ಕಟ್ಟಡ ಕಾರ್ಮಿಕರ ಕೊರೊನಾ ಖರ್ಚು ವೆಚ್ಚ ಸರ್ಕಾರ ಭರಿಸಲಿ

Spread the love

ಕಟ್ಟಡ ಕಾರ್ಮಿಕರ ಕೊರೊನಾ ಖರ್ಚು ವೆಚ್ಚ ಸರ್ಕಾರ ಭರಿಸಲಿ

ಮೈಸೂರು: ಕೊರೊನಾ ಪೀಡಿತ ಕಟ್ಟಡ ಕಾರ್ಮಿಕರಿಗೆ ಮತ್ತು ಕುಟುಂಬದವರ ಚಿಕಿತ್ಸೆ ವ್ಯವಸ್ಥೆಯನ್ನು ಕಟ್ಟಡ ಕಾರ್ಮಿಕ ಮಂಡಳಿಯೇ ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸಬೇಕೆಂದು ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಕರ್ನಾಟಕ ರಾಜ್ಯ ಶಾಖೆ ಅಧ್ಯಕ್ಷ ಡಾ.ಎಸ್.ಎಸ್. ಪ್ರಕಾಶಂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಳೆದ ಬಾರಿ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ 5 ಸಾವಿರಗಳನ್ನು ಕೊಟ್ಟಿದ್ದು, ಈ ಬಾರಿ 3 ಸಾವಿರ ಗಳನ್ನು ಘೋಷಣೆ ಮಾಡಿದ್ದೀರಿ. ಆದರೆ ಕಾರ್ಮಿಕರಿಗೆ 2ಸಾವಿರ ನಷ್ಟವಾಗಿದೆ ಕೂಡಲೇ ಪ್ರತಿಯೊಬ್ಬ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ 10ಸಾವಿರ ರೂ.ಗಳನ್ನು ಕೊಡಬೇಕೆಂದು ಸಂಘಟನೆಗಳು ಈಗಾಗಲೇ ಹೇಳಿದ್ದೇವೆ. ಆದಷ್ಟು ಬೇಗ ಕೊಡುವಂತೆ ಒತ್ತಾಯಿಸಿದ್ದಾರೆ. ಈ ಹಿಂದೆ ಅಸಂಘಟಿತ ಕಾರ್ಮಿಕರಿಗೆ ಕೋವಿಡ್ ಸಂದರ್ಭದಲ್ಲಿ 3ಸಾವಿರ ರೂ.ಗಳನ್ನು ಕೊಟ್ಟಿದ್ದು, ಬಾಕಿ 2ಸಾವಿರ ರೂ.ಗಳನ್ನು ಘೋಷಣೆ ಮಾಡಿದ್ದು, ಆದರೆ ಅಸಂಘಟಿತ ಕಾರ್ಮಿಕರಿಗೆ 1ಸಾವಿರ ರೂ.ಗಳು ನಷ್ಟವಾಗಿದ್ದು, ಕೂಡಲೇ 10 ಸಾವಿರ ರೂ.ಗಳನ್ನು ಅಸಂಘಟಿತ ಕಾರ್ಮಿಕರಿಗೆ ಕೊಡುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಕಟ್ಟಡ ಕಾರ್ಮಿಕರಿಗೆ 10ಸಾವಿರ ರೂ.ಗಳನ್ನು ನೇರವಾಗಿ ಕಾರ್ಮಿಕನ ಖಾತೆಗೆ ಕೊಟ್ಟು ಅದರ ಜೊತೆಯಲ್ಲಿ ಎಲ್ಲ ಕಾರ್ಮಿಕರಿಗೆ ಉಚಿತ ಲಸಿಕೆಗಳನ್ನು ಮತ್ತು ಸ್ಯಾನಿಟೈಸರ್ ಮಾಸ್ಕ್ ಗಳನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.


Spread the love