ಕರ್ನಾಟಕದಲ್ಲಿ ಶ್ರೀಮಂತ ಸಂಸ್ಕೃತಿ:ರಾಷ್ಟ್ರಪತಿ ಬಣ್ಣನೆ

Spread the love

ಕರ್ನಾಟಕದಲ್ಲಿ ಶ್ರೀಮಂತ ಸಂಸ್ಕೃತಿ:ರಾಷ್ಟ್ರಪತಿ ಬಣ್ಣನೆ

ಮೈಸೂರು: ಮೈಸೂರು ದಸರಾ ಭಾರತದ ಸಂಸ್ಕೃತಿಯ ಪ್ರತೀಕವಾಗಿದ್ದು, ಕರ್ನಾಟಕದಲ್ಲಿ ಶ್ರೀಮಂತ ಸಂಸ್ಕೃತಿಯಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬಣ್ಣಿಸಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಆರತಿ ಬೆಳಗಿ, ಪುಷ್ಪಾರ್ಚೆಗೈದು, ದೀಪಬೆಳಗುವ ಮೂಲಕ ನಾಡಹಬ್ಬ ಮೈಸೂರು ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿ ಕನ್ನಡದಲ್ಲಿಯೇ ಮಾತು ಆರಂಭಿಸಿದ ಅವರು ನಾಡಿನ ಜನತೆಗೆ ದಸರಾದ ಶುಭಕಾಮನೆ ತಿಳಿಸಿದರು. ಜನರು ಭಾರತದ ಸಮಾಜ ರಾಮಾಯಣ, ಮಹಾಭಾರತ, ಇತಿಹಾಸದ ಮೂಲಕವೇ ಸಂಪ್ರದಾಯವನ್ನು ಆಚರಿಸುತ್ತಿದ್ದು, ಏಕತೆಯನ್ನು ಕಾಣುತ್ತಾರೆ. ಕರ್ನಾಟಕದಲ್ಲಿ ಆದಿ ಶಂಕರಾಚಾರ್ಯರು ಶೃಂಗೇರಿ ಮಠ ಸ್ಥಾಪಿಸಿದರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಭಕ್ತಿಯನ್ನು ಪ್ರಚುರಪಡಿಸಿದರು. ಅನುಭವಮಂಟಪ ಸ್ಥಾಪಿಸಿದರವರು ಬಸವಣ್ಣ. ಇಲ್ಲಿನ ಸಂತರು ವಚನಗಳನ್ನು ರಚಿಸಿದರು. ಮಹಿಳೆಯರೂ ಕೂಡ ಯೋಗದಾನ ನೀಡಿದ್ದಾರೆ,

ಮಹಿಷಾಸುರ, ಶುಂಭ, ನಿಶುಂಭರನ್ನು ಸಂಹರಿಸಿದ್ದು ಶಕ್ತಿದೇವತೆ. ಅನ್ಯಾಯ, ಅಧರ್ಮಗಳ ನಿವಾರಣೆಗೆ ಚಾಮುಂಡಿರೂಪ ತಾಳಿದ ಮಾತೆ. ನವರಾತ್ರಿಯ ಸಮಯದಲ್ಲಿ ನವದುರ್ಗೆಯರನ್ನು ಶಕ್ತಿ ರೂಪದಲ್ಲಿ ಆರಾಧಿಸಲಾಗುತ್ತದೆ. ನವದುರ್ಗೆಯರು ಮಹಿಳೆಯರಲ್ಲಿನ ಶಕ್ತಿ . ಕರ್ನಾಟಕದ ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚನ್ನಮ್ಮರಂತಹ, ಒನಕೆ ಓಬ್ಬಬ್ವ ಇಂದಿಗೂ ಪ್ರೇರಣೆ. ಇಂದಿಗೂ ಕೂಡ ಮಹಿಳೆ ಶಕ್ತಿ ಸ್ವರೂಪಿಣಿಯಾಗಿ ಕಂಡು ಬರುತ್ತಾಳೆ. ಮಹಿಳೆಯರ ಪ್ರಗತಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡುವ ಅಗತ್ಯವಿದೆ ಎಂದು ಹೇಳಿದರು.

ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಜಿ.ಟಿ.ದೇವೇಗೌಡ, ವೇದಿಕೆಯ ಮುಂಭಾಗದಲ್ಲಿ ಶಾಸಕರುಗಳಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ತನ್ವೀರ್ ಸೇಠ್, ವಿಧಾನ ಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್, ಸಿ.ಎನ್.ಮಂಜೇಗೌಡ , ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೇರಿದಂತೆ ಅಧಿಕಾರಿಗಳು ಇದ್ದರು.


Spread the love