ರಿಗಳು, ಮತ್ತು ನಗರಾಭಿವೃದ್ಧಿ ಮಂತ್ರಿಗಳು ಚುನಾವಣೆಯ ಭರಾಟೆಯಲ್ಲಿ ಇದ್ದಾರೆ. ಅವರಿಗೆ ರಾಜ್ಯದ ತೆರಿಗೆ ಕಟ್ಟುವ ನಾಗರಿಕರ ಬಗ್ಗೆ ಕಾಳಜಿಯಾಗಲೀ ಅಥವಾ ಪ್ರತಿಭಟನೆಯಲ್ಲಿ ನಿರತರಾಗಿರುವಂತಹ ಕಾರ್ಮಿಕರ ಭವಿಷ್ಯದ ಬಗ್ಗೆಯಾಗಲೀ ಕಿಂಚಿತ್ತು ಕೂಡಾ ಕಾಳಜಿ ಇಲ್ಲ. ಇವರು ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗಳಾಗಿದ್ದಾರೆ. ಇವರು ಮಾಡುವಂತಹ ಕೆಲಸಗಳಿಗೆ ಉನ್ನತ ಸಮಾಜದ ಯಾವುದೇ ವ್ಯಕ್ತಿಗಳು ಸೇರುವುದಿಲ್ಲ. ಹೆಚ್ಚಿನವರು ಕೆಳ ವರ್ಗದವರಾಗಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಗೆ ಸಂಭಂಧಪಟ್ಟಂತೆ ಒಳಚರಂಡಿ ಕಾರ್ಮಿಕರು, ಕಸವಿಲೇವಾರಿ ಮಾಡುವ ವಾಹನ ಚಾಲಕರು ಪ್ರತಿಭಟನಾ ನಿರತರಾಗಿದ್ದಾರೆ.

ಸುಮಾರು 3 ದಿನಗಳಿಂದ ಮಂಗಳೂರು ನಗರದಲ್ಲಿ ಕಸ ವಿಲೇವಾರಿ ಮಾಡುವ ಕೆಲಸವನ್ನು ನಿಲ್ಲಿಸಲಾಗಿರುತ್ತದೆ ಹಾಗೂ ಒಳಚರಂಡಿ ವ್ಯವಸ್ಥೆಯ ನೌಕರರು ಕೂಡ ಪ್ರತಿಭಟನಾ ನಿರತರಾಗಿದ್ದಾರೆ. ಮಂಗಳೂರು ನಗರದಲ್ಲಿ ಸುಮಾರು 22 ವೆಟ್ ವೆಲ್ ಗಳು, 4 ಎಸ್.ಟಿ.ಪಿ ಗಳು ಇರುತ್ತವೆ. ಇದು ಯಾವುದನ್ನು ಕೂಡ ಇಂದು ಕಾರ್ಯನಿರ್ವಹಿಸುತ್ತಿಲ್ಲ.

ಒಳಚರಂಡಿ ವ್ಯವಸ್ಥೆ ಕೆಲಸ ಮಾಡದೇ ಇದ್ದಲ್ಲಿ, ಇನ್ನು 2 ದಿನದ ಒಳಗಾಗಿ ನಗರದಾದ್ಯಂತ ಒಳಚರಂಡಿ ನೀರು ಆಳುಗುಂಡಿಗಳ ಮುಖಾಂತರ ಹೊರಬಂದು ನಗರದ ನಾಗರಿಕರ ಅರೋಗ್ಯ ಮತ್ತು ನಗರದ ಸ್ವಚ್ಚತೆಯನ್ನು ಕೆಡಿಸುತ್ತದೆ. ಅನೇಕ ರೋಗಗಳಿಗೆ ಜನರು ತುತ್ತಾಗಲಿದ್ದಾರೆ. ಕಸ ವಿಲೇವಾರಿ ಮಾಡದೇ ಇರುವುದರಿಂದ ಸ್ವಚ್ಚತೆ ಕೆಟ್ಟಿದ್ದು ನಗರದ ವಾತಾವರಣ ಗಬ್ಬುವಾಸನೆಯುಕ್ತವಾಗಿದ್ದು, ನಾಗರಿಕರ ಆರೋಗ್ಯದ ಮೇಲೆ ಮತ್ತು ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

ಮ.ನ.ಪಾದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಆಡಳಿತ ಮತ್ತು ಇಲ್ಲಿಯ ಇಬ್ಬರು ಶಾಸಕರುಗಳಾದ ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಮಂಗಳೂರಿನಲ್ಲಿ ನಾಳೆ ಕರಾವಳಿ ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ಜನ ತರುವ ಬಗ್ಗೆ ನಿರತರಾಗಿದ್ದಾರೆ. ನಗರದ ನಾಗರಿಕರ ಈ ಸಮಸ್ಯೆಗಳ ಬಗ್ಗೆ ಅವರು ತೆಲೆಕೆಡಿಸಿಕೊಂಡತ್ತಿಲ್ಲ. ಇದೇ ಮತದಾರರ ಮತವನ್ನು ಪಡೆದು ಅವರು ಶಾಸಕರಾಗಿದ್ದಾರೆ ಎನ್ನುವುದನ್ನು ಮರೆತಂತಿದೆ. ಮ.ನ.ಪಾ ಮೇಯರ್ ಇದರ ಬಗ್ಗೆ ನನಗೆ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಇಲ್ಲಿಯ ಇಬ್ಬರು ಶಾಸಕರುಗಳಾಲಿ ಅಥವಾ ಮನ.ಪಾ ಆಡಳಿತವಾಗಲಿ ಈ ಸಮಸ್ಯೆಯನ್ನು ಪರಿಹರಿಸಲು ಪ್ರತಿಭಟನೆಯಲ್ಲಿ ನಿರತರಾಗಿರುವ ಕಾರ್ಮಿಕರೊಂದಿಗೆ ಮಾತುಕತೆ ನಡೆಸುವುದಾಗಲಿ ಅಥವಾ ಪರ್ಯಾಯ ವ್ಯವಸ್ಥೆ ಮಾಡಲು ಕ್ರಮ ತೆಗೆದುಕೊಂಡಿರುವುದಿಲ್ಲ.

ಪಚ್ಚನಾಡಿ ಡಂಪಿಂಗ್ ಯಾರ್ಡ್ನಲ್ಲಿ ಈ ಎರಡು ತಿಂಗಳಿನಲ್ಲಿ ಮೂರು ಸಲ ಬೆಂಕಿ ಬಿದ್ದು ಅಲ್ಲಿಯ ರಾಸಾಯನಿಕ ವಿಷಪೂರಿತ ಹೊಗೆಯಿಂದ ಸ್ಥಳೀಯ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳಾಗುತ್ತಿದ್ದು, ಇದರ ಬಗ್ಗೆ ಶಾಸಕರುಗಳು ಹಾಗೂ ಸ್ಥಳೀಯಾಡಳಿತ ತಲೆಕೆಡಿಸಿಕೊಂಡತ್ತಿಲ್ಲ. ಪಚ್ಚನಾಡಿ ಡಂಪಿಂಗ್ ಯಾರ್ಡ್ನ ಕಸವನ್ನು ಬೆಂಕಿ ಹಾಕಿ ವಿಲೇವಾರಿ ಮಾಡಲು ಮ.ನ.ಪಾ ಹೊರಟಂತಿದೆ. ಯಾಕೆಂದರೆ ಹಾಗಾಗ ಬೆಂಕಿ ಬೀಳುತ್ತಿದ್ದ್ಉ, ಕಪ್ಪು ವಿಷಪೂರಿತ ಹೊಗೆಯಿಂದ ನಾಗರಿಕರ ಆರೋಗ್ಯದ ಮೇಲೆ ಕಟ್ಟ ಪರಿಣಾಮ ಬೀರದಂತೆ ಮುಂಜಾಗೃತ ಕ್ರಮ ವಹಿಸುವುದನ್ನು ಬಿಟ್ಟು ಈ ರೀತಿ ಬೆಂಕಿ ಬೀಳಲು ಅವಕಾಶ ಕಲ್ಪಿಸಿದಂತಿದೆ.

ಸ್ಥಳೀಯಾಡಳಿತ ಮತ್ತು ಇಲ್ಲಿಯ ಶಾಸಕರುಗಳು ಆಡಳಿತ ವೈಫಲ್ಯವನ್ನು ಕಂಡಿದ್ದಾರೆ. ಕಸ ವಿಲೇವಾರಿ ಕಂಪೆನಿಯ ಗುತ್ತಿಗೆ ಮುಗಿದು ಸುಮಾರು ಒಂದುವರೆ ವರ್ಷ ಕಳೆದಿದ್ದು, ಗುತ್ತಿಗೆದಾರರು ಕರಾರಿನಂತೆ ಬೇಕಾಗಿರುವ ಕಸ ವಿಲೇವಾರಿ ವಾಹನಗಳನ್ನು ಹಾಗೂ ಕಾರ್ಮಿಕರನ್ನು ಹಾಕಿರುವುದಿಲ್ಲ. ಆದರೆ ಅವರಿಗೆ ಪೂರ್ಣ ಪ್ರಮಾಣದ ಹಣ ಪಾವತಿಯಾಗುತ್ತಿದೆ. ಇದರಲ್ಲಿ ಭ್ರಷ್ಟಾಚಾರದ ವಾಸನೆ ಕಂಡು ಬರುತ್ತಿದೆ.


Spread the love

Leave a Reply

Please enter your comment!
Please enter your name here