ಕಥೊಲಿಕ್‌ ಸಭಾ ಉಡುಪಿ ಪ್ರದೇಶ ವತಿಯಿಂದ ನಾಯಕತ್ವ ತರಬೇತಿ ಮತ್ತು ಸಹಮಿಲನ ಕಾರ್ಯಕ್ರಮ

Spread the love

ಕಥೊಲಿಕ್‌ ಸಭಾ ಉಡುಪಿ ಪ್ರದೇಶ ವತಿಯಿಂದ ನಾಯಕತ್ವ ತರಬೇತಿ ಮತ್ತು ಸಹಮಿಲನ ಕಾರ್ಯಕ್ರಮ

ಉಡುಪಿ: ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ವತಿಯಿಂದ ಧರ್ಮಪ್ರಾಂತ್ಯ ವ್ಯಾಪ್ತಿಯ ಘಟಕಗಳ ಪದಾಧಿಕಾರಿಗಳ ನಾಯಕತ್ವ ತರಬೇತಿ ಮತ್ತು ಸಹಮಿಲನ ಕಾರ್ಯಕ್ರಮ ನಗರದ ಡಾನ್‌ ಬೋಸ್ಕೊ ಸಭಾಂಗಣದಲ್ಲಿ ಭಾನುವಾರ ಜರುಗಿತು.

ಸಹಮಿಲನವನ್ನು ಕೆಥೊಲಿಕ್‌ ಸಭಾ ಇದರ ಮಾಜಿ ಕೇಂದ್ರಿಯ ಅಧ್ಯಕ್ಷರಾದ ಆಲ್ಫೋನ್ಸ್‌ ಡಿʼಕೋಸ್ತಾ ಅವರು ಉದ್ಘಾಟಿಸಿ ನಾಯಕತ್ವದ ಗುಣಗಳು ಮತ್ತು ನಾಯಕನಾದವರು ತನ್ನ ಸಮಾಜದಲ್ಲಿ ಯಾವ ರೀತಿಯಲ್ಲಿ ಅದನ್ನು ಪ್ರಚುರಪಡಿಸಬೇಕು ಎನ್ನುವದರ ಕುರಿತು ಸವಿಸ್ಥಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೆಥೊಲಿಕ್‌ ಸಭಾದ ಧ್ಯೇಯ ಮತ್ತು ಉದ್ಧೇಶಗಳ ಕುರಿತು ಮಾಜಿ ಅಧ್ಯಕ್ಷರಾದ ವಾಲ್ಟರ್‌ ಸಿರಿಲ್‌ ಪಿಂಟೊ, ಸಂಘಟನೆಯಲ್ಲಿ ಪದಾಧಿಕಾರಿಗಳ ಕರ್ತವ್ಯಗಳು ಮತ್ತು ಜವಾಬ್ದಾರಿಯ ಕುರಿತು ನಿಯೋಜಿತ ಅಧ್ಯಕ್ಷರಾದ ಸಂತೋಷ್‌ ಕರ್ನೆಲಿಯೋ ಮಾಹಿತಿ ನೀಡಿದರು.

ಕೆಥೊಲಿಕ್‌ ಸಭಾದ ಮುಂದಿನ ಅವಧಿಯ ಕಾರ್ಯಯೋಜನೆಯನ್ನು ಅಧ್ಯಕ್ಷರಾದ ಮೇರಿ ಡಿʼಸೋಜಾ ಮಂಡಿಸಿ, ಮಾಜಿ ಅಧ್ಯಕ್ಷರಾದ ಡಾ|ಜೆರಾಲ್ಡ್‌ ಪಿಂಟೊ ಗುಂಪು ಚಟುವಟಿಕೆ ಮತ್ತು ಸದಸ್ಯರ ಅಭಿಪ್ರಾಯ ಕ್ರೋಡಿಕರಣವನ್ನು ನೆರವೇರಿಸಿದರು. ಕಾರ್ಯಕ್ರಮದ ಸಂಚಾಲಕರಾದ ವಲೇರಿಯನ್‌ ಫೆರ್ನಾಂಡಿಸ್‌ ಅವರು ಮೌಲ್ಯಮಾಪನ ನಡೆಸಿಕೊಟ್ಟರು.

ಕಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್‌ ಗೊನ್ಸಾಲ್ವಿಸ್‌ ಶುಭ ಹಾರೈಸಿದರು. ಕೋಶಾಧಿಕಾರಿ ಜೆರಾಲ್ಡ್‌ ರೊಡ್ರಿಗಸ್‌ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಮೇರಿ ಡಿʼಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಗ್ರೆಗರಿ ಪಿಕೆ ಡಿʼಸೋಜಾ ವಂದಿಸಿದರು. ರೊನಾಲ್ಡ್‌ ಆಲ್ಮೇಡಾ ಕಾರ್ಯಕ್ರಮ ನಿರೂಪಿಸಿದರು.


Spread the love