ಒಳ್ಳೆಯ ಸಿನೆಮಾ ಮಾಡಿದಾಗ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವುದಕ್ಕೆ ಕಾಂತಾರ ಸಿನೆಮಾವೇ ಸಾಕ್ಷಿ – ಕಾರ್ತಿಕ್ ಗೌಡ

Spread the love

ಒಳ್ಳೆಯ ಸಿನೆಮಾ ಮಾಡಿದಾಗ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ ಎನ್ನುವುದಕ್ಕೆ ಕಾಂತಾರ ಸಿನೆಮಾವೇ ಸಾಕ್ಷಿ – ಕಾರ್ತಿಕ್ ಗೌಡ

ಕುಂದಾಪುರ: ಓಟಿಟಿ ಚಾಲ್ತಿಗೆ ಬಂದಿದ್ದೆ ಕೋವಿಡ್ ಸಮಯದಲ್ಲಿ. ಚಿತ್ರಮಂದಿರಗಳಿಗೆ ಜನರು ಬರೋದಿಲ್ಲ ಹಾಗಾಗಿ ಓಟಿಟಿಗೆ ಕೊಟ್ಟೆವು ಎನ್ನುವ ಮಾತು ಬಾಲಿಶ. ನಮ್ಮ ಮನೋರಂಜನೆಗಾಗಿ ಓಟಿಟಿ ಜನಪ್ರಿಯತೆ ಪಡೆದುಕೊಂಡಿತ್ತು ಬಿಟ್ಟರೆ ಚಿತ್ರಮಂದಿರಗಳಲ್ಲಿ ಜನರಲ್ಲಿದ ಕಾರಣ ಓಟಿಟಿ ಜನಪ್ರಿಯತೆ ಪಡೆದುಕೊಂಡಿಲ್ಲ. ಜನರು ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎನ್ನುವ ಮಾತನ್ನು ನಾನು ಯಾವತ್ತೂ ನಂಬಲ್ಲ. ಒಳ್ಳೆಯ ಸಿನೆಮಾ ಮಾಡಿದಾಗ ಜನರು ಚಿತ್ರಮಂದಿರಗಳಿಗೆ ಬಂದೇ ಬರುತ್ತಾರೆ. ಇದಕ್ಕೆ ನಮ್ಮ ಕಾಂತಾರ ಸಿನೆಮಾವೇ ಸಾಕ್ಷಿ ಎಂದು ಹೊಂಬಾಳೆ ಫಿಲ್ಮ್ಸ್ ಹಾಗೂ ಕೆಆರ್‍ಜಿ ಸ್ಟೂಡಿಯೋಸ್‍ನ ಕಾರ್ತಿಕ್ ಗೌಡ ಅಭಿಮತ ವ್ಯಕ್ತಪಡಿಸಿದರು.

ಅವರು ಕುಂದಾಪುರ ದೀಪೋತ್ಸವದ ಪ್ರಯುಕ್ತ ಇಲ್ಲಿನ ಕಲಾಮಂದಿರದಲ್ಲಿ ಅಂತರಾಷ್ಟ್ರೀಯ ಮಟ್ಟದ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ ಅವರ ನೇತೃತ್ವದಲ್ಲಿ ಐದು ದಿನಗಳ ಕಾಲ ಜರುಗಲಿರುವ ಕಾರ್ಟೂನ್ ಹಬ್ಬ ಉದ್ಘಾಟನಾ ಸಮಾರಂಭದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆಜಿಎಫ್ ಹಾಗೂ ಕಾಂತಾರ ಚಿತ್ರಗಳು ಬಿಡುಗಡೆಗೂ ಮುನ್ನ ಸದ್ದು ಮಾಡುತ್ತದೆ ಎನ್ನುವ ಅಚಲ ನಂಬಿಕೆ ಇತ್ತು. ಆದರೆ ಈ ಮಟ್ಟಕ್ಕೆ ಯಶಸ್ಸಾಗುತ್ತದೆ ಎಂದು ಊಹಿಸಿರಲಿಲ್ಲ. ಕಾಂತಾರ ಪ್ರದರ್ಶನ ಕಾಣುವ ಮೊದಲು ನನಗೆ ಈ ಸಿನೆಮಾವನ್ನು ರಿಷಬ್ ತೋರಿಸಿದಾಗ ಶೇಕಡಾ 100 ಸಿನೆಮಾ ಹಿಟ್ ಆಗುತ್ತದೆ ಎಂದಿದ್ದರು. ಆದರೆ ನಮ್ಮ ನಿರೀಕ್ಷೆಗೂ ಮೀರಿ ಇಂದು ಕಾಂತಾರ ಯಶಸ್ಸು ಕಾಣುತ್ತಿದೆ. ಸಿನೆಮಾಗಳಲ್ಲಿ ಭಾಷೆಗಳ ಭೇದ-ಭಾವ ಇರಬಾರದು. ನಾವು ಮಾಡುವ ಸಿನೆಮಾವೆಲ್ಲವೂ ಜನರಿಗೆ ಇಷ್ಟ ಆಗಬೇಕು ಎಂದಿಲ್ಲ. ಕೆಲವೊಮ್ಮೆ ಸಿನೆಮಾಗಳು ಫೇಲ್ಯೂರ್ ಆಗಬಹುದು. ಆದರೆ ಅದರಲ್ಲಿ ಏನು ತಪ್ಪುಗಳಿವೆ ಎಂದು ತಿದ್ದಿಕೊಂಡು ಮುಂದೆ ಒಳ್ಳೆಯ ಸಿನೆಮಾವನ್ನು ಜನರಿಗೆ ಕೊಡಲು ಪ್ರಯತ್ನಿಸಬೇಕು ಎಂದರು.

ಕನ್ನಡ ಭಾಷೆಯಲ್ಲಿ ಜೈ ಭೀಮ್, ಜನಗಣಮನ ಸಿನೆಮಾದಂತಹ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳು ಅತೀ ವಿರಳವಾಗಿ ಬರುತ್ತಿದೆ. ಇಂತಹ ಸಿನೆಮಾಗಳು ಬಂದಾಗ ಅದು ಜನರನ್ನು ತಲುಪವಲ್ಲಿ ಯಶಸ್ವಿಯಾದರೆ ಅದರ ಕಥೆಗಾರರು, ನಿರ್ದೇಶಕರಿಗೆ ಇನ್ನೂ ಹೆಚ್ಚಿನ ಆತ್ಮವಿಶ್ವಾಸ ಬರುತ್ತದೆ. ಮೊದಲು ಇಂತಹ ಸಿನೆಮಾಗಳು ಹೆಚ್ಚಾಗಿ ಬರುತ್ತಿದ್ದು, ಕ್ರಮೇಣ ಕಡಿಮೆಯಾಗಿದೆ. ಆದರೆ ಇಂದು ಇಂತಹ ಕತೆಯನ್ನೊಳಗೊಂಡ, ಸಾಮಾಜಿಕ ಬದ್ದತೆಯುಳ್ಳ ಸಿನೆಮಾಗಳನ್ನು ಜನರು ಸ್ವೀಕರಿಸುತ್ತಿದ್ದಾರೆ. ನಮ್ಮ ಮುಂದಿನ ಸಿನೆಮಾ ಡಾಲಿ ಧನಂಜಯ್ ಅಭಿನಯದ ಹೊಯ್ಸಳ ದಲ್ಲಿಯೂ ಸಾಮಾಜಿಕ ಕಳಕಳಿಯುಳ್ಳ ಕತೆ ಇರುತ್ತದೆ ಎಂದರು.

ರಿಷಬ್ ಅವರು ತಮ್ಮ ಊರಿನಿಂದಲೇ ಇನ್ನೊಂದು ಸಿನೆಮಾ ಮಾಡಬೇಕು ಎನ್ನುವ ತಯಾರಿಯಲ್ಲಿ ಇದ್ದಾರೆ. ಎಲ್ಲಿ ಸಿನೆಮಾ ಮಾಡುತ್ತೇವೊ ಅಲ್ಲಿನ ಸಂಸ್ಕøತಿ, ಆಚಾರ-ವಿಚಾರಗಳನ್ನು ತೋರಿಸುವುದು ಬಹುಮುಖ್ಯವಾಗುತ್ತದೆ. ಇಂತಹ ಸಂಸ್ಕøತಿ, ಆಚಾರ-ವಿಚಾರಗಳನ್ನು ಜನರಿಗೆ ತಲುಪಿಸಬಹುದು ಎನ್ನುವ ವಿಶ್ವಾಸವಿದ್ದರೆ ಇಂತಹ ಸಿನೆಮಾಗಳನ್ನು ಮತ್ತೆ ಮತ್ತೆ ಮಾಡುವುದಕ್ಕೆ ನಾವು ಸಿದ್ದರಿದ್ದೇವೆ ಎಂದರು.

ಎಲ್ಲಾ ಭಾಷೆಯ ಜನರಿಗೂ ದೈವ-ದೇವರ ಬಗ್ಗೆ ನಂಬಿಕೆ ಇರುತ್ತದೆ. ಆದರೆ ಅದು ಬೇರೆ-ಬೇರೆ ರೂದಲ್ಲಿರುತ್ತದೆ. ನಂಬಿಕೆ ಒಂದೇ. ಆದರೆ ಆಚರಣೆಗಳು ಬೇರೆ-ಬೇರೆ. ಬೇರೆಯವರು ಕರಾವಳಿ ಆಚರಣೆಗಳನ್ನು ನೋಡಿದಾಗ ತಮ್ಮ ಆಚರಣೆಯನ್ನು ಕಲ್ಪನೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಕಾಂತಾರ ಸಿನೆಮಾ ಎಲ್ಲೆಡೆ ಯಶಸ್ಸು ಕಾಣಲು ಸಾಧ್ಯವಾಗಿದೆ. ಕಂಬಳಕ್ಕೆ ಪರ್ಯಾಯವಾಗಿ ಜಲ್ಲಿಕಟ್ಟು ಇದೆ. ಅಲ್ಲಿಯ ಜನರಿಗೆ ಜಲ್ಲಿಕಟ್ಟು ಸಾಂಪ್ರದಾಯಿಕ ಕ್ರೀಡೆ. ಬೇರೆಯವರ ಆಚರಣೆಗಳ ಕುರಿತು ನಮಗೆ ಹೇಗೆ ಕುತೂಹಲ ಇರುತ್ತದೆಯೋ, ಬೇರೆಯವರಿಗೂ ನಮ್ಮಲ್ಲಿನ ಆಚರಣೆಗಳ ಕುರಿತು ಕತೂಹಲವಿರುತ್ತದೆ. ಹೀಗಾಗಿ ಕರಾವಳಿ ದೈವ-ದೇವರ ಆಚರಣೆಯ ಕಾಂತಾರ ಸಿನೆಮಾ ಎಲ್ಲಾ ಭಾಷೆಯ, ಸಂಸ್ಕøತಿಯ ಜನರನ್ನು ಆಕರ್ಷಿಸಯವಲ್ಲಿ ಯಶಸ್ವಿಯಾಗಿದೆ.

ಕಾಂತಾರ ಸಿನೆಮಾದ ಯಶಸ್ಸಿನ ಸಂಭ್ರಮಾಚರಣೆಯನ್ನು ರಿಷಬ್ ಶೆಟ್ಟಿಯವರ ಊರಾದ, ಇಡೀ ಸಿನೆಮಾದ ಚಿತ್ರೀಕರಣಗೊಂಡ ಕೆರಾಡಿಯಲ್ಲೇ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಕೆರಾಡಿ ಫಿಲ್ಮ್ ಸಿಟಿ ಅಂತಲೇ ಹೆಸರು ಇಟ್ಟಿದ್ದೇವೆ. ಹಗಲು-ರಾತ್ರಿ ಆ ಭಾಗದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಚಿತ್ರೀಕರಣದ ವೇಳೆ ಇಲ್ಲಿನ ಜನರು ನಮಗೆ ತೊಂದರೆಯಾಗದಂತೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.

ಕಾಂತಾರ ಸಿನೆಮಾದಲ್ಲಿ ಯಾವುದೇ ಹಾಡನ್ನು ಕಾಪಿ ಮಾಡಿಲ್ಲ. ಹೋಲಿಕೆ ಇರಬಹುದು. ಹಾಡು ಕಾಪಿ ವಿಚಾರದ ಕುರಿತು ನ್ಯಾಯಾಲಯದಲ್ಲಿ ವಾದ ನಡೆಯುತ್ತಿದೆ. ಈ ಬಗ್ಗೆ ನ್ಯಾಯಾಲಯ ತೀರ್ಪು ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸುಳ್ಳುಗಳು ಬಹಳ ಬೇಗನೇ ರವಾನೆಯಾಗುತ್ತದೆ. ಸಿನೆಮಾಗಳು ಹಿಟ್ ಆದ ಕೂಡಲೇ ಇವೆಲ್ಲಾ ಗಾಸಿಪ್‍ಗಳು ಸರ್ವೆಸಾಮಾನ್ಯ.

2013ರಲ್ಲಿ ಪುನೀತ್ ಅಭಿನಯದ ನಿನ್ನಿಂದಲೇ ಸಿನೆಮಾದಿಂದ ಆರಂಭಗೊಂಡ ನಮ್ಮ ಸಂಸ್ಥೆ ಕಡಿಮೆ ಅವಧಿಯಲ್ಲಿ ಇಷ್ಟು ಹೆಸÀರು ಮಾಡುತ್ತದೆ ಎಂದು ಊಹಿಸಿರಲಿಲ್ಲ. ಸಂಸ್ಥೆ ಆರಂಭದ ದಿನಗಳಲ್ಲಿ ಅಂದುಕೊಂಡತೆಯೇ ಅದೇ ಬದ್ದತೆಯಲ್ಲಿ ಇಂದು ಕೆಲಸ ಮಾಡುತ್ತಿದ್ದೇವೆ. ಒಳ್ಳೆಯ ಸಿನೆಮಾವನ್ನು ಜನರಿಗೆ ಕೊಡುತ್ತಿದ್ದೇವೆ. ಮುಂದೆಯೂ ಆ ಕೆಲಸ ಮಾಡುತ್ತೇವೆ.

ದೇವರಿದ್ದಾನೊ, ಇಲ್ಲವೋ ಎಂಬ ನಂಬಿಕೆಗಳು ಅವರವರಿಗೆ ಬಿಟ್ಟಿರುವ ವಿಚಾರ. ನಂಬಿಕೆ ಇಲ್ಲದವರಿಗೆ ಅದೊಂದು ಕತೆಯಾಗಿರುತ್ತದೆ. ನಂಬಿಕೆ ಇರುವವರಿಗೆ ದೇವರ ಮೇಲೆ ನಂಬಿಕೆ ಇದೆ ಅಂದುಕೊಳ್ಳಬಹುದು. ನಾವು ದೇವರಿದ್ದಾನೆ ಎಂದು ನಂಬಿರುವವರು. ದೇವರಿಲ್ಲ ಎನ್ನುವವರ ಜೊತೆ ವಾದವಿಲ್ಲ. ಈ ವಿಚಾರದಲ್ಲಿ ಚರ್ಚೆ ಮಾಡಲ್ಲ ಎಂದು ಕಾರ್ತಿಕ್ ಗೌಡ ಮೂಢನಂಬಿಕೆ ವೈಭವೀಕರಣದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಂಡಾರ್ಸ್‍ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪತ್ರಕರ್ತರು, ವ್ಯಂಗ್ಯಚಿತ್ರಕಾರರು, ಬರಹಗಾರರು ಸಂವಾದದಲ್ಲಿ ಪಾಲ್ಗೊಂಡರು.


Spread the love

Leave a Reply

Please enter your comment!
Please enter your name here