ಕರ್ನಾಟಕ ಸಂಘ ಶಾರ್ಜಾ ದ ನೂತನ ಅಧ್ಯಕ್ಷರಾಗಿ   ಎಂ. ಇ. ಮೂಳೂರ್ ಅಧಿಕಾರ ಸ್ವೀಕಾರ

Spread the love

ಕರ್ನಾಟಕ ಸಂಘ ಶಾರ್ಜಾ ದ ನೂತನ ಅಧ್ಯಕ್ಷರಾಗಿ   ಎಂ. ಇ. ಮೂಳೂರ್ ಅಧಿಕಾರ ಸ್ವೀಕಾರ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಶಾರ್ಜಾ ಕರ್ನಾಟಕ ಸಂಘ ಹದಿನೆಂಟು ವರ್ಷಗಳಿಂದ ಕನ್ನಡ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಕಳೆದ ಅವದಿಯಲ್ಲಿ ಅಧ್ಯಕ್ಷರಾಗಿದ್ದ ಶ್ರೀ ಆನಂದ್ ಬೈಲೂರ್ ಮತ್ತು ಕಾರ್ಯಕಾರಿ ಸಮಿತಿಯ ಬೀಳ್ಕೊಡುಗೆ ಹಾಗೂ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಝೂಮ್ ನ ಮೂಲಕ 2021 ಫೆಬ್ರವರಿ 12 ನೇ ತಾರೀಕು ಶುಕ್ರವಾರ ರಾತ್ರಿ ಏಳು ಗಂಟೆಗೆ ನಡೆಯಿತು,

ನೂತನ ಅಧ್ಯಕ್ಷರಾಗಿ  ಎಂ. ಇ. ಮೂಳೂರ್ ರವರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿ ಅಧಿಕಾರವನ್ನು ಸ್ವೀಕರಿಸಿದರು, ಉಪಾಧ್ಯಕ್ಷರಾಗಿ  ನೋವೆಲ್ ಡಿ ಅಲ್ಮೆಡಾ, ಪ್ರಧಾನ ಕಾರ್ಯದರ್ಶಿಯಾಗಿ  ವಿಶ್ವನಾಥ್ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ  ಅಮರ್ ಉಮೇಶ್ ನಂತೂರ್ ಹಾಗೂ ಖಜಾಂಚಿಯಾಗಿ  ಮಹಮ್ಮದ್ ಅಬ್ರಾರ್ ಉಲ್ಲಾ ಶರೀಫ್ ರವರು ಜವಬ್ಧಾರಿಯನ್ನು ವಹಿಸಿಕೊಂಡರು.

ಕರ್ನಾಟಕ ಸಂಘ ಶಾರ್ಜಾದ ಪೋಷಕರಾದ ಮಾರ್ಕ್ ಡೆನಿಸ್ ರವರು ತಮ್ಮ ಸಂದೇಶದಲ್ಲಿ ಶುಭವನ್ನು ಹಾರೈಸಿದರು. ನಿಕಟಪೂರ್ವ ಅಧ್ಯಕ್ಷರಾದ  ಅನಂದ ಬೈಲೂರ್ ತಮ್ಮ ಸಮಿತಿಯ ಪರವಾಗಿ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿ ತಮ್ಮ ಅವಧಿಯ ಲೆಕ್ಕಚಾರವನ್ನು ಸಭೆಯಲ್ಲಿ ಖಜಾಂಚಿ ಶ್ರೀ ಸುಗಂಧರಾಜ್ ಬೇಕಲ್ ರವರ ಮೂಲಕ ಮಂಡಿಸಿದರು.

ಅಧಿಕಾರ ಹಸ್ಥಾಂತರ ಪ್ರಕ್ರಿಯೇಯನ್ನು ಸಲಹೆಗಾರರಾದ  ಸತೀಶ್ ಪೂಜಾರಿಯವರು ನಡೆಸಿಕೊಟ್ಟರು. ಸಲಹೆಗಾರಾರದ  ಪ್ರವೀಣ್ ಕುಮಾರ ಶೆಟ್ಟಿ, ಬಿ. ಕೆ. ಗಣೇಶ್ ರೈ,  ಹರೀಶ್ ಶೇರಿಗಾರ್ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಅಬ್ದುಲ್ ರಝಾಕ್, ಕಿರಣ್ ಶೆಟ್ಟಿ ಇವರುಗಳು ನೂತನ ಕಾರ್ಯಕಾರಿ ಸಮಿತಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭವನ್ನು ಹಾರೈಸಿದರು.

ವಂದನಾರ್ಪಣೆ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು  ಸುಗಂಧರಾಜ್ ಬೇಕಲ್ ನೆರವೇರಿಸಿದರು.


Spread the love