ಕಣ್ಣೂರು ಮತ್ತು ಅಡ್ಯಾರ್ ವಲಯ ಬಂಟರ ಸಂಘದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ

Spread the love

ಕಣ್ಣೂರು ಮತ್ತು ಅಡ್ಯಾರ್ ವಲಯ ಬಂಟರ ಸಂಘದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: “ಬಂಟ ಸಮಾಜದವರು ಒಮ್ಮತ – ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ಧಿ ಸಾಧಿಸುವ ಮೂಲಕ ಇತರರ ದುಃಖ-ದುಮ್ಮಾನಗಳಿಗೂ ಸ್ಪಂದಿಸಬೇಕಾಗಿದೆ. ಸಂಘಟನಾತ್ಮಕವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಯಶಸ್ಸು ನಮ್ಮದಾಗುತ್ತದೆ” ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಹೇಳಿದರು.

ನೂತನವಾಗಿ ಅಸ್ತಿತ್ವಕ್ಕೆ ಬಂದ ಬಜಾಲ್ ಅಳಪೆ ಕಣ್ಣೂರು ಮತ್ತು ಅಡ್ಯಾರ್ ವಲಯ ಬಂಟರ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ದೀಪ ಬೆಳಗಿಸುವ ಹಾಗೂ ಭತ್ತ ತುಂಬಿದ ಕಳಸೆಯಲ್ಲಿ ತೆಂಗಿನ ಹೊಂಬಾಳೆಯನ್ನು ಅರಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಯುವ ಜನತೆ ಮುಂದಡಿ ಇಡಬೇಕೆಂದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಂಘದ ಯಾವುದೇ ಚಟುವಟುಕೆಗಳಿಗೆ ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಕಟಿಸಿದರು.

ಸಂಘದ ಅಧ್ಯಕ್ಷ ಯಶೋಧರ ಬಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾ ನಿಧಿ, ಕ್ರೀಡಾನಿಧಿ, ಅಶಕ್ತರ ನಿಧಿ, ದತ್ತುನಿಧಿ ಸಹಿತ ಸಮಾಜದ ಬಡ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಸಂಘ ಕಟಿಬದ್ಧವಾಗಿದೆ. ಸಂಘಕ್ಕೆ ಸುಸಜ್ಜಿತ ಕಟ್ಟಡವೊಂದನ್ನು ನಿರ್ಮಿಸುವ ಯೋಜನೆಯೂ ಪ್ರಸ್ತಾವದಲ್ಲಿದೆ ಎಂದರು.

ಮಂಗಳೂರು ಸ್ವಸ್ತಿಕ್ ನ್ಯಾಶನಲ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಜೇಶ್ವರಿ ಡಿ. ಶೆಟ್ಟಿ ದಿಕ್ಸೂಚಿ ಭಾಷಣ ನೀಡಿದರು. ರಾಷ್ಟ್ರಪತಿ ಪದಕ ಪುರಸ್ಕøತ ಪೊಲೀಸ್ ಅಧಿಕಾರಿ ಪ್ರಕಾಶ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಡವರ ಚಿಕಿತ್ಸೆಗೆ ಹಾಗೂ ವಿದ್ಯಾಭಾಸಕ್ಕೆ ಆರ್ಥಿಕ ನೆರವು ನೀಡಲಾಯಿತು. ಮನಪಾ ನಾಮ ನಿರ್ದೇಶಿತ ಸದಸ್ಯ ಭಾಸ್ಕರಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಬಿಜೆಪಿ ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಕಿರಣ್ ರೈ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಭರತ್ರಾಜ್ ಶೆಟ್ಟಿ, ರಾಮಪ್ರಸಾದ್ ಪೂಂಜ, ಮನೀಷ್ ರೈ, ಸಂಘದ ಪ್ರಧಾನ ಕಾರ್ಯದರ್ಶಿ ಅಮೃತಾ ಶೆಟ್ಟಿ, ಕೋಶಾಧಿಕಾರಿ ಮಾನಸಾ ರೈ, ಮಹಿಳಾ ವಿಭಾಗದ ಅಧ್ಯಕ್ಷೆ ರೇಖಾ ಮನೀಶ್ ರೈ ವೇದಿಕೆಯಲ್ಲಿದ್ದರು.

ಕಟ್ಟಡ ವಿಭಾಗದ ಸಂಚಾಲಕ ಜಗನ್ನಾಥ ಶೆಟ್ಟಿ ಸ್ವಾಗತಿಸಿ ಯುವ ವಿಭಾಗದ ಅಧ್ಯಕ್ಷ ಶೈಲೇಶ್ ಶೆಟ್ಟಿ ಧನ್ಯವಾದವಿತ್ತರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು.


Spread the love