
Spread the love
ಓವರ್ ಟೇಕ್ ಭರದಲ್ಲಿ ರಿಕ್ಷಾಗೆ ಢಿಕ್ಕಿಯಾದ ಕಾರು: ಯುವತಿ ದಾರುಣ ಸಾವು
ಕುಂದಾಪುರ: ಕಾರೊಂದು ಇನ್ನೊಂದು ಕಾರನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಆಟೋರಿಕ್ಷಾಗೆ ಢಿಕ್ಕಿಯಾದ ಪರಿಣಾಮ ಆಟೋರಿಕ್ಷಾದೊಳಗಿದ್ದ ಯುವತಿ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಕಂದಾವರ ಗ್ರಾಮದ ಮೂಡ್ಲಕಟ್ಟೆ ಕಂಬಳಗದ್ದೆ ಸಮೀಪದ ನಡೆದಿದೆ.
ಕುಂದಾಪುರ ತಾಲೂಕಿನ ಅಂಪಾರು ನಿವಾಸಿ ಅಂಬಿಕಾ (22) ಮೃತ ಯುವತಿ.
ಶುಕ್ರವಾರ ಮಧ್ಯಾಹ್ನ ಅಂಬಿಕಾ ಕುಂದಾಪುರದ ಸಂಬಂಧಿಕರ ಮನೆಯಿಂದ ಅಂಪಾರಿಗೆ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಕಾರು ಮತ್ತೊಂದು ಕಾರನ್ನು ಓವರ್‌ಟೇಕ್ ಮಾಡಲು ಹೋಗಿ ಆಟೋಗೆ ಢಿಕ್ಕಿ ಯಾಗಿದೆ. ಢಿಕ್ಕಿಯ ರಭಸಕ್ಕೆ ಆಟೋ ಪಲ್ಟಿಯಾಗಿದ್ದು ರಿಕ್ಷಾದಲ್ಲಿದ್ದ ಅಂಬಿಕಾ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಶಾಂತರಾಮ ಅವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾದಲ್ಲಿದ್ದ ಮತ್ತೊಬ್ಬರಿಗೆ ಕೂಡ ಗಾಯಗಳಾಗಿದೆ. ಆರೋಪಿ ಕಾರು ಚಾಲಕನನ್ನು ವಸಂತ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love