
ಕಟಪಾಡಿ: ಮೂಡಬೆಟ್ಟು ಸರ್ಕಾರಿಗುಡ್ಡೆ ಅಂಗನವಾಡಿ ಕೇಂದ್ರ ಪುನರಾರಂಭ
ಕಟಪಾಡಿ: ಕೋವಿಡ್ ನಿಂದ ನಿಂತು ಹೋಗಿದ್ದ ಅಂಗನವಾಡಿ ಕೇಂದ್ರಗಳು ಮತ್ತೆ ಪುನರಾಂಭ ಗೊಂಡಿದ್ದು ವಿಶೇಷ ರೀತಿಯಲ್ಲಿ ಮೂಡಬೆಟ್ಟು ಸರ್ಕಾರಿಗುಡ್ಡೆಯ ಅಂಗನವಾಡಿ ಕೇಂದ್ರ ವನ್ನು ಸ್ಯಾನಿಟೈಸ್ ಮಾಡಿ ಶಾಲೆಯನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ ಮಕ್ಕಳಿಗೆ ಆರತಿ ಬೆಳಗಿಸಿ ಗುಲಾಬಿ ಹೂವು ಕೊಟ್ಟು ಹೂಗಳಿಂದ ವಿಶೇಷ ರೀತಿಯಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ನ ವಾರ್ಡಿನ ಸದಸ್ಯರು ಸ್ವಾಗತಿಸಿದರು.
ಈ ಸಂದರ್ಭ ವಾರ್ಡಿನ ಪಂಚಾಯತ್ ಸದಸ್ಯರಾದ ಪ್ರಭಾಕರ ಆಚಾರ್ಯ ಅವರ ಮುತುವರ್ಜಿಯಿಂದ ಸಮಾಜ ಸೇವಕರಾದ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ ಅವರು ಕೊಡಲ್ಪಟ ಮಕ್ಕಳ ಚೇರ್ ಗಳನ್ನು ಪ್ರಭಾಕರ ಆಚಾರ್ಯ ಅವರು ಅಂಗನವಾಡಿ ಕಾರ್ಯಕರ್ತೆ ಕಾಂತಿ ಟೀಚರ್ ಅವರಿಗೆ ಹಸ್ತಾಂತರಿಸಿದ್ದರು
ಪಂಚಾಯತ್ ಸದಸ್ಯರಾದ ಆಗ್ನೇಸ್ ಡೇಸಾ ಕಾರ್ಯಕ್ರಮ ನಿರ್ವಹಿಸಿದರು, ಬಾಲವಿಕಾಸ ಸಮಿತಿ ಅಧ್ಯಕ್ಷರು ಪೂರ್ಣಿಮಾ ಆಚಾರ್ಯ ಪ್ರಾರ್ಥನೆ ಮಾಡಿದರು ಮಕ್ಕಳ ಪೂಷಕರ ಪರವಾಗಿ ಸುದರ್ಶನ್ ಹಾಗೂ ಸಮಿನ ಮಾತಾಡಿದರು. ಕಾಂತಿ ಟೀಚರ್ ಧನ್ಯವಾದ ನೀಡಿದರು, ಸಿಹಿ ತಿಂಡಿ ಹಂಚಿ ರಾಷ್ಟ್ರ ಗೀತೆ ಹೋಂದಿಗೆ ಕಾರ್ಯಕ್ರಮ ಮುಕ್ತಾಯ ಮಾಡಲಾಯಿತು
ಈ ಸಂದರ್ಭ ವಾರ್ಡಿನ ಪಂಚಾಯತ್ ಸದಸ್ಯರಾದ ಆಗ್ನೇಸ್ ಡೇಸಾ, ಪ್ರಭಾಕರ ಆಚಾರ್ಯ, ಶಾಲಿನಿ ಚಂದ್ರ ಪೂಜಾರಿ , ಆಶಾ ಕಾರ್ಯಕರ್ತೆ ಜಯಶ್ರೀ ಆಚಾರ್ಯ, ಮಕ್ಕಳ ಪೂಷಕರು ಉಪಸ್ಥಿತರಿದರು.