ಕರ್ತವ್ಯದಲ್ಲಿ ಶೇಷ್ಠತೆಯನ್ನು ಕಂಡುಕೊಳ್ಳಿ – ಪೊಲೀಸ್ ಕಾನ್ಸ್ಟೇಬಲ್ ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ ಜಗದೀಶ್ ಸಲಹೆ

Spread the love

ಕರ್ತವ್ಯದಲ್ಲಿ ಶೇಷ್ಠತೆಯನ್ನು ಕಂಡುಕೊಳ್ಳಿ – ಪೊಲೀಸ್ ಕಾನ್ಸ್ಟೇಬಲ್ ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ ಜಗದೀಶ್ ಸಲಹೆ

ಉಡುಪಿ: ಕರ್ತವ್ಯದ್ಲಲಿ ಶೇಷ್ಠತೆಯನ್ನು ಕಂಡುಕೊಳ್ಳುವ ಮೂಲಕ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.

ಅವರು ಬುಧವಾರ ನಗರದ ಚಂದು ಮೈದಾನದಲ್ಲಿ 12ನೇ ಪೊಲೀಸ್ ಕಾನ್ಸ್ಟೆಬಲ್ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪೊಲೀಸ್ ಸೇವೆ ಎನ್ನುವುದು ಒಂದು ಅತ್ಯುನ್ನತ ಸೇವೆಯಾಗಿದ್ದು ರಾಷ್ಟ್ರ ಕಟ್ಟುವ ಕಾಯಕದಲ್ಲಿ ಕೈಜೋಡಿಸುವ ಪೊಲೀಸರಿಗೆ ಅಭಿನಂದನೆಗಳು. ಸೇವೆಗೆ ಸೇರಿದ ಮೇಲೆ ಹಿಂದೆ ಇದ್ದ ಮನೋವೃತ್ತಿಯನ್ನು ಬದಲಾಯಿಸದೆ ಜನರ ನೋವಿಗೆ ದನಿಯಾಗುವಂತೆ ಅವರು ಕರೆ ನೀಡಿದರು.

ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಚಂದ್ರ ವರದಿ ವಾಚಿಸಿ ಒಳಾಂಗಣ ವಿಷಯಕ್ಕೆ ಸಂಬಂಧಿಸಿದಂತೆ ಈ ಘಟಕದಲ್ಲಿರುವ ಅಧಿಕಾರಿಗಳೊಗೊಂಡಂತೆ ಹೊರಗಿನ ಅತಿಥಿ ಉಪನ್ಯಾಸಕರನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿಕೊಂಡು ಬೋಧನೆ ನೀಡಲಾಗಿದೆ. ಹೊರಾಂಗಣ ವಿಷಯಗಳಿಗೆ ಸಂಬಂಧಿಸಿದಂತೆ ಕೋವಿಡ್ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಯೋಗ, ಧ್ಯಾನ, ಕರಾಟೆ, ಶಾರೀರಿಕ ವ್ಯಾಯಾಮ, ಒನ್ ಮಿನಿಟ್ ಡ್ರಿಲ್, ರೋಡ್ ವಾಕ್ ಅಂಡ್ ರನ್, ಅಡೆತಡೆಗಳ ಜಿಗಿತ, ಅಯುಧಗಲ ಜೊತೆ ಕವಾಯತು, ಅಯುಧಗಳ ಇಲ್ಲದೆ ಮಾಡುವ ಕವಾಯತು, ಫೈರಿಂಗ್ ಅಭ್ಯಾಸ, ಕ್ರೌಡ್ ಕಂಟೋಲ್, ಫೈರಿಂಗ್ ಹಾಗೂ ಅಶ್ರುವಾಯುಗಳ ಬಗ್ಗೆ ಬೋಧನೆ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಗಿದೆ. ಪ್ರಶಿಕ್ಷಣಾರ್ಥಿಗಳಿಗೆ ಮನೋರಂಜನೆ ಮತ್ತು ಮನೋವಿಕಾಸಕ್ಕಾಗಿ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ತರಬೇತಿ ಬಿಡುವಿನ ಸಮಯದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಸ್ವಾಗತಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಕಾರ್ಕಳ ಉಪ ವಿಭಾಗದ ಅಧಿಕ್ಷಕರಾದ ಭರತ್ ರೆಡ್ಡಿ ವಂದಿಸಿದರು. ಡಿ ಎ ಆರ್ ಡಿವೈಎಸ್ಪಿ ರಾಘವೇಂದ್ರ ಪ್ರಮಾಣ ವಚನ ಭೋದಿಸಿದರು, ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಪರೇಡ್ ಕಮಾಂಡರ್ ಸಂತೋಷ್ ಕಪ್ಪಲಗುದ್ದಿ ನೇತೃತ್ವದಲ್ಲಿ ನಿರ್ಗಮನ ಪಥಸಂಚಲನ ಆಕರ್ಷಕವಾಗಿ ಮೂಡಿಬಂದಿತು.


Spread the love

Leave a Reply

Please enter your comment!
Please enter your name here