ಕಟಪಾಡಿ ಚರ್ಚಿನ ಅಮೃತ ಮಹೋತ್ಸವ ವರ್ಷಕ್ಕೆ ಚಾಲನೆ

Spread the love

ಕಟಪಾಡಿ ಚರ್ಚಿನ ಅಮೃತ ಮಹೋತ್ಸವ ವರ್ಷಕ್ಕೆ ಚಾಲನೆ

ಉಡುಪಿ: ಒಂದು ದೇವಾಲಯದ ಅಮೃತ ಮಹೋತ್ಸವ ಆಚರಣೆ ನಮಗೆ ಹಿಂದಿನ ಘಟನೆಗಳನ್ನು ಹಾಗೂ ನೆನಪುಗಳನ್ನು ಮೆಲುಕು ಹಾಕಲು ಮತ್ತೊಮ್ಮೆ ಅವಕಾಶ ನೀಡುವುದರೊಂದಿಗೆ ಮುಂದೆ ದೇವಾಲಯದ ಮುಕಾಂತರ ಸಮಾಜಕ್ಕೆ ಯಾವ ಕೊಡುಗೆ ನೀಡಬಹುದು ಎಂಬುದನ್ನು ಆಲೋಚಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಉಡುಪಿ ವಲಯದ ಪ್ರಧಾನ ಧರ್ಮಗುರು ಹಾಗೂ ಶೋಕಮಾತಾ ಇಗರ್ಜಿಯ ಧರ್ಮಗುರುಗಳಾದ ವಂ ಚಾರ್ಲ್ಸ್ ಮಿನೇಜಸ್ ಹೇಳಿದರು.

ಅವರು ಭಾನುವಾರ ಕಟಪಾಡಿ ಸಂತ ವಿನ್ಸೆಂಟ್ ದಿ ಪಾವ್ಲ್ ಚರ್ಚಿನ ಅಮೃತ ಮಹೋತ್ಸವ ವರ್ಷಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಆಚರಣೆ ಕೇವಲ ಹೊರಗಿನ ಸಂಭ್ರಮ ಮಾತ್ರ ಆಗಿರದೆ ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಸಮಸ್ಯೆಗಳಿಗೆ ಸಿಲುಕಿ ಒದ್ದಾಡುತ್ತಿರುವವರು ಮುಖದಲ್ಲಿ ನಗು ಮೂಡಿಸುವ ಕೆಲಸಗಳಾದ ಮಾತ್ರ ನಾವು ಮಾಡುವ ಸಂಭ್ರಮಕ್ಕೆ ನಿಜವಾದ ಅರ್ಥ ಬರುತ್ತದೆ ಈ ನಿಟ್ಟಿನಲ್ಲಿ ಅಮೃತ ಮಹೋತ್ಸವ ಆಚರಣೆಯ ಒಂದು ವರ್ಷದ ಕಾರ್ಯಕ್ರಮದಲ್ಲಿ ಚಿಂತಿಸಲು ಸೂಕ್ತ ಅವಕಾಶವಾಗಿದೆ. ಅಮೃತ ಮಹೋತ್ಸವದ ಆಚರಣೆಯ ವರ್ಷದಲ್ಲಿ ಆಧ್ಯಾತ್ಮಿಕ ಚಿಂತನೆಗೆ, ಕ್ರಿಸ್ತನಲ್ಲಿ ನಮ್ಮ ವಿಶ್ವಾಸವನ್ನು ಇನ್ನಷ್ಟು ಗಟ್ಟಿಗೊಳಿಸಲು ಕೂಡ ಸಹಕಾರಿಯಾಗಬೇಕು ಎಂದರು.

ಅಮೃತ ಮಹೋತ್ಸವ ಆಚರಣೆಯ ಪ್ರಯುಕ್ತ ಭಾರತೀಯ ಕಥೊಲಿಕ್ ಯುವ ಸಂಚಾಲನ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜೋಸನ್ ಜನರೇಶನ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಮತ್ತು ರಕ್ತನಿಧಿ ವಿಭಾಗ ಕೆಎಮ್ ಸಿ ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ಜರುಗಿತು.

ಚರ್ಚಿನಲ್ಲಿ ಸೇವೆ ಸಲ್ಲಿಸಿದ ಅಂದಿನ ಧರ್ಮಗುರುಗಳಾದ ವಂ ರೋನ್ಸನ್, ವಂ| ಪ್ರೀತಮ್, ಧರ್ಮಗುರುಗಳಾದ ವಂ ಜೊನಿ, ಚರ್ಚಿನ ಧರ್ಮಗುರು ವಂ| ರಾಜೇಶ್ ಪಾಸನ್ನಾ, ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಬ್ರಾಯನ್ ಕೊರೆಯಾ, ಕಾರ್ಯದರ್ಶಿ ಕ್ಯಾಥರಿನ್ ರೊಡ್ರಿಗಸ್, 20 ಆಯೋಗಗಳ ಸಂಚಾಲಕ ವಿಲ್ಫ್ರೇಡ್ ಲೂವಿಸ್ ಉಪಸ್ಥಿತರಿದ್ದರು.


Spread the love