ಕಲಾಂಗಣದಲ್ಲಿ 250 ನೇ ತಿಂಗಳ ವೇದಿಕೆ : ಹೊಸ ದಾಖಲೆ

Spread the love

ಕಲಾಂಗಣದಲ್ಲಿ 250 ನೇ ತಿಂಗಳ ವೇದಿಕೆ : ಹೊಸ ದಾಖಲೆ

ಮಾಂಡ್ ಸೊಭಾಣ್ ಇದರ ತಿಂಗಳ ವೇದಿಕೆ ಸರಣಿಯ 250 ನೇ ಕಾರ್ಯಕ್ರಮ 2022 ಆಕ್ಟೋಬರ್ 02 ರಂದು ಕಲಾಂಗಣದಲ್ಲಿ ನಡೆಯಲಿದೆ. ಹೊಸದಾಗಿ ರಚಿಸಿ ಸ್ವರ ಸಂಯೋಜಿಸಿದ 11 ಹಾಡುಗಳ `ನವಿಂ ಮೊತ್ಯಾಂ’ (ನವÀ ಮುತ್ತುಗಳು) ಸಂಗೀತ ರಸಮಂಜರಿ ಪ್ರಸ್ತುತವಾಗಲಿದೆ.

ಮೆಲ್ವಿನ್ ಪೆರಿಸ್, ರೊನಿ ಕ್ರಾಸ್ತಾ ಕೆಲರಾಯ್, ಜೇಮ್ಸ್ ಲೋಪಿಸ್ ಹೊನ್ನಾವರ್, ರೋಶು ಬಜ್ಪೆ, ಐರಿನ್ ರೆಬೆಲ್ಲೊ, ಟೈಟಸ್ ನೊರೊನ್ಹಾ, ವಿಲ್ಸನ್ ಕಟೀಲ್, ಲೊಯ್ಡ್ ರೇಗೊ, ಜಾನೆಟ್ ಮೊಂತೇರೊ ಹಾಗೂ ಆಲ್ಬನ್ ಡಿಸಿಲ್ವಾ ಹೊನ್ನಾವರ್ ಇವರುಗಳು ಹಾಡಿನ ಸಾಹಿತ್ಯ ರಚಿಸಿದ್ದು, ಎರಿಕ್ ಒಝೇರಿಯೊ, ಮೆಲ್ವಿನ್ ಪೆರಿಸ್, ಜೊಯೆಲ್ ಪಿರೇರಾ, ಕ್ಯಾಜಿಟನ್ ಡಾಯಸ್, ಜೇಮ್ಸ್ ಲೋಪಿಸ್ ಹೊನ್ನಾವರ, ರೋಶನ್ ಆಂಜೆಲೊರ್, ಐರಿನ್ ರೆಬೆಲ್ಲೊ, ಲಾಯ್ಡ್ ರೇಗೊ, ಸೋನಲ್ ಮೊಂತೇರೊ ಮತ್ತು ಜೀವನ್ ಸಿದ್ದಿ ಸ್ವರ ಸಂಯೋಜಿಸಿದ್ದಾರೆ.

ಮೆಲ್ವಿನ್ ಪೆರಿಸ್, ಪ್ರಜೋತ್ ಡೆಸಾ, ಶಿಲ್ಪಾ ಕುಟಿನ್ಹಾ, ಆಶ್ವಿನ್ ಡಿಕೊಸ್ತಾ, ರೊಬಿನ್ ಸಿಕ್ವೇರಾ, ಸ್ಟೀಫನ್ ಕುಟಿನ್ಹಾ, ಟ್ರೀಜಾ ಲೋಪಿಸ್ ಹೊನ್ನಾವರ, ಸಿಮೋನ್ ಮೊಂತೇರೊ, ಕ್ಲಿಯೊನ್ ಡಿಸಿಲ್ವಾ, ಕೇತನ್ ಕ್ಯಾಸ್ತಲಿನೊ, ಎಲ್ಟನ್ ಪಿಂಟೊ ಬಜ್ಜೋಡಿ, ಮೆಲ್ವಿಟಾ ಡಿಸೋಜ ಕುಲ್ಶೇಕರ, ರೀನಲ್ ಲುವಿಸ್ ಬ್ರಹ್ಮಾವರ ಇವರು ಈ ಹಾಡುಗಳಿಗೆ ಸ್ವರ ಮಾಧುರ್ಯ ನೀಡಲಿದ್ದಾರೆ. ರೋಶನ್ ಬೇಳ ನೇತೃತ್ವದಲ್ಲಿ ಸಚಿನ್ ಸಿಕ್ವೇರಾ, ಸಂಜಯ್ ರೊಡ್ರಿಗಸ್ ಮತ್ತು ಸ್ಟಾಲಿನ್ ಡಿಸೋಜ ಸಂಗೀತದಲ್ಲಿ ಸಹಕರಿಸಲಿದ್ದಾರೆ. ನೆಲ್ಲು ಪೆರ್ಮನ್ನೂರು ಇವರು ಕಾರ್ಯಕ್ರಮ ನಿರ್ವಹಿಸುವರು.

ಅಂದು ಮಾಂಡ್ ಸೊಭಾಣ್ ಇದರ ಗಾಯನ ಮಂಡಳಿ ಸುಮೇಳ್ – ಅಂತರರಾಷ್ಟ್ರೀಯ ಸಂಗೀತ ದಿನವನ್ನು ಆಚರಿಸಲಿದೆ. ಈ ವೇದಿಕೆಯಲ್ಲಿ ಸಂಗೀತ ವಿಶಾರದÀ ರೋಶನ್ ಮಾರ್ಟಿಸ್ ಇವರನ್ನು ಸನ್ಮಾನಿಸಲಿರುವರು.

06 ಜನವರಿ 2002 ರಿಂದ ಆರಂಭವಾದ ಈ ಪ್ರದರ್ಶನ ಕಲೆಯ ಪಯಣ ಇಪ್ಪತ್ತು ವರ್ಷ ಹತ್ತು ತಿಂಗಳು ಎಲ್ಲಾ ಅಡೆತಡೆಗಳನ್ನು ದಾಟಿ ನಿರಂತರವಾಗಿ ನಡೆಯುತ್ತಾ, ಈಗ 250 ನೇ ಕಾರ್ಯಕ್ರಮದ ದಾಖಲೆ ಬರೆಯಲಿದೆ. ಅನನ್ಯ ವಿನ್ಯಾಸದ ನೊರಿನ್ ಮತ್ತು ರೊನಾಲ್ಡ್ ಮೆಂಡೊನ್ಸಾ ಬಯಲು ರಂಗ ಮಂದಿರದಲ್ಲಿ ಮತ್ತು ಮಳೆಗಾಲದಲ್ಲಿ ಲುವಿಜಾ ಮತ್ತು ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ವೇದಿಕೆಯಲ್ಲಿ ಈ ಕಾರ್ಯಕ್ರಮಗಳು ನಡೆದಿವೆ. ವಿಶ್ವದಾದ್ಯಂತ ಇರುವ ಹಲವಾರು ಕೊಂಕಣಿ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಿದ್ದಾರೆ. ಹಿ ಕಾರ್ಯಕ್ರಮವನ್ನು ಆಸ್ಟಿನ್ ರೋಚ್ ಮತ್ತು ಹಿಲ್ಮಾ ರೋಚ್, ಚರಿಷ್ಮಾ ಹೋಟೆಲ್ಸ್ ಪ್ರೈ. ಲಿ. ಬೆಂಗಳೂರು ಇವರು ಪ್ರಾಯೋಜಿಸಿದ್ದಾರೆ.


Spread the love