ಕನಿಷ್ಠ ಆಕ್ರಮಣಕಾರಿ ವಿಧಾನದ ಮೂಲಕ ಗರ್ಭಾಶಯದಿಂದ ಬೃಹತ್ ಫೈಬ್ರಾಯ್ಡ್‍ಗಳನ್ನು ತೆಗೆದ ಎಜೆ ಆಸ್ಪತ್ರೆ 

Spread the love

ಕನಿಷ್ಠ ಆಕ್ರಮಣಕಾರಿ ವಿಧಾನದ ಮೂಲಕ ಗರ್ಭಾಶಯದಿಂದ ಬೃಹತ್ ಫೈಬ್ರಾಯ್ಡ್‍ಗಳನ್ನು ತೆಗೆದ ಎಜೆ ಆಸ್ಪತ್ರೆ 

40 ವರ್ಷ ವಯಸ್ಸಿನ ಮಹಿಳೆ ಕಳೆದ 6 ತಿಂಗಳಿಂದ ಅಸೌಖ್ಯವನ್ನು ಅನುಭವಿಸುತ್ತಿದ್ದರು. ಸುಮಾರು 7-8 ತಿಂಗಳ ಗರ್ಭಿಣಿಯಾಗಿದ್ದ ಅವರು ವೈದ್ಯರೊಂದಿಗೆ ಜ್ವರಕ್ಕಾಗಿ ಸಮಾಲೋಚಿಸಿದಾಗ ಅವರು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದು ಮತ್ತಷ್ಟು ಮೌಲ್ಯಮಾಪನ ಮಾಡಿದಾಗ ಆಕೆಯ ಗರ್ಭಾಶಯದಲ್ಲಿ ಹಲವು ಫೈಬ್ರಾಯ್ಡ್‍ಗಳಿವೆ ಎಂದು ತಿಳಿದುಬಂತು.

ಫೈಬ್ರಾಯ್ಡ್‍ಗಳು ಗಾತ್ರದಲ್ಲಿ ತುಂಬಾ ದೊಡ್ಡದಾಗಿರುವುದರಿಂದ ಅವುಗಳನ್ನು ತೆಗೆದುಹಾಕಲು ತೆರೆದ ಶಸ್ತ್ರಚಿಕಿತ್ಸೆಯನ್ನು ಮಾಡುವುದು ಹಾಗು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ತೀವ್ರವಾದ ರಕ್ತಸ್ರಾವದ ಬಗ್ಗೆ ಎಚ್ಚರಿಕೆ ನೀಡಲಾಯಿತು.

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಡಾ. ಆರ್ಥಿಕ ಶೆಟ್ಟಿಯವರನ್ನು ಭೇಟಿಯಾದ ನಂತರ ಗರ್ಭಾಶಯದ ಗೆಡ್ಡೆಗಳನ್ನು ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ತೆಗೆಯಬಹುದೆಂದು ತಿಳಿದುಬಂತು. ಈ ಸರ್ಜರಿ ಮಾಡುವುದರಿಂದ ರಕ್ತ ಸ್ರವ ಕಡಿಮೆಯಾಗುತ್ತದೆ, ಸೊಂಕು ಅಥವ ಹರ್ನಿಯದ ಭಯವಿರುವುದಿಲ್ಲ, ವೇಗವಾದ ಚೇತರಿಕೆಯೊಂದಿಗೆ ಆಸ್ಪತ್ರೆಯಲ್ಲಿ ವಾಸಿಸುವ ದಿನಗಳು ಕಡಿಮೆಯಾಗುತ್ತದೆ.

ಡಾ. ಗುರುರಾಜ್ ತಂತ್ರಿಯವರ ನೇತೃತ್ವದ ತಂಡವು ಅರಿವಳಿಕೆಯನ್ನು ನೀಡಿ, ಡಾ. ಆರ್ಥಿಕ ಶೆಟ್ಟಿ ಮತ್ತು ಅವರ ತಂಡವು ಶಸ್ತ್ರಚಿಕಿತ್ಸೆಗೆ ಮುಂದಾದರು. ಸುಮಾರು 2 ಕೆ.ಜಿ. ಗಾತ್ರದ ಗರ್ಭಾಶದ ಗೆಡ್ಡೆಗಳನ್ನು ತೆಗೆಯಲಾಯಿತು. ಕಾರ್ಯವಿಧಾನವು ಸುಗಮವಾಗಿ ನಡೆದು 2 ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಯಿತು. ಕನಿಷ್ಠ ಆಕ್ರಮಣಕಾರಿ ವಿಧಾನವನ್ನು ಉಪಯೋಗಿಸಿ ಕರಾವಳಿ ಪ್ರದೇಶದಲ್ಲಿ ಇದೆ ಮೊದಲ ಬಾರಿಗೆ ಇಷ್ಟು ದೊಡ್ಡ ಗಾತ್ರದ ಗೆಡೆಗಳನ್ನು ತೆಗೆಯಲಾಗಿದೆ.

ಫೈಬ್ರಾಯ್ಡ್‍ಗಳು ಗರ್ಭಾಶಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಅಲ್ಲದ ಗೆಡ್ಡೆಗಳಾಗಿವೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಯಾವುದೇ ಸಮಸ್ಯೆಯನ್ನು ಉಂಟುಮಾಡುವುದಿಲ್ಲವಾದರು ಕೆಲವರಲ್ಲಿ ಇದು ಭಾರೀ ಅವಧಿಗಳು, ನೋವಿನ ಅವಧಿಗಳು, ಬಂಜೆತನ ಮರುಕಳಿಸುವ ಗರ್ಭಪಾತಗಳು, ರಕ್ತಹೀನತೆ ಅಥವಾ ದೊಡ್ಡ ಗಾತ್ರದ ಕಾರಣದಿಂದಾಗಿ ಸುತ್ತಮುತ್ತಲಿನ ಅಂಗಗಳ ಮೇಲೆ ಒತ್ತಡ ಉಂಟುಮಾಡಬಹುದು.

ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದದಲ್ಲಿ ಹಲವಾರು ಪ್ರಮುಖ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಇದು ಸ್ತ್ರೀರೋಗ ಲ್ಯಾಪರೊಸ್ಕೋಪಿಕ್ ಪ್ರಕ್ರಿಯೆಗೆ ಉಲ್ಲೇಖಿತ ಕೇಂದ್ರವಾಗಿದೆ. ಇದು ಸುಧಾರಿತ ತಂತ್ರಜ್ಞಾನಗಳು, ರೋಬೋಟಿಕ್ ವ್ಯವಸ್ಥೆಗಳು, ಉಪಕರಣಗಳು ಮತ್ತು ಶಸ್ತ್ರಚಿಕಿತ್ಸಾ ಐಸಿಯುಗಳೊಂದಿಗೆ ಅತ್ಯಾಧುನಿಕ ಆಪರೇಷನ್ ಥಿಯೇಟರ್‍ನ್ನು ಹೊಂದಿದೆ. ಗರ್ಭಾವಸ್ಥೆ ಮತ್ತು ಹೆರಿಗೆಯ ಹೊರತಾಗಿ, ಬಂಜೆತನ ಸೇವೆಗಳು ಮತ್ತು ಎಂಡೊಮೆಟ್ರಿಯೊಸಿಸ್‍ನಂತಹ ಸಂಕೀರ್ಣ ಸ್ತ್ರೀರೋಗ ಸಮಸ್ಯೆಗಳಿಗೆ ಸುಧಾರಿತ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಲಭ್ಯವಿದೆ.


Spread the love