ಕರ್ನಾಟಕ ಚುನಾವಣೋತ್ತರ ಸಮೀಕ್ಷೆ: ಕಾಂಗ್ರೆಸ್‌‌ಗೆ ಹೆಚ್ಚು ಸೀಟ್, ಅತಂತ್ರ ವಿಧಾನಸಭೆ ಸುಳಿವು

Spread the love

ಕರ್ನಾಟಕ ಚುನಾವಣೋತ್ತರ ಸಮೀಕ್ಷೆ: ಕಾಂಗ್ರೆಸ್‌‌ಗೆ ಹೆಚ್ಚು ಸೀಟ್, ಅತಂತ್ರ ವಿಧಾನಸಭೆ ಸುಳಿವು

ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈಮಧ್ಯೆ ಬಹುತೇಕ ಮಂದಿ ಕಾಯುತ್ತಿದ್ದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಹಿಂದೆಯೇ ಕೆಲ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಹೇಳಿದಂತೆ ಅತಂತ್ರ ವಿಧಾನಸಭೆಯ ಸುಳಿವನ್ನು ನೀಡಿದೆ.

ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಕಾಂಗ್ರೆಸ್ ಕೂಡ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿತ್ತು. ಇದೀಗ ಸೀವೋಟರ್ ಚುನಾವಣೋತ್ತರ ಸಮೀಕ್ಷೆಯು ಲಭ್ಯವಾಗಿದ್ದು, ಕಾಂಗ್ರೆಸ್‌ಗೆ ಸಿಹಿ ಸುದ್ದಿಯನ್ನು ನೀಡಿದೆ. ಆದರೆ, ಯಾವ ಪಕ್ಷಕ್ಕೂ ಬಹುಮತ ಬಾರದಿರುವುದು ಕೊಂಚ ನಿರಾಸೆಯಾಗಿ ಪರಿಣಮಿಸಿದೆ.

ಸಿ ವೋಟರ್

ಬಿಜೆಪಿ- 83-95

ಕಾಂಗ್ರೆಸ್- 100-112

ಜೆಡಿಎಸ್- 21-29

ಇತರೆ- 02-06

ರಿಪಬ್ಲಿಕ್ ಎಕ್ಸಿಟ್ ಪೋಲ್

ಬಿಜೆಪಿ- 85-100

ಕಾಂಗ್ರೆಸ್- 94-108

ಜೆಡಿಎಸ್- 24-32

ಇತರೆ- 02-06

ಜೀ ನ್ಯೂಸ್ ಎಕ್ಸಿಟ್ ಪೋಲ್

ಬಿಜೆಪಿ – 79-94

ಕಾಂಗ್ರೆಸ್ – 103-118

ಜೆಡಿಎಸ್- 25-33

ಇತರೆ 02-05

ನ್ಯೂಸ್ ನೇಷನ್ಸ್-ಸಿಜಿಎಸ್

ಬಿಜೆಪಿ- 114

ಕಾಂಗ್ರೆಸ್- 86

ಜೆಡಿಎಸ್- 21

ಇತರೆ- 03

ನವಭಾರತ್

ಬಿಜೆಪಿ- 78-92

ಕಾಂಗ್ರೆಸ್- 106-120

ಜೆಡಿಎಸ್- 20-26

ಇತರೆ- 02-04

ಸುವರ್ಣ ನ್ಯೂಸ್

ಬಿಜೆಪಿ- 94-117

ಕಾಂಗ್ರೆಸ್- 91-106

ಜೆಡಿಎಸ್- 14-24

ಇತರೆ- 2-6


Spread the love

Leave a Reply

Please enter your comment!
Please enter your name here