ಕಬ್ಬು ಕಟಾವು ಮಾಡದ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ

Spread the love

ಕಬ್ಬು ಕಟಾವು ಮಾಡದ ಕಾರ್ಖಾನೆ ವಿರುದ್ಧ ರೈತರ ಆಕ್ರೋಶ

ಚಾಮರಾಜನಗರ: ಬಣ್ಣಾರಿ ಅಮ್ಮನ್ ಶುಗರ್ ಕಾರ್ಖಾನೆಯು ರೈತರು ಬೆಳೆದ ಕಬ್ಬನ್ನು ಸಮಯಕ್ಕೆ ಸರಿಯಾಗಿ ಕಟಾವು ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರೈತರು ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಕೆಲವರು ಟವರ್ ಏರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬ್ಬಿನ ಕಟಾವು ಬೆಲೆಯನ್ನು ಗದ್ದೆಯಿಂದ ಗದ್ದೆಗೆ ಹೆಚ್ಚು ಮಾಡುತ್ತಿದ್ದಾರೆ ಹಾಗೂ ಗದ್ದೆಯಿಂದ ರಸ್ತೆಗೆ ಸಾಗಣೆ ಮಾಡಲು ದುಬಾರಿ ವ್ಯಚ್ಚವಾಗುತ್ತಿದೆ. ಇದರಿಂದ ರೈತರಿಗೆ ತುಂಬ ನಷ್ಟವಾಗುತ್ತಿದೆ ಹಾಗೂ ಕಾರ್ಖಾನೆಯು ಕಬ್ಬನ್ನು ಸಮಯಕ್ಕೆ ಸರಿಯಾಗಿ ಕಾಟಾವು ಮಾಡದೆ ರೈತರನ್ನು ಸತಾಯಿಸಿ ಶೋಷಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರೈತ ಮುಖಂಡ ಹೊನ್ನೂರು ಪ್ರಕಾಶ್ ರೈತರು ಇಷ್ಟು ಸಂಕಷ್ಟದಲ್ಲಿದ್ದರೂ ಸರ್ಕಾರ ಹಾಗೂ ಸರ್ಕಾರ ಮಂತ್ರಿಗಳು ಶಾಸಕರು ಯಾರೂ ರೈತರ ಕಷ್ಟವನ್ನು ಕೇಳುತ್ತಿಲ್ಲ‌, ರೈತರ ಜೊತೆ ಮಾತುಕತೆಗೆ ಬರುತ್ತಿಲ್ಲ ಈ ಮೂಲಕ ಸರ್ಕಾರ ರೈತವಿರೋಧಿತನವನ್ನು ಪ್ರದರ್ಶಿಸುತ್ತಿದೆ ಎಂದು ಸರ್ಕಾರದ ಸಚಿವರು ಮತ್ತ ಶಾಸಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಜಗದೀಶ. ಎಪಿಎಂಸಿ ನಾಗರಾಜು, ಗೌಡಳ್ಳಿ ಮೂರ್ತಿ, ಸೋಮಣ್ಣ ಶೇಖರಶೆಟ್ಟಿ, ಹಾಗೂ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು


Spread the love