ಕರಾವಳಿ ಉತ್ಸವ ಉದ್ಘಾಟನೆ: ವಾಹನ ಸಂಚಾರ, ಪಾರ್ಕಿಂಗ್ ಕುರಿತು ಪ್ರಕಟಣೆ
ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ:20-12-2025 ರಂದು ಸಂಜೆ ಸುಮಾರು 5-00 ಗಂಟೆಗೆ ಮಂಗಳೂರು ನಗರದ ಕರಾವಳಿ ಮೈದಾನದಲ್ಲಿ ನೆರವೇರಲಿದೆ. ನಂತರ ದಿನಾಂಕ: 02-01-2026 ರವರೆಗೆ ಸಂಜೆ ವೇಳೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿರುತ್ತದೆ. ಸದರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳು ಸೇರಲಿದ್ದು, ಈ ಸಮಯ ನಗರದ ಕೆಲವೊಂದು ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ದಟ್ಟಣೆ ಉಂಟಾಗುವ ಸಾಧ್ಯತೆಗಳು ಇರುತ್ತದೆ.
- ಲಾಲ್ ಭಾಗ್ನಿಂದ ಕರಾವಳಿ ಮೈದಾನದ ವರೆಗಿನ ರಸ್ತೆಯ ಎರಡು ಬದಿಗಳಲ್ಲಿ ಯಾವುದೇ ವಾಹನಗಳನ್ನುಪಾರ್ಕ್ ಮಾಡುವಂತಿಲ್ಲ.
- ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗಧಿಪಡಿಸಿದ ಸ್ಥಳಗಳಲ್ಲಿ ಮಾತ್ರ ನಿಲ್ಲಿಸತಕ್ಕದ್ದು.
- ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆಯ ಸೂಚನಾ ಫಲಕದ ಪ್ಲಾಕ್ಸ್ಗಳನ್ನು ಅಳವಡಿಸಿದ್ದು, ಮಾರ್ಗಸೂಚಿಯನ್ನು ಅನುಸರಿಸುವುದು.
1.ಉರ್ವ ಮಾರ್ಕೆಟ್ ಮೈದಾನ – ಕಾರು
- ಗಾಂಧಿನಗರ ಸರಕಾರಿ ಶಾಲೆ (ಪ್ರೆಸ್ ಕ್ಲಬ್ನ ಬಳಿ) – ದ್ವಿಚಕ್ರ / ಕಾರು
- ಲೇಡಿಹಿಲ್ ಚರ್ಚ್ ಪಾರ್ಕಿಂಗ್ – ದ್ವಿಚಕ್ರ / ಕಾರು
- ಕೆನರಾ ಸ್ಕೂಲ್ ಮೈದಾನ, ಮಣ್ಣಗುಡ್ಡೆ – ದ್ವಿಚಕ್ರ / ಕಾರು
- ತಿಮ್ಮಪ್ಪ ಹೋಟೆಲ್ ಅವರಣ – ದ್ವಿಚಕ್ರ / ಕಾರು
- ಸೈಟ್ & ಗೈಡ್ ಹಾಲ್ ಅವರಣ (ಕರಾವಳಿ ಮೈದಾನ ಹಿಂಭಾಗ) – ದ್ವಿಚಕ್ರ
- ಉರ್ವ ಮಾರ್ಕೆಟ್ ರಸ್ತೆ – ದ್ವಿಚಕ್ರ
- ಹ್ಯಾಟ್ ಹಿಲ್ ರಸ್ತೆ – ದ್ವಿಚಕ್ರ
ಸದರಿ ಕಾರ್ಯಕ್ರಮಗಳ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾದ್ಯತೆಗಳು ಇರುವುದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿ.
