ಕರ್ನಾಟಕ ಪ್ರಾಂತೀಯ ಕುಟುಂಬ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ಲೆಸ್ಲಿ ಅರೋಜಾ ನೇಮಕ

????????????????????????????????????
Spread the love

ಕರ್ನಾಟಕ ಪ್ರಾಂತೀಯ ಕುಟುಂಬ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ಲೆಸ್ಲಿ ಅರೋಜಾ ನೇಮಕ

ಉಡುಪಿ: ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ  ಪೀಟರ್ ಮಚಾದೊರವರು ಉಡುಪಿಯ ಲೆಸ್ಲಿ ಅರೋಜಾರವರನ್ನು ಕರ್ನಾಟಕ ಪ್ರಾಂತೀಯ ಕುಟುಂಬ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಆಯೋಗದ ಪ್ರಾಂತೀಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅವರು, 2014 ರಿಂದ ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಅಯೋಗದ ನಿರ್ದೇಶಕರಾಗಿ ಮತ್ತು 2020ರಿಂದ ಪಾಲನಾ ಮಂಡಳಿಯ ಕಾರ್ಯುದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮೂಲತ ತೊಟ್ಟಾಮ್ ಪರಿಸರದವರಾದ ಲೆಸ್ಲಿ ಅರೋಜಾರವರು ಆಪ್ತಸಮಾಲೋಚನೆ ಮತ್ತು ಸೈಕೊಥೆರಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಜಿವಿತ್ ಕೌನ್ಸೆಲಿಂಗ್ ಕೇಂದ್ರದಲ್ಲಿ ಕೌಟುಂಬಿಕ ಆಪ್ತಸಮಾಲೋಚನೆಯ ಸೇವೆಯನ್ನು ನೀಡುತ್ತಿದ್ದು, ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ವೃತ್ತಿಪರ ಕಾರ್ಯನಿರ್ವಾಹಕರಾಗಿ ಅಪಾರ ಜನಮನ್ನಣೆ ಗಳಿಸಿರುತ್ತಾರೆ.

ಅಕ್ತೋಬರ್ 1, 2022 ರಂದು ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡೊ. ಜೆರಾಲ್ಡ್ ಲೋಬೊರವರು ಲೆಸ್ಲಿ ಅರೋಜಾರವರನ್ನು ಸನ್ಮಾನಿಸಿ ಶುಭ ಹಾರೈಸಿದರು.


Spread the love