ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮೇಲೆ ತಲವಾರು ದಾಳಿ

Spread the love

ಕರ್ತವ್ಯ ನಿರತ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಮೇಲೆ ತಲವಾರು ದಾಳಿ

ಮಂಗಳೂರು:  ವಾಹನ ತಪಾಸಣೆ ಮಾಡುತ್ತಿದ್ದ ಹೆಡ್ ಕಾನ್ಸ್ಟೇಬಲ್ ಒರ್ವರ ಮೇಲೆ   ದುಷ್ಕರ್ಮಿಯೋರ್ವ ಹಾಡುಹಗಲೇ ತಲವಾರು ಬೀಸಿದ‌ ಘಟನೆ ಮಂಗಳೂರಿನಲ್ಲಿ‌ ನಡೆದಿದೆ.

ಬಂದರ್ ಠಾಣೆಯ ಹೆಡ್‌ ಕಾನ್‌ಸ್ಟೇಬಲ್ ಗಣೇಶ ಕಾಮತ್ ತಲವಾರು ದಾಳಿಗೊಳಗಾದ ಪೊಲೀಸ್.

ಘಟನೆಯು ನಗರದ ರಥಬೀದಿ ಸಮೀಪದ ಚಿತ್ರಮಂದಿರವೊಂದರ ಬಳಿ‌ ನಡೆದಿದ್ದು, ಹೆಡ್‌ಕಾನ್‌ಸ್ಟೇಬಲ್ ಗಣೇಶ ಇಬ್ಬರು ಸಿಬ್ಬಂದಿ ಜೊತೆ ವಾಹನಗಳ ತಪಾಸಣೆಯಲ್ಲಿ‌ ನಿರತರಾಗಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಅಪರಿಚಿತ ದುಷ್ಕರ್ಮಿಯೋರ್ವ ಮುಖ್ಯ ಪೇದೆ ಗಣೇಶ ಕಾಮತ್‌ ರಿಗೆ ತಲವಾರಿನಿಂದ ಹಲ್ಲೆಗೈದಿದ್ದಾನೆ. ಕಾಮತ್ ಅವರ ಕೈಗೆ ಬಲವಾದ ಏಟು ಬಿದ್ದಿದ್ದು, ಕೂಡಲೇ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರು ಉತ್ತರ   ಪೊಲೀಸರು‌ ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ.


Spread the love