ಕಣ್ಣೂರಿನ ನೌಶಾದ್, ಉಳ್ಳಾಲದ ಫೈಝಲ್‌ಗೆ ಚೂರಿ ಇರಿತ ಪ್ರಕರಣ: ಮೂವರು ಆರೋಪಿಗಳ ಬಂಧನ
ಮಂಗಳೂರು: ನಗರ ಹೊರವಲಯದ ಅಡ್ಯಾರ್ ಕಣ್ಣೂರಿನ ನೌಶಾದ್ ಮತ್ತು ಉಳ್ಳಾಲದ ಫೈಝಲ್ ಎಂಬವರಿಗೆ ಶುಕ್ರವಾರ ಮುಂಜಾನೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕೊಣಾಜೆ ಸಮೀಪದ ಮುಡಿಪುವಿನ ಲೋಹಿತಾಶ್ವ (32), ವೀರನಗರದ ಪುನೀತ್ (28), ಕುತ್ತಾರ್‌ನ ಗಣೇಶ್ ಪ್ರಸಾದ್ (23) ಬಂಧಿತ ಆರೋಪಿಗಳಾಗಿದ್ದಾರೆ.
ಈ ದುಷ್ಕರ್ಮಿಗಳು ಶುಕ್ರವಾರ ಮುಂಜಾವ ಅಡ್ಯಾರ್ ಕಣ್ಣೂರಿನಲ್ಲಿ ನೌಶಾದ್ ಗೆ, ತೊಕ್ಕೊಟ್ಟಿನ ಒಳಪೇಟೆಯಲ್ಲಿ ಉಳ್ಳಾಲದ ಫೈಝಲ್‌ಗೂ ಚೂರಿಯಿಂದ ಇರಿದು ಪರಾರಿಯಾಗಿದ್ದರು. ಇದರಿಂದ ಗಾಯಗೊಂಡ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ನೌಶಾದ್‌ಗೆ ಗಂಭೀರ ಗಾಯ ವಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.