ಕಮಿಷನ್‌ ಸರ್ಕಾರ ಗಂಗೊಳ್ಳಿ ಬಂದರಿನಲ್ಲಿ‌ ಮುಳುಗಿದೆ: ಸಿದ್ದರಾಮಯ್ಯ ಲೇವಡಿ

Spread the love

ಕಮಿಷನ್‌ ಸರ್ಕಾರ ಗಂಗೊಳ್ಳಿ ಬಂದರಿನಲ್ಲಿ‌ ಮುಳುಗಿದೆ: ಸಿದ್ದರಾಮಯ್ಯ ಲೇವಡಿ

ಬೆಂಗಳೂರು: ಗಂಗೊಳ್ಳಿಯ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ನಡೆಯುತ್ತಿರುವ ಜೆಟ್ಟಿ ನಿರ್ಮಾಣ ಕಾರ್ಯದ ವೇಳೆ ಜೆಟ್ಟಿ ಭಾಗ ಕುಸಿತಕ್ಕೊಳಗಾಗಿದೆ. 150 ಮೀಟರಿಗೂ ಅಧಿಕ ಜೆಟ್ಟಿ ಕುಸಿದಿದ್ದು, ಕಮಿಷನ್‌ ಸರ್ಕಾರ ಗಂಗೊಳ್ಳಿ ಬಂದರಿನಲ್ಲಿ‌ ಮುಳುಗಿದೆ: ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು ರಾಜ್ಯದ 40% ಕಮೀಷನ್ ಸರ್ಕಾರ ಇಂದು ಕುಂದಾಪುರ ತಾಲೂಕಿನ ಗಂಗೊಳ್ಳೀ ಬಂಧರಿನಲ್ಲಿ ಮುಳುಗಿದೆ. 12 ಕೋಟಿ ರೂಪಾಯಿ ವೆಚ್ಚದ ಜಟ್ಟಿ ನಿರ್ಮಾಣ ಹಂತದಲ್ಲೇ ನದಿ ನೀರಿನ ಪಾಲಾಇದೆ. ಈ ಕಾಮಗಾರಿಯಲ್ಲಿ ಗುತ್ತಿಗೆದಾರ ಬಿಜೆಪಿ ಕರ್ನಾಟಕಗೆ ನೀಡಿದ್ದ ಕಮೀಷನ್ ಎಷ್ಟು? ಎನ್ನುವ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.


Spread the love