ಕಲ್ಪನಾ ಸ್ವೀಟ್ಸ್‌ ಬಳಿ ರಸ್ತೆ ಕಾಮಗಾರಿ: ಬದಲಿ ರಸ್ತೆ ವ್ಯವಸ್ಥೆ

Spread the love

 ಕಲ್ಪನಾ ಸ್ವೀಟ್ಸ್‌ ಬಳಿ ರಸ್ತೆ ಕಾಮಗಾರಿ: ಬದಲಿ ರಸ್ತೆ ವ್ಯವಸ್ಥೆ

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯ ಸೆಂಟ್ರಲ್ ಮಾರ್ಕೆಟ್ ರಸ್ತೆ(ಕಲ್ಪನಾ ಸ್ಟೀಟ್ಸ್‍ನಿಂದ ಮೈದಾನ 1ನೇ ಅಡ್ಡ ರಸ್ತೆ)ಯವರೆಗೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ವೇಳೆ ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ ಏ.28 ರಿಂದ ಜೂ.26ರ ವರೆಗೆ 60 ದಿನಗಳ ಕಾಲ ಬದಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಮಗಾರಿ ನಡೆಯುವ ವೇಳೆ ಕಲ್ಪನಾ ಸ್ಟೀಟ್ಸ್ ನಿಂದ ಮೈದಾನ 1ನೇ ಅಡ್ಡ ರಸ್ತೆಯ ವರೆಗೆ ಎಲ್ಲಾ ತರಹದ ವಾಹನಗಳನ್ನು ನಿಷೇಧಿಸಿ ಮೈದಾನ 1ನೇ ಅಡ್ಡ ರಸ್ತೆಯ(ಫಾತಿಮಾ ಸ್ಟೋರ್ ಎದುರು ರಸ್ತೆ) ಮೂಲಕ ಕ್ಲಾಕ್ ಟವರ್ ಕಡೆಗೆ ಸಂಚರಿಸಿ ಅಲ್ಲಿಂದ ಮುಂದಕ್ಕೆ ಸಂಚರಿಸಲು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love