ಕನ್ನರ್ಪಾಡಿ ಶ್ರೀ ಜಯದುರ್ಗಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆ  

Spread the love

ಕನ್ನರ್ಪಾಡಿ ಶ್ರೀ ಜಯದುರ್ಗಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿ ರಚನೆ  

ಉಡುಪಿ: ಕನ್ನರ್ಪಾಡಿ ಜಯದುರ್ಗಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸಂಜಯ್, ಬಿನ್. ಕಿಟ್ಟಿ, ಲೇಬರ್ ಕಾಲೋನಿ, ಕನ್ನರ್ಪಾಡಿ, ಕಡೆಕಾರ್. ಸುರೇಖಾ ಕೆ. ಶೆಟ್ಟಿ, ಕೋಂ. ಕುಶಾಲ್ ಶೆಟ್ಟಿ, ವಡ್ಡಾಡಿ ಮನೆ, ಕಿನ್ನಿಮುಲ್ಕಿ, ಕಡೆಕಾರು ಗ್ರಾಮ. ವಿಮಲಾ ಎಸ್. ಶೇಟ್, ಕೋಂ. ಎನ್. ಶ್ರೀನಿವಾಸ್ ಶೇಟ್, ಶ್ರೀ ಮಹಾಲಾಸ, ವೀರಭದ್ರ ಕಲಾಭವನದ ಹಿಂದೆ, ಗರಡಿ 6ನೇ ಕ್ರಾಸ್, ಕಿನ್ನಿಮುಲ್ಕಿ, ಉಡುಪಿ. ರಾಘವೇಂದ್ರ ಭಟ್, ಬಿನ್, ಸುಬ್ರಹ್ಮಣ್ಯ ಭಟ್, “ಪ್ರಶಸ್ತಿ” ಕಡೆಕಾರು ರಸ್ತೆ, ಅಂಬಲಪಾಡಿ, ಕನ್ನರ್ಪಾಡಿ ಉಡುಪಿ. ವಿಜಯ ಭಟ್, ಬಿನ್. ರಮಾಕಾಂತ್ ಭಟ್, ಅಭಿನಯ ಕುಂಜ್, ಕಡೆಕಾರು ಶಾಲೆಯ ಹತ್ತಿರ, ಕಡೆಕಾರು ಗ್ರಾಮ. ಭಗವಾನ್ ದಾಸ್ ಕೆ., ಬಿನ್. ಎಸ್. ವಿಠಲ ಶೆಟ್ಟಿಗಾರ್, ದಾಸಪ್ರಭ, ಬಡಗುಬೆಟ್ಟು, ಬಲೈಪಾದೆ, ಉಡುಪಿ. ನಿತ್ಯಾನಂದ ಆರ್. ಕನ್ನರ್ಪಾಡಿ, ಬಿನ್. ರಾಮ ಪೂಜಾರಿ, ಜಯದುರ್ಗ ದೇವಾಲಯದ ಬಳಿ, ಕನ್ನರ್ಪಾಡಿ, ಕಡೆಕಾರು ಗ್ರಾಮ, ಉಡುಪಿ. ಕಿಶೋರ್ ಕುಮಾರ್, ಲೇಟ್ ಬೊಗ್ರ ಶೇರಿಗಾರ್, ಮಾತ್ರಚಾಯೆ, ಕನ್ನರ್ಪಾಡಿ ಕಡೆಕಾರು. ಉಡುಪಿ ತಾಲೂಕಿನ ನಿವಾಸಿಗಳಾದ ಇವರನ್ನು ಅರ್ಹತೆಯೊಂದಿಗೆ ವ್ಯವಸ್ಥಾಪನಾ ಸಮಿತಿಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ವ್ಯವಸ್ಥಾಪನಾ ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯೆಂದು ನೇಮಿಸಲಾಗಿದೆ.

ನೂತನ ವ್ಯವಸ್ಥಾಪನ ಸಮಿತಿಗೆ ಶಾಸಕ ರಘುಪತಿ ಭಟ್ ಅವರು ಅಭಿನಂದನೆ ಸಲ್ಲಿಸಿ ನೂತನ ವ್ಯವಸ್ಥಾಪನ ಸಮಿತಿಯ ಆಡಳಿತದಲ್ಲಿ ದೇವಸ್ಥಾನವು ಅಭಿವೃದ್ಧಿ ಹೊಂದಿಲಿ ಎಂದು ಹಾರೈಸಿದ್ದಾರೆ.


Spread the love