ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಆರೋಪ – ಇಬ್ಬರ ಬಂಧನ

Spread the love

ಕರ್ತವ್ಯ ನಿರತ ಪೊಲೀಸ್‌ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಆರೋಪ – ಇಬ್ಬರ ಬಂಧನ

ಮಂಗಳೂರು: ಪೊಲೀಸ್‌ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕದ್ರಿ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಗಳನ್ನು ಮ್ಯಾಕ್ಷಿಂ ಜೊಸೇಫ್‌ ನೊರೊನ್ಹಾ (54) ಮತ್ತು ಡ್ಯಾನಿ ಪೌಲ್‌ ಎಂದು ಗುರುತಿಸಲಾಗಿದೆ.

ಕದ್ರಿ ಠಾಣೆಯ ಪೊಲೀಸ್‌ ಸಿಬ್ಬಂದಿಗಳಾದ ಬೀರೆಂದ್ರ ಮೇಟಿ ಮತ್ತು ಶಿವಾನಂದ ಡಿಟಿ ಜನವರಿ 18 ರಂದು ಕರ್ತವ್ಯ ಮುಗಿಸಿ ತಮ್ಮ ವಸತಿಗೃಹದ ಕಡೆಗೆ ತೆರಳುತ್ತಿದ್ದ ವೇಳೆ ಯೆಯ್ಯಾಡಿ ಜಂಕ್ಷನ್‌ ಬಳಿ ಕಾರನಿನಲ್ಲಿದ್ದ ಮ್ಯಾಕ್ಷಿಮ್‌ ಮತ್ತು ಡ್ಯಾನಿ ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್‌ ಸಿಬ್ಬಂದಿಗಳ ಸಮವಸ್ತ್ರವನ್ನು ಎಳೆದು ಅವಾಚ್ಯ ಶಬ್ದದಿಂದ ಬೈದು ಬೆದರಿಕೆ ಹಾಕಿದ್ದು ಪೊಲೀಸ್‌ ಪೇದೆಗಳು ನೀಡಿದ ದೂರಿನಂತೆ ಕದ್ರಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

ಕದ್ರಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

 


Spread the love