ಕನಿಷ್ಠ 50 ಸಾವಿರ ಅಂತರದಿಂದ ಯಶ್ಪಾಲ್ ಗೆಲುವು ನಿಶ್ಚಿತ – ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

Spread the love

ಕನಿಷ್ಠ 50 ಸಾವಿರ ಅಂತರದಿಂದ ಯಶ್ಪಾಲ್ ಗೆಲುವು ನಿಶ್ಚಿತ – ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ

ಉಡುಪಿ: ಸಾಮಾನ್ಯ ವ್ಯಕ್ತಿಯಾಗಿದ್ದ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿದ್ದಾರೆ. ರೈತನ ಮಗ ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದೇನೆ. ಸಾಮಾನ್ಯ ಕಾರ್ಯಕರ್ತ ಯಶ್ಪಾಲ್ ಸುವರ್ಣ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯಲ್ಲಿ ಮಾತ್ರ ಇದೆಲ್ಲವೂ ಸಾಧ್ಯವಾಗುತ್ತದೆ. ಸಾಮಾನ್ಯ ಕಾರ್ಯಕರ್ತ ಯಶ್ಪಾಲ್ ಅವರಿಗೆ ಕನಿಷ್ಠ 50 ಸಾವಿರ ಅಂತರದಿಂದ ಗೆಲುವು ಲಭಿಸಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದರು.

ಅವರು ಸೋಮವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗ ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣರ ಚುನಾವಣಾ ಪ್ರಚಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಉಡುಪಿಯಲ್ಲಿ ಪ್ರಾರಂಭವಾಗಿದ್ದ ಹಿಜಾಬ್ ವಿವಾದವನ್ನು ಸಮರ್ಥವಾಗಿ ಎದುರಿಸಿದ್ದ ಡ್ಯಾಶಿಂಗ್ ಅಭ್ಯರ್ಥಿ ಯಶ್ಪಾಲ್ ಸುವರ್ಣ. ಅವರೊಂದಿಗೆ ಹಾಲಿ ಶಾಸಕರು ಕೈಜೋಡಿಸಿದ್ದು, ಉಡುಪಿಗೆ ಇಬ್ಬರು ಶಾಸಕರು ಲಭಿಸಿದಂತಾಗಿದೆ. ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿದರು.

ವಿನಾಶಕಾಲೇ ವಿಪರೀತ ಬುದ್ಧಿಃ ಎಂಬಂತೆ ಕಾಂಗ್ರೆಸ್ ಪಕ್ಷ ಬಜರಂಗ ದಳ ನಿಷೇಧಿಸುವ ಪ್ರಸ್ತಾಪ ಮಾಡಿದೆ. ಯಶ್ಪಾಲ್ ಸುವರ್ಣ ಅವರ ಕನಸಿನಂತೆ ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಸ್ಥಾಪನೆಯಾಗುವ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಉದ್ಘಾಟನೆಗೆ ಬರುತ್ತೇನೆ ಎಂದು ಹೇಳಿದರು.

ಅಭ್ಯರ್ಥಿ ಯಶ್ಪಾಲ್ ಸುವರ್ಣ ಮಾತನಾಡಿ, ಎಸ್.ಡಿ.ಪಿ.ಐ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು ಎಂಬುದು ಸಾಭೀತಾಗಿದೆ. ಎಸ್.ಡಿ.ಪಿ.ಐ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಅಪಪ್ರಚಾರಗಳಿಗೆ ಮತದಾರರು ಗಮನಕೊಡದೆ ಬಿಜೆಪಿ ಗೆಲ್ಲಿಸಬೇಕು. ಈ ಚುನಾವಣೆ ಲೋಕಸಭಾ ಚುನಾವನೆಗೆ ದಿಕ್ಸೂಚಿಯಾಗಿದ್ದು, ಮೋದಿ ಕೈ ಬಲಪಡಿಸಬೇಕು ಎಂದರು.

ಉಡುಪಿ ನಗರದ ಸರ್ವೀಸ್ ಬಸ್ ನಿಲ್ದಾಣದಿಂದ ಕೆ.ಎಂ. ಮಾರ್ಗ, ಕೋರ್ಟ್ ರಸ್ತೆ, ಜೋಡುಕಟ್ಟೆಯ ಮೂಲಕ ಅಜ್ಜರಕಾಡು ಹುತಾತ್ಮ ಸ್ಮಾರಕದವರೆಗೆ ಅದ್ದೂರಿ ರೋಡ್ ಶೋ ನಡೆಯಿತು. ಮೆರವಣಿಗೆಯಲ್ಲಿ ಚೆಂಡೆ ಕುಣಿತ, ಹನುಮ ವೇಷಧಾರಿಗಳು ಗಮನ ಸೆಳೆದರು. ಸಭೆಯ ಆರಂಭಕ್ಕೂ ಮುನ್ನ ಹುತಾತ್ಮ ಸ್ಮಾರಕ್ಕೆ ತೆರಳಿ ಏಕನಾಥ್ ಶಿಂದೆ ಗೌರವ ಸಮರ್ಪಿಸಿದರು.

ವೇದಿಕೆಯಲ್ಲಿ ಮಹಾರಾಷ್ಟ್ರದ ಸಂಸದ ರಾಹುಲ್ ಶೇವಡೆ, ಕಾರ್ಪೋರೇಟರ್ ಸಂತೋಷ್ ಎಂ.ಶೆಟ್ಟಿ, ಬಿಜೆಪಿ ನಾಯಕ ನರೇಶ್ ಮಸ್ಕಿ, ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಶಾಸಕ ರಘುಪತಿ ಭಟ್, ನಗರ ಅಧ್ಯಕ್ಷ ಮಹೇಶ್ ಠಾಕೂರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ, ಜಿಲ್ಲಾ ಮಹಿಳಾಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here