
ಕಪಿಲಾ ಗೋಶಾಲೆ ಕೆಡವಿದವರಿಗೆ ಅಕ್ರಮ ಕಸಾಯಿಖಾನೆ ಮುಚ್ಚುವ ಧೈರ್ಯ ಇದೆಯೇ? – ಯೋಗೀಶ್ ಇನ್ನಾ
ಕಾರ್ಕಳ: ಕಪಿಲಾ ಗೋಶಾಲೆ ಕೆಡವಿದವರಿಗೆ ಅಕ್ರಮ ಕಸಾಯಿಖಾನೆ ಮುಚ್ಚುವ ಧೈರ್ಯ ಇದೆಯೇ ಎಂದು ಕಾರ್ಕಳ ಯುವ ಕಾಂಗ್ರೇಸ್ ಅಧ್ಯಕ್ಷ ಯೋಗೀಶ್ ಇನ್ನಾ ಪ್ರಶ್ನಿಸಿದ್ದಾರೆ.
ಹಿಂದೂ-ಹಿಂದುತ್ವ ಅಂತ ಹೇಳಿಕೊಂಡು ಹಿಂದೂಗಳಿಂದ ಮತ ಪಡೆದು ನಮ್ಮ ಪವಿತ್ರವಾದ ಗೋಮಾತೆಯನ್ನು ಬೀದಿಗೆ ತರುವ ಪರಿಸ್ಥಿತಿಗೆ ತಂದತಹ ಸರ್ಕಾರದ ಪ್ರತಿನಿಧಿ ಆಗಲಿ.. ವ್ಯಕ್ತಿಯಾಗಲಿ ಮುಂದಿನ ದಿನಗಳಲ್ಲಿ ಇವರನ್ನು ನಂಬುವುದಾದರೂ ಹೇಗೆ. ಮರವೂರಿನ ಕಪಿಲ ಗೋ ಶಾಲೆಯ 300 ಗೋವುಗಳಿಗೆ ರಕ್ಷಣೆ ಯಾರು ? ಇದೇನಾ ಬಿಜೆಪಿ ಸರ್ಕಾರ ಗೋವುಗಳಿಗೆ ನೀಡುವ ರಕ್ಷಣೆ ಎಂದು ಅವರು ಪ್ರಶ್ನಿಸಿದ್ದಾರೆ.
ಸುಡುವ ಬಿಸಿಲಲ್ಲಿ ಕೊರೆಯುವ ಚಳಿಯಲ್ಲಿ ಹಸುಗಳು ಅಕ್ಷರಶಃ ಅನಾಥವಾಗಿ ಮೂಕಾರೋಧನೆಗೈಯ್ಯುತ್ತಿವೆ. ಹಿಂದುತ್ವದ ಭದ್ರಕೋಟೆಯಲ್ಲಿ ಇಂತಹ ಪರಿಸ್ಥಿತಿ ಗೋಮಾತೆಗೆ ಬಂದಿದೆ ಎಂದರೆ ಈ ಬಿಜೆಪಿಗರ ಕಪಟ ಹಿಂದುತ್ವ ಯಾವ ರೀತಿಯದ್ದು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು
ಬಿಜೆಪಿ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಹಿಂದುತ್ವವನ್ನು ಯಾವ ರೀತಿ ಉಪಯೋಗಿಸಿಕೊಂಡು ತಮ್ಮ ಸ್ವಾರ್ಥಸಾಧನೆಗೈಯ್ಯುತ್ತಿದ್ದಾರೆ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಇಂತಹ ಪಕ್ಷವನ್ನು ಒದ್ದೋಡಿಸುವ ಕೆಲಸವನ್ನು ಜಾತ್ಯಾತೀತವಾಗಿ ನಡೆಸಿಕೊಡಬೇಕಾಗಿದೆ.
ಎಲ್ಲಾ ಗೋವುಗಳನ್ನು ಬಿಜೆಪಿಯ ಸಂಸದರು ಶಾಸಕರುಗಳು ಜನಪ್ರತಿನಿಧಿಗಳ ಮನೆಮುಂದೆ ಕಟ್ಟಿ ಬನ್ನಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ