ಕಟೀಲಿನ ಸಂಜೀವನಿ ಆಸ್ಪತ್ರೆಯಲ್ಲಿ ಕೈ ಮತ್ತು ಮೈಕ್ರೋವ್ಯಾಸ್ಕುಲರ್ ತಜ್ಞ ಡಾ. ಭಾಸ್ಕರಾನಂದ್ ಕುಮಾರ್ ಸಂದರ್ಶನಕ್ಕೆ ಲಭ್ಯ

Spread the love

ಕಟೀಲಿನ ಸಂಜೀವನಿ ಆಸ್ಪತ್ರೆಯಲ್ಲಿ ಕೈ ಮತ್ತು ಮೈಕ್ರೋವ್ಯಾಸ್ಕುಲರ್ ತಜ್ಞ ಡಾ. ಭಾಸ್ಕರಾನಂದ್ ಕುಮಾರ್ ಸಂದರ್ಶನಕ್ಕೆ ಲಭ್ಯ

ಕಟೀಲು: ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಕಟೀಲಿನಲ್ಲಿ ಖ್ಯಾತ ಕೈ ಮತ್ತು ಮೈಕ್ರೋವ್ಯಾಸ್ಕುಲರ್ ತಜ್ಞರಾದ ಡಾ. ಭಾಸ್ಕರಾನಂದ್ ಕುಮಾರ್ ರವರು 16ನೇ ಫೆಬ್ರವರಿ 2021 (ಮಂಗಳವಾರ) ರಂದು ಸಂದರ್ಶನಕ್ಕೆ ಲಭ್ಯರಿರುತ್ತಾರೆ.

ಡಾ. ಭಾಸ್ಕರಾನಂದ್ ಕುಮಾರ್ ರವರು ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲದಲ್ಲಿ ಎಲುಬು ಮತ್ತು ಕೀಲು ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ಕೈ ಮತ್ತು ಮೈಕ್ರೋವ್ಯಾಸ್ಕುಲರ್ ವಿಭಾಗದ ಮುಖ್ಯಸ್ಥರಾಗಿ ಹಲವಾರು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಕಟೀಲಿನಲ್ಲಿ 16ನೇ ಫೆಬ್ರವರಿ 2021 (ಮಂಗಳವಾರ) ರಂದು ಬೆಳಿಗ್ಗೆ 10:00 ರಿಂದ ಅಪರಾಹ್ನ 12:30 ರ ವರೆಗೆ ಇವರು ಸಂದರ್ಶನಕ್ಕೆ ಲಭ್ಯರಿದ್ದು ಕೈ ಮತ್ತು ಮೊಣಗಂಟಿನ ಸಮಸ್ಯೆಗಳು, ಗಾಯಗೊಂಡ ಕೈಗಳು, ಜನ್ಮಜಾತ ವೈಪರೀತ್ಯಗಳು, ಪಾಶ್ರ್ವವಾಯುವಿಗೊಳಪಟ್ಟ ಕೈ ಮುಂತಾದ ಸಮಸ್ಯೆಗಳಿರುವವರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಆಸ್ಪತ್ರೆಯ ಪ್ರಕಟಣೆಯು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಮುಂಗಡ ನೋಂದಣಿಗಾಗಿ ದೂರವಾಣಿ ಸಂಖ್ಯೆ 6364872121 ಮತ್ತು 0824-2200022 ಕ್ಕೆ ಕರೆಮಾಡಬಹುದು.


Spread the love