ಕರ್ತವ್ಯದ ವೇಳೆಯಲ್ಲೇ ಮಂಗಳೂರು ಸಿಸಿಬಿ ಪೊಲೀಸರ ಎಣ್ಣೆಪಾರ್ಟಿ, ತನಿಖೆಗೆ ಆದೇಶ ನೀಡಿದ ನಗರ ಕಮೀಷನರ್

Spread the love

ಕರ್ತವ್ಯದ ವೇಳೆಯಲ್ಲೇ ಮಂಗಳೂರು ಸಿಸಿಬಿ ಪೊಲೀಸರ ಎಣ್ಣೆಪಾರ್ಟಿ, ತನಿಖೆಗೆ ಆದೇಶ ನೀಡಿದ ನಗರ ಕಮೀಷನರ್

ಮಂಗಳೂರು: ಕರ್ತವ್ಯದ ಸಮಯದಲ್ಲಿ ಬಾರಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಎಣ್ಣೆ ಪಾರ್ಟಿ ನಡೆಸಿದ ವಿಡಿಯೋ ಇದೀಗ ವೈರಲ್ ಆಗಿದ್ದು, ಸಿಸಿಬಿ ಘಟಕ 8 ಸಿಬ್ಬಂದಿಯವರ ಮೇಲೆ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಸಿಸಿಬಿ ಘಟಕದ ಸಿಬ್ಬಂದಿಯವರು ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಿದ ವ್ಯಕ್ತಿಯ ಜೊತೆ ಬಾರ್ನಲ್ಲಿ ಕುಳಿತು ಊಟ ಮಾಡಿದ ಹಾಗೂ ಆ ವ್ಯಕ್ತಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಸಂಬಂಧಿಸಿದಂತೆ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವೀಡಿಯೋ ವೈರಲ್ ಆದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ತನಿಖೆಗೆ ಆದೇಶ ನೀಡಿದ್ದು, ಈ ಘಟನೆಯಲ್ಲಿ ಭಾಗಿಯಾದ ಸಿಸಿಬಿ ಘಟಕ 8 ಸಿಬ್ಬಂದಿಯವರನ್ನು ತಕ್ಷಣದಿಂದ ಸಿಸಿಬಿ ಘಟಕದಿಂದ ನಗರ ಕಮೀಷನರೇಟ್ನ ಬೇರೆ ಬೇರೆ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ.

ಅಲ್ಲದೆ ಈ ಪ್ರಕರಣದಲ್ಲಿ ಒಳಗೊಂಡ ಸಿಬ್ಬಂದಿಯವರ ವಿರುದ್ಧ ಹೆಚ್ಚುವರಿ ಇಲಾಖಾ ವಿಚಾರಣೆಯನ್ನು ಕೈಗೊಂಡು ಕೂಲಂಕುಶ ವಿಚಾರಣಾ ವರದಿಯನ್ನು ಸಲ್ಲಿಸುವಂತೆ ಹರಿರಾಮ್ ಶಂಕರ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ಮಂಗಳೂರು ನಗರ ರವರಿಗೆ ಆದೇಶಿ ನೀಡಿದ್ದಾರೆ..


Spread the love