
ಕಬ್ಬಿಣದ ಕಾಲಂ ಬಾಕ್ಸ್ ಮತ್ತು ಸೆಂಟ್ರಿಂಗ್ ಶೀಟ್ ಕಳ್ಳತನಕ್ಕೆ ಯತ್ನ ಓರ್ವನ ಬಂಧನ
ಮಂಗಳೂರು: ಕಬ್ಬಿಣದ ಕಾಲಂ ಬಾಕ್ಸ್ ಗಳನ್ನು ಮತ್ತು ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳ್ಳತನ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೂಡಬಿದ್ರೆ ನಿವಾಸಿ ಇಲಿಯಾಸ್ ಮೊಹಮ್ಮದ್ (23) ಎಂದು ಗುರುತಿಸಲಾಗಿದೆ
ದಿನಾಂಕ:26-08-2023 ರಂದು ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಸಂತೋಷ್ ಕುಮಾರ್ ಡಿ ರವರು ಠಾಣಾ ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ವಿಶೇಷ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಬೆಳಗ್ಗಿನ ಜಾವ 06-00 ಗಂಟೆಯ ಸಮಯಕ್ಕೆ ಪಿಲಿಕೂರು ಕಡೆಯಿಂದ ಕೆ.ಸಿ ರೋಡ್ ಕಡೆಗೆ ರಿಟ್ ಕಾರು ನಂಬ್ರ KA-20-MA- 5021 ಮತ್ತು ಪಿಕಪ್ ವಾಹನ ನಂಬ್ರ KA-18-83575 ನೇಯು ಬರುತ್ತಿದ್ದ ಸಮಯ ಸಂಶಯಗೊಂಡು ಸದ್ರಿ ಕಾರು ಮತ್ತು ಪಿಕಪ್ ವಾಹನವನ್ನು ನಿಲ್ಲಿಸಿದಾಗ, ಶೆಟ್ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಅದರಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಓಡಿ ಹೋಗಿರುತ್ತಾರೆ, ಪೀಪ್ ವಾಹನವನ್ನು ಅದರ ಚಾಲಕ ನಿಲ್ಲಿಸಿದ್ದು, ಆತನನ್ನು ವಿಚಾರಿಸಿದಾಗ ಆತನ ಹೆಸರು: ಇಲಿಯಾಸ್ ಅಮೊಹಮ್ಮದ್ ಇಲಿಯಾಸ್ (23 ವರ್ಷ) , ವಾಸ: ಜೋಡಾ ಮೂಡಬಿದ್ರೆ ಎಂಬುವುದಾಗಿ ತಿಳಿಸಿದ್ದು, ಸದ್ರಿ ಪಿಕಪ್ ವಾಹನವನ್ನು ಚೆಕ್ ಮಾಡಿದಾಗ ಅದರಲ್ಲಿ ಸುಮಾರು 120 ಕಬ್ಬಿಣದ ಸೆಂಟ್ರಿಂಗ್ ಶೀಟ್, ಮತ್ತು 3 ಸೆಟ್ ಕಬ್ಬಿಣದ ಕಾಲಂ ಬಾಕ್ಸ್ ಗಳಿದ್ದು ಇದ್ದು, ಈ ಸೊತ್ತುಗಳ ಬಗ್ಗೆ ವಿಚಾರಿಸಿದಾಗ ಸೆಂಟ್ರಿಂಗ್ ಶೀಟ್ ಗಳನ್ನು ದಿನಾಂಕ 07-08-2023 ರ ರಾತ್ರಿ ಶೂಲ್ಯದಲ್ಲಿ ನಿರ್ಮಾಣ ಹಂತದ ಕಟ್ಟಡದ ಎದುರಿನಿಂದ ಹಾಗೂ ಕಬ್ಬಿಣದ ಕಾಲಂ ಬಾಕ್ಸ್ ಗಳನ್ನು ಸುಮಾರು ಒಂದೂವರೆ ತಿಂಗಳ ಹಿಂದೆ ಪನೀರು ಎಂಬಲ್ಲಿಂದ ನಾನು ಮತ್ತು ಮೂಡಬಿದ್ರೆ ತೋಡಾರಿನ ಮೊಹಮ್ಮದ್ ಸಾಹಿಲ್ ಹಾಗೂ ತೋಡಾರಿನ ಹಂಝ ಸೇರಿ ಕಳ್ಳತನ ಮಾಡಿ ಪಿಕ್ ಅಪ್ ನಲ್ಲಿ ತುಂಬಿಸಿ ಕೂಡಲೇ ಮಾರಾಟ ಮಾಡಿದಲೇ ಪೊಲೀಸರಿಗೆ ಸಿಕ್ಕಿ ಬೀಳಬಹುದೆಂಬ ಭಯದಿಂದ ಕಬ್ಬಿಣದ ಕಾಲಂ ಬಾಕ್ಸ್ ಗಳನ್ನು ಮತ್ತು ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳನ್ನು ಪಿಲಿಕೂರಿನ ನಿರ್ಜನ ಪ್ರದೇಶವೊಂದರಲ್ಲಿಟ್ಟು, ಈ ದಿನ ಬೆಳಿಗ್ಗೆ ಎಲ್ಲಿಯಾದರೂ ತೆಗೆದುಕೊಂಡು ಹೋಗಿ ಮಾರಾಟ ಮಾಡುವೆ ಎಂದು ಕೊಂಡು ಹೋಗುತ್ತಿರುವುದಾಗಿಯೂ ರಿಟ್ ಕಾರಿನಿಂದ ಕೆಳಗಿಳಿದು ಓಡಿ ಹೋದವರ ಬಗ್ಗೆ ವಿಚಾರಿಸಿದಾಗ ಅವರುಗಳು ನನ್ನೊಂದಿಗೆ ಇದ್ದ ಹಂಝ ಹಾಗೂ ಮೊಹಮ್ಮದ್ ಶಾಹಿಲ್ ಎಂದು ತಿಳಿಸಿರುತ್ತಾನೆ.
ಆರೋಪಿಗಳಿಂದ ಸ್ವಾಧೀನಪಡಿಸಿಕೊಂಡ 120 ಕಬ್ಬಿಣದ ಸೆಂಟ್ರಿಂಗ್ ಶೀಟ್ ಗಳ ಒಟ್ಟು ಮೌಲ್ಯ ರೂ 2,50,000-00, 3 ಸೆಟ್ ಕಬ್ಬಿಣದ ತಾಲಲ ಬಾಕ್ಸ್ ಗಳ ಮೌಲ್ಯ ರೂ 1,25,000, ಪಿಕಪ್ ವಾಹನದ ಮೌಲ್ಯ ರೂ 3,00,000 ಮತ್ತು ರಿಟ್ ಕಾರಿನ ಮೌಲ್ಯ ರೂ 3,00,000 ಆಗಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 9,75,000 ಆಗಿರಬಹುದು. ಈ ಬಗ್ಗೆ ಉಳ್ಳಾಲ ಪೊಲೀಸು ಠಾಣೆಯಲ್ಲಿ ಆ.ಕ್ರ 99-2023, ಕಲಂ 379 ಐಪಿಸಿ ಮತ್ತು ಆಕ್ರ 124-2023, ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಕುಲದೀಪ್ ಜೈನ್, ಐಪಿಎಸ್, ಅಂಶು ಕುಮಾರ್, ಐಪಿಎಸ್, ಡಿಸಿಪಿ (ಕಾ&ಸು), ದಿನೇಶ್ ಕುಮಾರ್ ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ) ಮತ್ತು ದಕ್ಷಿಣ ಉಪವಿಭಾಗದ ಎಸಿಪಿ ಶ್ರೀಮತಿ ಧನ್ಯ ನಾಯಕ್ ರವರ ಮಾರ್ಗದರ್ಶನದಲ್ಲಿ ಆರೋಪಿ ಪತ್ತೆ ಕಾರ್ಯಕ್ಕೆ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸಂದೀಪ್.ಜೆ.ಎಸ್ ರವರ ನೇತೃತ್ವದಲ್ಲಿ ಪೊಲೀಸ್ ಉಪನಿರೀಕ್ಷಕರುಗಳಾದ ಶ್ರೀ ಸಂತೋಷ್ ಕುಮಾರ್ ಡಿ, ಕೃಷ್ಣ ಕೆ ಎಚ್, ಶೀತಲ್ ಅಲಗೂರ್, ಧನರಾಜ್ ಎಸ್, ಎ.ಎಸ್.ಐ ಶೇಖರ ಗಟ್ಟಿ ಮತ್ತು ಸಿಬ್ಬಂದಿಗಳಾದ ರಂಜಿತ್ ಕುಮಾರ್, ಅಶೋಕ್, ವಿನೋದ್ ಕುಮಾರ್, ಮಂಜುನಾಥ್, ಅನಂದ ಬಡಗಿ, ರಿಯಾಜ್ ಇವರುಗಳು ಭಾಗವಹಿಸಿರುತ್ತಾರೆ.