
Spread the love
ಕಂಬಳಕ್ಕೆ ಅನುದಾನ ಕಾಯ್ದಿರಿಸಲು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪತ್ರ
ಮಂಗಳೂರು: ಕರಾವಳಿ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದ ತಾಲೂಕುಗಳಲ್ಲಿ ಪಾರಂಪರಿಕ ಕ್ರೀಡೆಯಾಗಿರುವ ಕಂಬಳವನ್ನು ಒಂದು ಉತ್ಸವವನ್ನಾಗಿ ಆಚರಿಸಲಾಗುತ್ತಿದ್ದು, ಜಿಲ್ಲೆಯ ರೈತರು, ಜನರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.
ಈ ಉತ್ಸವಕ್ಕೆ ಈ ಹಿಂದೆ ಸರ್ಕಾರವು ಪ್ರವಾಸೋದ್ಯಮ ಮತ್ತು ಯುವ ಸಬಲೀಕರಣ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿರುತ್ತದೆ. ಕಂಬಳ ಉತ್ಸವ ಕ್ರೀಡೆಯಾಗಿ ನಡೆಯುತ್ತಿದ್ದು, ಕಂಬಳ ನಡೆಸುವ ಪ್ರಾಯೋಜಕರು ಅನುದಾನಕ್ಕೆ ಬೇಡಿಕೆ ಸಲ್ಲಿಸುತ್ತಿರುವ ಹಿನ್ನಲೆಯಲ್ಲಿ ಈ ಬಾರಿಯ ಆಯವ್ಯಯದಲ್ಲಿ 5 ಕೋಟಿ ರೂ.ಗಳ ಅನುದಾನವನ್ನು ಕಾಯ್ದಿರಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಿಗೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಪತ್ರ ಮುಖೇನ ಕೋರಿದ್ದಾರೆ.
Spread the love