Home Mangalorean News Kannada News ಕತಾರ್ ನಲ್ಲಿ ಸಂಕಷ್ಟದಲ್ಲಿದ್ದ 180 ಭಾರತೀಯರು ದೇಶಕ್ಕೆ ಮರಳಲು ಸಹಕರಿಸಿದ ಕರ್ನಾಟಕ ಸಂಘ

ಕತಾರ್ ನಲ್ಲಿ ಸಂಕಷ್ಟದಲ್ಲಿದ್ದ 180 ಭಾರತೀಯರು ದೇಶಕ್ಕೆ ಮರಳಲು ಸಹಕರಿಸಿದ ಕರ್ನಾಟಕ ಸಂಘ

Spread the love

ಕತಾರ್ ನಲ್ಲಿ ಸಂಕಷ್ಟದಲ್ಲಿದ್ದ 180 ಭಾರತೀಯರು ದೇಶಕ್ಕೆ ಮರಳಲು ಸಹಕರಿಸಿದ ಕರ್ನಾಟಕ ಸಂಘ

ಕತಾರ್: ಇಡೀ ಜಗತ್ತನ್ನು ಕೊರೊನಾ ಮಹಾಮಾರಿ ಕಾಡುತ್ತಿದೆ. ಅದೆಷ್ಟೋ ಮಂದಿ ಬೇರೆ ಬೇರೆ ದೇಶಗಳಲ್ಲಿ ಸಿಲುಕಿ ಸಂಕಷ್ಟ ಪಡುತ್ತಿದ್ದರು. ಹಾಗೆ ಭಾರತ ಮೂಲದ ಒಂದಷ್ಟು ಜನರು ಸಿಲುಕಿಕೊಂಡಿದ್ದಾರೆ. ಅದರಲ್ಲಿ ಕೆಲವು ಕೆಲಸ ಕಳೆದುಕೊಂಡಿದ್ದಾರೆ. ಒಂದಷ್ಟು ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮತ್ತು ಅನ್ನ, ಆಹಾರವಿಲ್ಲದೆ ಪರದಾಡುತ್ತಿದ್ದಾರೆ.

ಅಂಥವರನ್ನು ಭಾರತಕ್ಕೆ ಕಳಿಸುವ ಕೆಲಸವೂ ಭರದಿಂದ ಸಾಗುತ್ತಿದೆ. ಮೊದಲ ಹಂತದಲ್ಲಿ 177 ಜನರನ್ನು ವಂದೇ ಭಾರತ ನಿಯೋಗದ ಸೇವೆಯಡಿ ಮೇ 22ರಂದು ವಿಮಾನದ ಮೂಲಕ ಕತಾರ್ನಿಂದ ಭಾರತಕ್ಕೆ ಕಳುಹಿಸಲಾಗಿತ್ತು. ಆದರೆ ಇನ್ನೂ ಹಲವರು ವಿಮಾನ ಸೇವೆ ಇಲ್ಲದ ಕಾರಣ ಅಲ್ಲಿಯೇ ಉಳಿದಿದ್ದರು

ಇದೀಗ ಕತಾರ್ನಲ್ಲಿರುವ ಕರ್ನಾಟಕ ಸಂಘದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಪರಿಶ್ರಮದಿಂದ ಮತ್ತೂ 180 ಮಂದಿ ಭಾರತಕ್ಕೆ ಬರುವಂತಾಗಿದೆ. ಜೂ.15ರಂದು ಬೆಳಗ್ಗೆ ಕತಾರ್ನ ಹಮಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 180 ಭಾರತೀಯ ಪ್ರಯಾಣಿಕರನ್ನು ಗೋ ಏರ್ ಸಂಸ್ಥೆಯ ವಿಮಾನವನ್ನು ಬಾಡಿಗೆಗೆ ಪಡೆದ ಕತಾರ್ ಕರ್ನಾಟಕ ಸಂಘವು, ಕತಾರ್ ಇತರೆ ಕರ್ನಾಟಕ ಮೂಲದ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ಐಸಿಬಿಎಫ್ (ಭಾರತೀಯ ಸಮುದಾಯ ಹಿತೈಷಿ ವೇದಿಕೆ) ಮತ್ತು ಕತಾರಿನ ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ಈ ಕಾರ್ಯವನ್ನು ನಡೆಸಿದೆ.

ಕತಾರ್ನಿಂದ ಹೊರಟ ಎಲ್ಲರೂ ಬೆಂಗಳೂರು ತಲುಪಿದ ಮೇಲೆ ಎಲ್ಲ ರೀತಿಯ ಸೂಚನೆಗಳನ್ನೂ ಪಾಲಿಸಲು ಒಪ್ಪಿಕೊಂಡಿದ್ದಾರೆ. ಹಾಗೇ ಈ ಕೆಲಸಕ್ಕೆ ಶಿವಮೊಗ್ಗ ಎಂಪಿ ಬಿ.ವೈ.ರಾಘವೇಂದ್ರ ಅವರ ಸಹಕಾರವೂ ಇದೆ ಎಂದು ಕತಾರ್ನಲ್ಲಿರುವ ಕರ್ನಾಟಕ ಸಂಘ ತಿಳಿಸಿದೆ.


Spread the love

Exit mobile version