ಕನ್ನಡ ಸಂಘ ಅಲ್ ಐನ್ 22ನೇ ವಾರ್ಷಿಕೋತ್ಸವದಲ್ಲಿ ಡಾ. ಬಿ. ಆರ್. ಶೆಟ್ಟಿಯವರಿಗೆ “ಗಲ್ಫ್ ಕನ್ನಡ ವಿಭೂಷಣ ಪ್ರಶಸ್ತಿ”
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೊನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿ ಅಲ್ ಐನ್ ಸಂಘ ಸಹ ಒಂದಾಗಿದೆ. ಕಳೆದ ಎರದು ದಶಕಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತಿದ್ದೆ. 2025ನೇ ಸಾಲಿನ 22ನೇ ವಾರ್ಷಿಕೋತ್ಸವ ಹಾಗೂ ಸ್ನೇಹಮಿಲನ ಕಾರ್ಯಕ್ರಮ 26ನೇ ತಾರೀಕಿನಂದು ರಾಡಿಸ್ಸನ್ ಬ್ಲೂ ಹೋಟೆಲ್ ಸಭಾಂಗಣದಲ್ಲಿ ವಿಜೃಂಬಣೆಯಿAದ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಯು.ಎ.ಇ. ಹಿರಿಯ ಉದ್ಯಮಿ ಡಾ. ಬಿ. ಆರ್. ಶೆಟ್ಟಿಯವರನ್ನು ಗೌರವ ಪೂರ್ವಕವಾಗಿ ಅಲ್ ಐನ್ ಕನ್ನಡ ಸಂಘ ಮಹಿಳಾ ವಿಭಾಗದ ಸದಸ್ಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು. ಗೌರವ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಶ್ರೀ ಸರ್ವೋತ್ತಮ ಶೆಟ್ಟಿಯವರು ಮತ್ತು ಅಲ್ ಐನ್ ಜೂನಿಯರ್ ಸ್ಕೂಲ್ ನ ಮುಖ್ಯಸ್ಥರು ಶ್ರೀ ಅರ್ಶದ್ ಶರೀಫ್ ಹಾಗೂ ಬಿನ್ ಡಾರ್ವಿಶ್ ಗ್ರೂಪ್ ನ ಮುಖ್ಯಸ್ಥರು ಶ್ರೀ ಮಹ್ಮದ್ ಇಬ್ರಾಹಿಂ, ಐ.ಎಸ್.ಸಿ. ಅಲ್ ಐನ್ ಅಧ್ಯಕ್ಷರು ಶ್ರೀ ರಸ್ಸೆಲ್ ಹಾಗೂ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ಸತೀಶ್ ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಹಾಗೂ ಅಲ್ ಐನ್ ಕನ್ನಡ ಸಂಘದ ಮುಖ್ಯ ಸಂಘಟಕರಾಗಿರುವ ಶ್ರೀ ವಿಮಲ್ ಕುಮಾರ್ ಮತ್ತು ಕಾರ್ಯಕಾರಿ ಸಮಿತಿಯವರು ಬರಮಾಡಿಕೊಂಡರು.
ಡಾ. ಬಿ. ಆರ್. ಶೆಟ್ಟಿಯವರಿಗೆ “ಗಲ್ಫ್ ಕನ್ನಡ ವಿಭೂಷಣ ಪ್ರಶಸ್ತಿ” ಪ್ರದಾನ
ಯು.ಎ.ಇ. ಹಿರಿಯ ಉದ್ಯಮಿ ಲಕ್ಷಾಂತರ ಕುಟುಂಬಗಳಿಗೆ ಅನ್ನದಾತರು, ಕರ್ನಾಟಕ ಪರ ಸಂಘಟನೆಗಳ ಮಹಾಪೋಷಕರು, ಮಾನವ ಹಿತೈಷಿ ಡಾ. ಬಿ.ಆರ್.ಶೆಟ್ಟಿಯರ ಜೀವಮಾನದ ಸಾಧನೆಗಾಗಿ ಅಲ್ ಐನ್ ಕನ್ನಡ ಸಂಘ “ಗಲ್ಫ್ ಕನ್ನಡ ವಿಭೂಷಣ ಪ್ರಶಸ್ತಿ” ಪ್ರದಾನಿಸಿ ಗೌರವಿಸಲಾಯಿತು.
ಅಲ್ ಐನ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ವೈದ್ಯರಿಗೆ ಸನ್ಮಾನ ಗೌರವ
ಯು.ಎ.ಇ.ಯ ಅಲ್ ಐನ್ ವಿಭಾಗದಲ್ಲಿ ಕಳೆದ ಹಲವು ದಶಕಗಳಿಂದ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತುತಿರುವ ಕನ್ನಡಿಗ ವೈದ್ಯರುಗಳ ಸೇವೆಯನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಲಾಯಿತು. ಎನ್.ಎಂ.ಸಿ. ಸ್ಪೆಷಾಲಿಟಿ ಆಸ್ಪಿಟಲ್ ವೈದ್ಯರುಗಳು ಡಾ. ಹರ್ಷ ಪಳಂಗAಡ, ಡಾ. ಶ್ರೀಪತಿ ಆಚಾರ್, ಡಾ ಉದಯಕುಮಾರ್ ಪಡುಬಿದ್ರಿ, ಡಾ ಅಬ್ದುಲ್ ಮುಜೀರ್, ಡಾ ಬೃಂದಾ ಲಕ್ಷಿ÷್ಮÃನರಸಿಂಹ, ಡಾ ರಭಿಯಾ ಮನ್ಸೂರ್, ಡಾ ಗಣೇಶ್ ನಾಯಕ್, ಡಾ ಅಮೀತ್ ನರಗುಂದ್, ಡಾ ಮಾಧವ, ಡಾ ಗೋಪಾಲ್. ನ್ಯೂ ಯೂನಿವರ್ಸಿಟಿ ಡೆಂಟಲ್ ಕ್ಲಿನಿಕ್ – ಡಾ ಶರತ್ ಚಂದ್ರೆಗೌಡ, ತವಾಮ್ ಹಾಸ್ಪಿಟಲ್- ಡಾ ಸತೀಶ್ ರುದ್ರಪ್ಪ, ಬುರ್ಜಿಲ್ ರಾಯಲ್ ಹಾಸ್ಪಿಟಲ್ ಅಶ್ರೆಜ್ – ಡಾ ದಿವ್ಯತಾ ಜಯರಾಮ್, ನ್ಯೂ ಸಲಾಂ ಸೆಂಟರ್ ಫಾರ್ ಅರ್ಥೊಡಾಂಟಿಕ್ಸ್ ಅನ್ದ್ ಡೆಂಟಲ್ – ಡಾ ಸೋನಿಯಾ ಭಟ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಲ್ ಐನ್ ವಿಭಾಗದ ಅಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್ ಗಳಿಗೆ ಸನ್ಮಾನ
ಬುರ್ಜಿಲ್ ರಾಯಲ್ ಹಾಸ್ಪಿಟಲ್ – ರಶ್ಮಿತಾ, ಏಮಿರೇಟ್ಸ್ ಇಂಟರ್ನ್ಯಾಶನಲ್ ಹಾಸ್ಪೀಟಲ್ – ಸಿಲ್ವಿಯಾ ಕ್ಯಾರೊಲ್ ಮೆಂಡೊನ್ಸಾ, ಎಂ42 – ಅಕ್ಷತಾ ಶೇಖರ್, ಮೆಡಿಕ್ಲಿನಿಕ್ ಆಸ್ಪಿಟಲ್ ಅಲ್ ಐನ್ – ರೋಶನಿ ರೀನಾ ಪಿರೇರಾ, ಎಸ್ಟಿಎಂಸಿ ತವಾಮ್ – ಥೆರೆಸಾ ಕ್ಯುಲೋ, ರಾಯಲ್ ಕೇರ್ ಮೆಡಿಕಲ್ ಸೆಂಟರ್ – ಶೈಲೇಶ್, ಎನ್.ಎಂ.ಸಿ. ಸ್ಪೆಸಾಲಿಟಿ ಹಾಸ್ಪಿಟಲ್ – ಪ್ರೆçತಿ ಒಲಿವೆರಾ ಮೆಂಡೊನ್ಸಾ, ಎಸ್ಟಿಎಂಸಿ – ಲೀಲಮ್ಮ, ಸಿಲ್ವಿಯಾ ಮೆಂಡೊನ್ಸಾ, ತವಾಮ್ ಹಾಸ್ಪಿಟಲ್ – ಡೈಸಿ ವೀಣಾ ಡಿಸೋಜಾ, ಮೆಡಿಕ್ಲಿನಿ ಅಲ್ ಜೌರಾ – ವನಿಶ್ರೀ ಪೂಜಾರಿ, ಝಾಯಿದ್ ಮಿಲಿಟರಿ ಹಾಸ್ಪಿಟಲ್ – ವಿಲ್ಸನ್ ಸೆರಾವೋ, ರಾಯಲ್ ಕೇರ್ ಮೆಡಿಕಲ್ ಸೆಂಟರ್ – ನಂದೀಶ ಗುರುಸ್ವಾಮಿ, ಬುರ್ಜಿಲ್ ರಾಯಲ್ ಹಾಸ್ಪಿಟಲ್- ಸೀಮಾ ಹೆನ್ಸಿ ಡಿಸೋಜಾ,ಅಲ್ ಐನ್ ಹಾಸ್ಪಿಟಲ್- ಸೈಮನ್ ಗ್ಲೆವಿನ್ ಫೆರ್ನಾಂಡಿಸ್, ಮೆಡಿಕ್ಲಿನಿಕ್ ಅಲ್ ಐನ್ – ಸ್ಟೆಲ್ಲಾ ಥೋಮಸ್ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ ಸೋನಿಯಾ ಭಟ್ ರವರಿಗೆ “ವರ್ಷದ ಕನ್ನಡಿಗ ಪ್ರಶಸ್ತಿ”
ಕನ್ನಡ ಸಂಘ ಅಲ್ ಐನ್ ಸದಸ್ಯರಿಗೆ ಪ್ರತಿವರ್ಷ ನೀಡಲಾಗುವ “ವರ್ಷದ ಕನ್ನಡಿಗ ಪ್ರಶಸ್ತಿ”ಯನ್ನು 2025ನೇ ಸಾಲಿನಲ್ಲಿ ಡಾ ಸೋನಿಯಾ ಭಟ್ ರವರಿಗೆ ನೀಡಿ ಗೌರವಿಸಲಾಯಿತು.
ಶ್ರೀ ನೊಯಲ್ ಡಿ ಅಲ್ಮೆಡಾ ರವರಿಗೆ ಗಲ್ಫ್ ಕ್ರೀಡಾ ರತ್ನ ಪ್ರಶಸ್ತಿ
ಕರ್ನಾಟಕ ಸಂಘ ಶಾರ್ಜಾದ ಪೂರ್ವ ಅಧ್ಯಕ್ಷರು, ಯು.ಎ.ಇ.ಯಲ್ಲಿ ಕಳೆದ ಮೂರು ದಶಕಗಳಿಂದ ಮಹಿಳಾ ಥ್ರೋಬಾಲ್, ಪುರುಷರ ಥ್ರೋಬಾಲ್, ವಾಲಿಬಾಲ್, ಕಬಡ್ಡಿ, ಇನ್ನಿತರ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಆಯೊಝಿಸಿಕೊಂದು ಬರುತ್ತಿದ್ದು ಕ್ರೀಡಾ ಕ್ಶೇತ್ರದಲ್ಲಿ ಸಲ್ಲಿಸಿರುವ ಸೇವೆಗಾಗಿ ಗಲ್ಫ್ ಕ್ರೀಡಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ವಿವಿದ ಸಾಂಸ್ಕöÈತಿಕ ಕಾರ್ಯಕ್ರಮಗಳು, ಹಾಸ್ಯ ಪ್ರಹಸನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ, ಇನ್ನಿತರ ರಸಪ್ರಶ್ನೆ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.
ಕನ್ನಡ ಸಂಘ ಅಲ್ ಐನ್ ಮುಖ್ಯ ಸಂಘಟಕರಾಗಿರುವ ಶ್ರೀ ವಿಮಲ್ ಕುಮಾರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಶ್ರೀಯುತರುಗಳಾದ ರಮೇಶ್ ಕುಮಾರ್, ಡಾ ಪ್ರದೀಪ್, ವಿಕಾಶ್ ಶೆಟ್ಟಿ, ದೇವಿಪ್ರಸಾದ್, ವಿನೋದ್ ಮಥಾಯಸ್, ನಿತಿನ್, ಶ್ರೀಧರ್, ಶ್ರೀಮತಿ ದಿವ್ಯ ಶಶಿ, ಶಿಲ್ಪಾ ನಂಜುAಡಸ್ವಾಮಿ, ಸಮೀನಾ ಫಾರೂಕ್, ಡಾ. ದಿವ್ಯತಾ ಇವರೆಲ್ಲರುಗಳ ಪೂರ್ಯ ತಯಾರಿಯೊಡಿಗೆ ನಡೆದ ಕಾರ್ಯಕ್ರಮ ಭಾಷೆ ಹಲವು ನಾಡು ಒಂದೇ ಘೋಷಾ ವಾಕ್ಯದೊಂದಿಗೆ ಕನ್ನಡದಿಂದ ಒಲವು, ಒಗ್ಗಟಿನಿಂದ ಗೆಲವು ಎಂಬ ಶೀರ್ಷಿಕೆಯೊಂದಿಗೆ ಆಯೋಜಿಸಿದ್ದ ಸ್ನೇಹ ಮಿಲನ 2025 ಯಶಸ್ವಿಯಾಗಿ ನಡೆಯಿತು.