Home Mangalorean News Kannada News ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ನಿಷೇಧ

ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ನಿಷೇಧ

Spread the love

ಕರ್ನಾಟಕದಲ್ಲಿ ಶಾಲಾ-ಕಾಲೇಜುಗಳ ಸುತ್ತಮುತ್ತ ಜಂಕ್ ಫುಡ್ ನಿಷೇಧ

ಬೆಂಗಳೂರು: ಕರ್ನಾಟಕದ   ಶಾಲೆ ಹಾಗೂ ಪಿಯು ಕಾಲೇಜುಗಳ 50 ಮೀಟರ್ ಸುತ್ತಳತೆಯಲ್ಲಿ ಜಂಕ್ ಫುಡ್​ಗಳ ಮಾರಾಟವನ್ನ ಆಹಾರ ಸುರಕ್ಷತಾ ಇಲಾಖೆ ಸಂಪೂರ್ಣವಾಗಿ ನಿಷೇಧಿಸಿದೆ.

ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್   ಮಹತ್ವದ ಘೋಷಣೆ ಮಾಡಿದ್ದಾರೆ.

ಹೈ ಫ್ಯಾಟ್, ಹೈ ಶುಗರ್, ಹೈ ಸಾಲ್ಟ್ ಉತ್ಪನ್ನಗಳ ನಿಷೇಧ
ಹೈ ಫ್ಯಾಟ್, ಹೈ ಶುಗರ್, ಹೈ ಸಾಲ್ಟ್ ಅಂಶಗಳಿರುವ ಆಹಾರ ಉತ್ಪನ್ನಗಳನ್ನ ಮಾರಾಟವನ್ನ ಇನ್ಮುಂದೆ ಸಹಿಸಲ್ಲ ಎಂದಿದ್ದಾರೆ. 134 ಶಾಲೆಗಳಿಗೆ ಭೇಟಿ ನೀಡಿ ಸರ್ವೆ ನಡೆಸಿದ ಬಳಿಕ ಈ ಮಹತ್ವದ ನಿರ್ಧಾರವನ್ನ ಪ್ರಕಟಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳ ಕ್ಯಾಂಟೀನ್​ಗಳಿಗೂ ಈ ನಿಯಮ ಅನ್ವಯವಾಗಲಿದೆ.

ನಿಯಮಗಳನ್ನ ಉಲ್ಲಂಘಿಸಿದ್ರೆ ದಂಡ
ಇನ್ನು ಈ ನಿಯಮಗಳನ್ನ ಉಲ್ಲಂಘನೆ ಮಾಡಿ ಜಂಕ್ ಫುಡ್​ಗಳನ್ನ ಮಕ್ಕಳಿಗೆ ನೀಡಿದರೆ, ಅಂಗಡಿಗಳಿಗೆ ಭಾರೀ ದಂಡ ಹಾಗೂ ಪರವಾನಗಿ ರದ್ದು ಮಾಡಿಸುವ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆ ಆಳು ಮೂಳು ಅಂತಾ ಜಂಕ್ ಫುಡ್​ಗಳನ್ನ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಿರುವ ಮಕ್ಕಳನ್ನ ಕಾಪಾಡಬೇಕಿದೆ. ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಲಿ.

ಆಹಾರ ಸಚಿವ ಯುಟಿ ಖಾದರ್ ಹೇಳಿದ್ದೇನು?
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಆರೋಗ್ಯ ಸಚಿವ ಯುಟಿ ಖಾದರ್, ರೋಗ ಬರುವುದಕ್ಕಿಂತ ಮೊದಲು ಅದನ್ನು ತಡೆಗಟ್ಟಬೇಕು. ಅವರವರ ಆರೋಗ್ಯ ಅವರವರ ಜವಾಬ್ದಾರಿ, ರೋಗ ಬಂದರೆ ಔಷಧ ಕೊಡೋದು ನಮ್ಮ ಕೆಲಸ. ನಾವು ಏನು ತಿನ್ನುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ಇರುತ್ತೆ. ಸಣ್ಣ ಮಕ್ಕಳಾದರೂ ಕೂಡ ಆರೋಗ್ಯವಂತ ಸಮಾಜ ನೋಡಬೇಕು.

ಕಟ್ಟುನಿಟ್ಟಾಗಿ ಈ ನಿಯಮ ಜಾರಿಗೆ ತರುತ್ತೇವೆ
ಅನಾರೋಗ್ಯ ಆದರೆ ಕೆಲವರಿಗೆ ವ್ಯಾಪಾರ ಆಗುತ್ತೆ. ಶಾಲೆಯಲ್ಲಿ ಮತ್ತು ಸುತ್ತಮುತ್ತ 50 ಮೀಟರ್ ವ್ಯಾಪ್ತಿ ಜಂಕ್ ಫುಡ್ ನಿಷೇಧ ಹಾಗೂ ಹೈ ಫ್ಯಾಟ್, ಹೈ ಶುಗರ್, ಹೈ ಸಾಲ್ಟ್ ಉತ್ಪನ್ನಗಳ ನಿಷೇಧ ಮಾಡಲಾಗಿದೆ. ಹಲವು ಕಡೆಗಳಲ್ಲಿ ನಾವು ಸರ್ವೇ ಮಾಡಿದ್ದೇವೆ. ಶಾಲೆಯ ಕ್ಯಾಂಟೀನ್ ಗಳಲ್ಲೇ ಜಂಕ್ ಫುಡ್ ಕೊಡಲಾಗುತ್ತಿದೆ. ಪಿಯುಸಿ ವರೆಗಿನ ಶೈಕ್ಷಣಿಕ ಸಂಸ್ಥೆಗಳ 50 ಮೀಟರ್ ಆವರಣದಲ್ಲಿ ಜಂಕ್ ಫುಡ್ ನಿಷೇಧಿಸಲಾಗಿದ್ದು, ಕಟ್ಟುನಿಟ್ಟಾಗಿ ಈ ನಿಯಮ ಜಾರಿಗೆ ತರುತ್ತೇವೆ ಎಂದರು.


Spread the love

Exit mobile version