Home Mangalorean News Kannada News ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ 

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ 

Spread the love

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ 

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕøತರನ್ನು ಆಯ್ಕೆ ಮಾಡಲಾಗಿದೆ. ಬ್ಯಾರಿ ಸಾಹಿತ್ಯ ಕ್ಷೇತ್ರ, ಬ್ಯಾರಿ ಕಲಾ ಕ್ಷೇತ್ರ ಹಾಗೂ ಬ್ಯಾರಿ ಸಂಘಟನೆ, ಸಮಾಜಸೇವೆ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಆರು ಮಂದಿ ಗಣ್ಯರನ್ನು ಅಕಾಡೆಮಿಯ 2019 ಮತ್ತು 2020ರ ಗೌರವ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.

ಬ್ಯಾರಿ ಸಮುದಾಯಕ್ಕೆ ದುಡಿದ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ. ಈ ಗೌರವ ಪ್ರಶಸ್ತಿಯು 50,000 ನಗದು, ಶಾಲು, ಹಾರ, ಫಲತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದರು.

ಗೌರವ ಪ್ರಶಸ್ತಿ – 2019: ಬ್ಯಾರಿ ಸಾಹಿತ್ಯ ಕ್ಷೇತ್ರ – ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಬ್ಯಾರಿ ಕಲೆ ಕ್ಷೇತ್ರ-ಇಸ್ಮಾಯಿಲ್ ತಣ್ಣೀರುಬಾವಿ, ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ ಕ್ಷೇತ್ರ: ಎಮ್ ಅಹ್ಮದ್ ಬಾವಾ ಮೊಹಿದಿನ್

ಗೌರವ ಪ್ರಶಸ್ತಿ – 2020: ಬ್ಯಾರಿ ಸಾಹಿತ್ಯ ಕ್ಷೇತ್ರ – ಬಶೀರ್ ಅಹ್ಮದ್ ಕಿನ್ಯ, ಬ್ಯಾರಿ ಸಿನಿಮಾ, ನಾಟಕ, ಕಲೆ ಕ್ಷೇತ್ರ – ವೀಣಾ ಮಂಗಳೂರು, ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ ಕ್ಷೇತ್ರ-ಸಿದ್ದೀಕ್ ಮಂಜೇಶ್ವರ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2019 ಮತ್ತು 2020ರ ಸಾಲಿನ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಗಣ್ಯರ ವಿವರ ಇಂತಿವೆ:

ಗೌರವ ಪುರಸ್ಕಾರ 2019 – ಬ್ಯಾರಿ ಶಿಕ್ಷಣ ಕ್ಷೇತ್ರ: ಅಬ್ದುಲ್ ರಝಾಕ್ ಅನಂತಾಡಿ, ಬ್ಯಾರಿ ಸಾಹಿತ್ಯ ಕ್ಷೇತ್ರ: ಟಿ.ಎಸ್. ಹುಸೈನ್, ಬ್ಯಾರಿ ಸಂಯುಕ್ತ ಕ್ಷೇತ್ರ: ಅಬ್ದುಲ್ ಮಜೀದ್ ಸೂರಲ್ಪಾಡಿ, ಸಮಾಜ ಸೇವೆ ಕ್ಷೇತ್ರ: ಆಪತ್ಬಾಂಧವ ಆಸಿಫ್ ಕಾರ್ನಾಡು, ಬ್ಯಾರಿ ಸಂಘಟನೆ ಕ್ಷೇತ್ರ: ಆಲಿಕುಂಞ ಪಾರೆ.

ಗೌರವ ಪುರಸ್ಕಾರ 2020 – ವೈದ್ಯಕೀಯ ಕ್ಷೇತ್ರ: ಡಾ| ಇಸ್ಮಾಯಿಲ್, ಬ್ಯಾರಿ ಶಿಕ್ಷಣ ಕ್ಷೇತ್ರ: ಟಿ.ಎ. ಮೊಹಮ್ಮದ್ ಆಸಿಫ್, ಸಮಾಜ ಸೇವೆ ಕ್ಷೇತ್ರ: ಇಲ್ಯಾಸ್ ಮಂಗಳೂರು, ಬ್ಯಾರಿ ಸಂಘಟನೆ ಕ್ಷೇತ್ರ : ರಾಶ್ ಬ್ಯಾರಿ, ಬ್ಯಾರಿ ಯುವ ಪ್ರತಿಭೆ: ಸಫ್ವಾನ್ ಶಾ ಬಹರೈನ್.

ಪತ್ರಿಕಾಗೋಷ್ಠಿಯಲ್ಲಿ ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ರಿಜಿಸ್ಟ್ರಾರ್ ಪೂರ್ಣಿಮಾ, ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಉಪಸ್ಥಿತರಿದ್ದರು.


Spread the love

Exit mobile version