ಕಟಪಾಡಿಯಲ್ಲಿ ಎರಡು ಕಾರುಗಳ ನಡುವೆ ಅಫಘಾತ ; ಇಬ್ಬರಿಗೆ ಗಾಯ

Spread the love

ಕಟಪಾಡಿಯಲ್ಲಿ ಎರಡು ಕಾರುಗಳ ನಡುವೆ ಅಫಘಾತ ; ಇಬ್ಬರಿಗೆ ಗಾಯ

ಕಾಪು: ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಒಂದು ಕಾರು ಮಗುಚಿ ಬಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಮಾಹಿತಿಗಳ ಪ್ರಕಾರ ಮಂಗಳೂರಿಗೆ ತೆರಳುತ್ತಿದ್ದ ಟೂರಿಸ್ಟ್ ಕಾರಿಗೆ, ಹಿಂದಿನಿಂದ ಬರುತ್ತಿದ್ದ ಕೇರಳ ನೊಂದಣಿಯ ಕಾರು ಡಿಕ್ಕಿ ಹೊಡೆದಿದ್ದು, ಟೂರಿಸ್ಟ್ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡಿದ್ದು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.


Spread the love