ಕರಾವಳಿ ಭಾಗದ ಜನರಿಗೆ ಜನಸ್ನೇಹಿ ಬಜೆಟ್ ನೀಡಿದ ಸಿದ್ದರಾಮಯ್ಯ – ರಮೇಶ್ ಕಾಂಚನ್

Spread the love

ಕರಾವಳಿ ಭಾಗದ ಜನರಿಗೆ ಜನಸ್ನೇಹಿ ಬಜೆಟ್ ನೀಡಿದ ಸಿದ್ದರಾಮಯ್ಯ – ರಮೇಶ್ ಕಾಂಚನ್

ಉಡುಪಿ: ಕರಾವಳಿ ಭಾಗದ ಜನರಿಗೆ ಹಿಂದೆಂದು ಕಂಡರಿಯದ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅಭಿನಂದಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಬೀಚ್ ಪ್ರವಾಸೋದ್ಯಮ ಕಾರ್ಯಪಡೆಯನ್ನು ರಚಿಸಲಾಗುವುದು ಹಾಗೂ ಕಡಲ ತೀರದ ಸಮಗ್ರ ಅಭಿವೃದ್ಧಿಗಾಗಿ ವಿಸ್ತೃತ ಯೋಜನೆಯನ್ನು ತಯಾರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು ಪ್ರಮುಖ ಅಂಶ. ಅಲ್ಲದೆ, ಪ್ರವಾಸಿ ತಾಣಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಯಾತ್ರಿನಿವಾಸ/ಡಾರ್ಮಿಟರಿಗಳನ್ನು ನಿರ್ಮಾಣ ಮಾಡುವುದರಿಂದ ಕರಾವಳಿ ಭಾಗದ ಜನರಿಗೂ ಲಾಭವಾಗಲಿದೆ. ಗೋವಾ ಮಾದರಿಯಲ್ಲಿ ಬೀಚ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದರೆ ಕರಾವಳಿ ಭಾಗವು ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಶ್ರೀಮಂತವಾಗುತ್ತದೆ.

ಪಾರಂಪರಿಕ ಬೀಚ್ಗಳಲ್ಲದೆ ಹೊಸ ಸಾಧ್ಯತೆಗಳೊಂದಿಗೆ ಸುರಕ್ಷಿತವಾದ ಕಡಲ ಕಿನಾರೆಯನ್ನು ಶೋಧಿಸಿ ಅಲ್ಲಿ ಬೇಕಾದ ಮೂಲಸೌಕರ್ಯಗಳನ್ನು ಉತ್ತೇಜಿಸುವುದರ ಮೂಲಕ ಗರಿಷ್ಠ ಮಟ್ಟಿನ ಪ್ರವಾಸಿಗರನ್ನು ಬೇಸಗೆ ಕಾಲದಲ್ಲಿ ಆಕರ್ಷಿಸಬಹುದು. ಹೋಟೆಲ್ನಿಂದ ಹಿಡಿದು ಸಣ್ಣ ಆಟಿಕೆಗಳನ್ನು ಮಾರುವವರೆಗೆ ಇದರಿಂದ ಲಾಭವಾಗುತ್ತದೆ. ಜೊತೆಗೆ ಸುರಕ್ಷಿತ ಬೀಚ್ಗಳಾದ ಪಡುಬಿದ್ರಿಯಂತೆ ಎಲ್ಲ ಬೀಚ್ಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಾಕಷ್ಟು ಬಾರಿ ಚರ್ಚೆಗಳು ನಡೆಸಿದ್ದರು. ಬೀಚ್ ಪ್ರವಾಸೋದ್ಯಮಕ್ಕೆ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್ನಲ್ಲಿ ಪ್ರಸ್ತಾಪ ಮಾಡಿರುವುದು ಈ ಎಲ್ಲ ಕನಸುಗಳು ಚಿಗುರೊಡೆಯಲು ಕಾರಣವಾಗಿದೆ. ಅದರಲ್ಲೂ ಕರ್ನಾಟಕ ಕರಾವಳಿಯ ಬೀಚ್ಗಳಾದ ಮಂಗಳೂರು, ಮಲ್ಪೆ, ಪಡುಬಿದ್ರಿ, ಕಾಪು, ಕುಂದಾಪುರ, ಮುರುಡೇಶ್ವರ, ಗೋಕರ್ಣ ಮತ್ತು ಕಾರವಾರವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಗೊಳಿಸುವ ಕುರಿತು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಪಡೆ ನಿರ್ಮಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವುದು ಸಂತಸ ತಂದಿದೆ. ಮೀನುಗಾರರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಮೀನುಗಾರಿಕೆ ದೋಣಿಗಳಿಗೆ ಡೀಸೆಲ್ ಮಿತಿಯು 1.5ಲಕ್ಷ ಕಿಲೋ ಲೀಟರ್ನಿಂದ 2.5 ಲಕ್ಷ ಕಿಲೋ ಲೀಟರ್ವರೆಗೆ ಏರಿಕೆ ಮಾಡಲಾಗಿದೆ. ಮೀನುಗಾರಿಕೆ ದೋಣಿಯು ಸೀಮೆಎಣ್ಣೆ ಇಂಜಿನ್ನಿಂದ ಪೆಟ್ರೋಲ್, ಡೀಸೆಲ್ ಇಂಜಿನ್ ಬಡಲಾವಣೆಗೆ ಸರ್ಕಾರದಿಂದ 50 ಸಾವಿರ ನೆರವು. ಸಿಗಡಿ ಉತ್ಪನ್ನಗಳ ಮೌಲ್ಯವರ್ಧನೆಗೆ ಉತ್ತಮ ಮಾರುಕಟ್ಟೆ ನಿರ್ಮಾಣದ ಭರವಸೆ ನೀಡಿರುವುದು ಮೀನುಗಾರರ ಪರ ಇರುವ ಕಾಳಜಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋರಿಸಿದ್ದಾರೆ.

ಕರಾವಳಿ ಭಾಗದ ಜನರಿಗೆ ಜನಸ್ನೇಹಿ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ನನ್ನ ಮನಃಪೂರ್ವಕ ಅಭಿನಂದೆನೆಗಳು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love