ಕನ್ನಡಿಗನ ಪರ ತೀರ್ಪಿತ್ತ ಗೋವಾ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ

Spread the love

ಕನ್ನಡಿಗನ ಪರ ತೀರ್ಪಿತ್ತ ಗೋವಾ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ

ಪಣಜಿ: ಮೀನು ಮರಿಗಳ ಖರೀದಿ ವಿಚಾರದಲ್ಲಿ ಕನ್ನಡಿಗನೋರ್ವನ ಪರ ಗೋವಾ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ತೀರ್ಪು ನೀಡಿದೆ.

ದೂರುದಾರರು ಗೋವಾ ರಾಜ್ಯದ ಮಡಗಾ0ವ್ ನ ನಿವಾಸಿಯಾಗಿದ್ದು, ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕು ಕೋಡಿ ಗ್ರಾಮದ ಮೀನು ಸಾಕಣಿಕೆ ಉದ್ಯಮಿಯಿಂದ ಸುಮಾರು ₹2,40,000/- ರೂಪಾಯಿ ಮೌಲ್ಯದ 2,000 ಕೆ0ಬೇರಿ (Red Snapper Fish) ಮೀನಿನ ಮರಿಗಳನ್ನು ಖರೀದಿಸಿ ಗೋವಾದ ಮಡಗಾಂವ್ ಗೆ ತಲುಪಿಸುವಂತೆ ಎದ್ರುದಾರರಿಗೆ ಸೂಚಿಸಿ ಅದಕ್ಕೆ ತಗಲುವ ವೆಚ್ಚವನ್ನು ಪಾವತಿಸಿದ್ದರು.

ಎದ್ರುದಾರರು ಸದ್ರಿ ಮೀನಿನ ಮರಿಗಳನ್ನು ಕುಂದಾಪುರದಿಂದ ಮಡಗಾಂವ್ ಗೆ ತಲುಪಿಸುವಾಗ ದಾರಿಯಲ್ಲಿ ಮೀನಿನ ಮರಿಗಳು ಸತ್ತು ಹೋಗಿದ್ದವು. ದೂರುದಾರರು ತನ್ನ ಹಣವನ್ನು ವಾಪಾಸು ನೀಡುವ0ತೆ ಎದ್ರುದಾರರನ್ನು ಕೇಳಿದ್ದು ಎದ್ರುದಾರರು ವಾಪಾಸು ನೀಡಿರಲಿಲ್ಲ. ಈ ಬಗ್ಗೆ ತನಗಾದ ಆರ್ಥಿಕ ನಷ್ಟ, ಮಾನಸಿಕ ವೇದನೆ, ವ್ಯವಹಾರಕ್ಕಾದ ನಷ್ಟ ಹಾಗೂ ಇತರ ಖರ್ಚು ಸೇರಿ ₹5,00,000/- ಪರಿಹಾರ ಕೋರಿ ದೂರುದಾರರು ಮಡಗಾಂವ್ ನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ಎದ್ರುದಾರರ ವಿರುದ್ಧ ದೂರು ಸಲ್ಲಿಸಿದ್ದರು.

ವಾದ ವಿವಾದವನ್ನು ಆಲಿಸಿದ ಮಡಗಾಂವ್ ನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ದೂರುದಾರರ ದೂರನ್ನು ವಜಾಗೊಳಿಸಿ ರೂಪಾಯಿ 15,000/- ದ0ಡ ವಿಧಿಸಿ ಎದ್ರುದಾರರಿಗೆ ಪಾವತಿಸುವ0ತೆ ಆದೇಶಿಸಿತ್ತು.

ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಆದೇಶದ ವಿರುದ್ದ ದೂರುದಾರರು ಗೋವಾ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ವಾದ ವಿವಾದವನ್ನು ಆಲಿಸಿದ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಮೇಲ್ಮನವಿದಾರರ ಮೇಲ್ಮನವಿಯನ್ನು ತಿರಸ್ಕರಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಆದೇಶವನ್ನು ಎತ್ತಿ ಹಿಡಿದು ಅದೇಶಿಸಿದೆ.

ಎದ್ರಿದಾರರ ಪರವಾಗಿ ಜಿಲ್ಲಾ ಹಾಗೂ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದಲ್ಲಿ ಕು0ದಾಪುರದ ವಕೀಲರಾದ ಶ್ಯಾಮ್ ಸು0ದರ್ ನಾಯರಿ ಹಾಗೂ ನೀಲ್ ಬ್ರಿಯಾನ್ ಪಿರೇರಾರವರು ವಾದಿಸಿದ್ದರು.


Spread the love