ಕಡೂರು: ಪುರಾತನ ಕಾಲದ ದುಬಾರಿ ಟೆಲಿಸ್ಕೋಪ್ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

Spread the love

ಕಡೂರು: ಪುರಾತನ ಕಾಲದ ದುಬಾರಿ ಟೆಲಿಸ್ಕೋಪ್ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ

ಚಿಕ್ಕಮಗಳೂರು: ಪುರಾತನ ವಿಕ್ಟೋರಿಯಾ ರಾಣಿ ಕಾಲದ ಟೆಲಿಸ್ಕೋಪ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಕಡೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ವ್ಯಕ್ತಿಯನ್ನು ಮೈಸೂರು ಹೆಬ್ಬಾಳ ನಿವಾಸಿ ಕೆಂಪರಾಜು @ಕೆಂಪ ಬಿನ್ ಕೆಂಪಯ್ಯ (45) ಎಂದು ಗುರುತಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಐಪಿಎಸ್ ಚಿಕ್ಕಮಗಳೂರು ಜಿಲ್ಲಾ ಪೋಲೀಸ್ ಹೆಚ್ಚುವರಿ ಅಧೀಕ್ಷಕರು ಕೃಷ್ಣಮೂರ್ತಿ ಜಿ ರವರ ಮಾರ್ಗದರ್ಶನದಲ್ಲಿ ಹಾಗು ತರೀಕೆರೆ ಉಪವಿಭಾಗದ ಉಪಾಧೀಕ್ಷಕರಾದ ನಾಗರಾಜ್ ಎನ್ ಮತ್ತು ಕಡೂರು ವೃತ್ತ ನೀರೀಕ್ಷಕರಾದ ಶಿವಕುಮಾರ್ ಕೆ.ಆರ್ ರವರ ಸಾರಥ್ಯದಲ್ಲಿ ಕನ್ನ ಕಳವು ಪುಕರಣಗಳ ಪತ್ತೆಗಾಗಿ ತಂಡ ರಚಿಸಿದ್ದು ತಂಡದಲ್ಲಿ ಕಡೂರು ಪೋಲೀಸ್‌ ಠಾಣಾ ಪಿಎಸ್‌ಐ ಗೋವಿಂದ ನಾಯ್ಕ ಮತ್ತು ಹರೀಶ್ ಆರ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ರಾಜಪ್ಪ ಬೀರೇಶ್‌ ,ದೇವರಾಜ್, ಈಶ್ವರಪ್ಪ ರವರುಗಳು ಜನವರಿ 7 ರಂದು ಕಡೂರು ಪಟ್ಟಣದ ಜೈನ್‌ ಟೆಂಪಲ್ ರಸ್ತೆಯಲ್ಲಿರುವ ಬನಶಂಕರಿ ಟ್ರೇಡರ್ ಬಳಿ ಯಾವೂದೋ ಓಬ್ಬ ವ್ಯಕ್ತಿ ಪುರಾತನ (VICTORIAN MARINE TELESCOPE 1915) ಕಾಲದ ಟೆಲಿಸ್ಕೋಪ್ ನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಬಾತ್ಮೀದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ತಂಡದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿ ಮಾಡಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ವ್ಯಕ್ತಿಯ ಬಳಿ ಇದ್ದ ಬ್ಯಾಗನ್ನು ಪರೀಕ್ಷೀಸಿದಾಗ ಅದರಲ್ಲಿ ಹಿತ್ತಾಳ ಬಣ್ಣದ ಕೊಳವೆಯಂತಹ ವಸ್ತು ಇದ್ದುದು ಕಂಡು ಬಂದಿರುತ್ತದೆ ಸದರಿ ವ್ಯಕ್ತಿಯನ್ನು ವಿಚಾರಿಸಿದಾಗ ಆತನು ತಡವರಿಸುತ್ತಾ ಆತನ ಬಳಿ ಇದ್ದ ಹಸಿರು ಬಣ್ಣದ ಏರ್ ಬ್ಯಾಗ್ ಒಳಗಿದ್ದ ಮರದ ಪೆಟ್ಟಿಗೆ ಟೆಲಿಸ್ಕೋಪ್ ಮಾದರಿಯ ವಸ್ತುವನ್ನು ತೆಗೆದು ಹಾಜರು ಪಡಿಸಿರುತ್ತಾನೆ.

ಸದರಿ ವಸ್ತುವು ಪುರಾತನ ವಿಕ್ಟೋರಿಯಾ ರಾಣಿ ಕಾಲದ ಟೆಲಿಸ್ಕೋಪ್ ತರ ಕಂಡು ಬಂದಿದ್ದು. ಸದರಿ ಟೆಲಿಸ್ಕೋಪ್ ದುಬಾರಿ ಬೆಲೆಯ ವಸ್ತುವಾಗಿರುತ್ತೆ. ನಂತರ ಅದನ್ನು ವಶಪಡಿಸಿಕೊಂಡು ಮೊಕದ್ದಮೆ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.

ಸದರಿ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಪೋಲಿಸ್ ಅಧೀಕ್ಷಕರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.


Spread the love

Leave a Reply

Please enter your comment!
Please enter your name here