ಕಂಕನಾಡಿ ‘ಬಿ’ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಪ್ರಚಾರ 

Spread the love

ಕುದ್ರೋಳಿ ಭಗವತಿ ಕ್ಷೇತ್ರಕ್ಕೆ ಲೋಬೊ ಭೇಟಿ.

ಕುದ್ರೋಳಿ ಶ್ರೀ ಭಗವತಿ ಕ್ಷೇತ್ರಕ್ಕೆ  ಮಾಜಿ ಶಾಸಕರು ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಗಣೇಶ್ ಕುಂಟಲ್ ಪಾಡಿ, ಕಾರ್ಪೊರೇಟರ್ ಎ. ಸಿ. ವಿನಯರಾಜ್, ಮಾಜಿ ಕಾರ್ಪೊರೇಟರ್ ಗಳಾದ ಪ್ರೇಮ್ ಚಂದ್, ಪದ್ಮನಾಭ ಅಮೀನ್ ಹಾಗೂ ಪ್ರಮುಖರಾದ ಟಿ. ಕೆ. ಸುಧೀರ್, ದುರ್ಗಾ ಪ್ರಸಾದ,ಅಶೋಕ್ ಕುಡುಪಾಡಿ, ಗಣೇಶ್, ವಿಕಾಸ್ ಶೆಟ್ಟಿ, ಪ್ರವೀಣ್ ಸಾಲ್ಯಾನ್,ಗಿರೀಶ್ ಶೆಟ್ಟಿ,ಜ್ಞಾನೇಶ್ ಕುಮಾರ್,ಪ್ರಸಾದ,ಹೇಮಂತ್ ಮೊದಲಾದವರು ಉಪಸ್ಥಿತರಿದ್ದರು.

ಕಂಕನಾಡಿ ‘ಬಿ’ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಪ್ರಚಾರ 

ಮಂಗಳೂರು ಮಹಾನಗರ ಪಾಲಿಕೆಯ 49ನೇ ಕಂಕನಾಡಿ ‘ಬಿ ‘ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದ ಬಿರುಸಿನ ಪ್ರಚಾರ  ನಡೆಯಿತು. ಮಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ   ಜೆ. ಆರ್. ಲೋಬೊ ರವರು ಇಂದು ಈ ವಾರ್ಡಿಗೆ ಭೇಟಿ, ಮೊದಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಅಲ್ಲಿನ ಪರಿಸರದಲ್ಲಿ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲುಸುವಂತೆ ಕರೆನೀಡಿದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪದ್ಮರಾಜ್ ಆರ್., ಹಿರಿಯ ಮುಖಂಡರಾದ ಪ್ರಭಾಕರ್ ಶ್ರೀಯನ್, ಪ್ರಮುಖರಾದ ಯುವ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಪೂಜಾರಿ, ಉಮೇಶ್ ದೇವಾಡಿಗ, ಕೃತಿನ್ ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಕಲಾ ಜೋಗಿ, ಪ್ರತ್ವಿರಾಜ್, ದೀಕ್ಷಿತ್ ಶೆಟ್ಟಿ, ಶಬೀರ್, ವಿಲ್ಫ್ರೆಡ್, ಹುಸೈನ್, ಅನಂತೇಶ್, ಶಶಿಧರ್ ಕೊಟ್ಟಾರಿ, ಗೋಪಾಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.


Spread the love