ಕಲಾಂಗಣದಲ್ಲಿ ತುಜೆವಿಣೆಂ ಸಂಗೀತ ಮಂಜರಿ

Spread the love

ಕಲಾಂಗಣದಲ್ಲಿ ತುಜೆವಿಣೆಂ ಸಂಗೀತ ಮಂಜರಿ

ಈಸ್ಟರ್ ಭಾನುವಾರ ಮಂಗಳೂರಿನ ಶಕ್ತಿನಗರದ ಕಲಾಂಗಣದಲ್ಲಿ ತುಜೆವಿಣೆಂ ಸಂಗೀತ ರಸಮಂಜರಿ ಸಾದರವಾಯಿತು. ಮಾಂಡ್ ಸೊಭಾಣ್ ಪ್ರಾಯೋಜಿಸುವ ಈ ಸರಣಿಯ 231 ನೇ ಕಾರ್ಯಕ್ರಮವನ್ನು ಡಾ. ಪಿ.ಎನ್ ವೇಗಸ್ ಹಾಗೂ ಜೊಯ್ಸ್ ವೇಗಸ್ ಗಂಟೆ ಬಾರಿಸಿ ಚಾಲನೆ ನೀಡಿದರು.

ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಜೆ. ಪಿಂಟೊ, ಕಿಶೋರ್ ಫೆರ್ನಾಂಡಿಸ್, ಎಲ್ರೊನ್ ರೊಡ್ರಿಗಸ್ ಮತ್ತು ಸುನೀಲ್ ಮೊಂತೇರೊ ಉಪಸ್ಥಿತರಿದ್ದರು.

ನಂತರ ಕೊಂಕಣಿಯ ಹಿರಿಯ ಗಾಯಕ ನೊರ್ಬರ್ಟ್ ಪಿರೇರಾ ರಚಿಸಿ ಸ್ವರ ಸಂಯೋಜಿಸಿದ ಗೀತೆಗಳ ರಸಮಂಜರಿ ನಡೆಯಿತು. ನ್ಯಾನ್ಸಿ ಪಿರೇರಾ, ಐವಿ ಡಿಸೋಜ, ರೊಬಿನ್ ಸಿಕ್ವೇರಾ, ಲಿಶಾ ಡಿಸಿಲ್ವಾ, ಆನ್ಸನ್ ಮಿನೇಜಸ್ ಇವರುಗಳು ಹಾಡಿದರು. ಎರಿಕ್-ಜೊಯ್ಸ್ ಒಝೇರಿಯೊ ಜೋಡಿ ಹೊಸ ಹಾಡಿಗೆ ದನಿಗೂಡಿಸಿದರೆ, ಎ.ಜೆ. ಆಸ್ಪತ್ರೆಯ ಖ್ಯಾತ ಹೃದಯತಜ್ಞ ಡಾ. ಬಿ.ವಿ. ಮಂಜುನಾಥ್ ಒಂದು ಹಾಡನ್ನು ಹಾಡಿ ರಂಜಿಸಿದರು.

ಜೀ-ಮೇಜರ್ ಸಂಗೀತ ತಂಡದ ಮ್ಯಾಕ್ಲಿನ್ ಡಿಸೋಜ (ಕೀ ಬೋರ್ಡ್), ಆಲಿಸ್ಟರ್ ಡಿಸೋಜ (ಗಿಟಾರ್), ಫ್ಲೋಯ್ಡ್ (ಬಾಝ್) ದೀಪಕ್ ಶೊನ್ (ಟ್ರಂಪೆಟ್), ಆಶ್ವಿನ್ ಸಿಕ್ವೇರಾ (ಡ್ರಮ್ಸ್), ಶೆಲ್ಡನ್ ಪಿರೇರಾ (ಎಕೊಸ್ಟಿಕ್) ಇವರು ಸಂಗೀತದಲ್ಲಿ ಸಹಕರಿಸಿದರು. ಡ್ಯಾನ್ಸ್ ಸ್ಟಾರ್ಸ್ ಸ್ಟುಡಿಯೊ, ಆಡ್ಯಾರ್ ತಂಡದಿಂದ ನೃತ್ಯಗಳು ಪ್ರಸ್ತುತವಾದವು.


Spread the love

Leave a Reply

Please enter your comment!
Please enter your name here