
Spread the love
ಕಸದೊಂದಿಗೆ ಸಿಕ್ಕ ಚಿನ್ನದ ಬ್ರಾಸ್ ಲೇಟ್ ವಾರಸುದಾರರಿಗೆ ಮರಳಿಸಿದ ಕಾಪು ಪುರಸಭಾ ಪೌರ ಕಾರ್ಮಿಕರು
ಉಡುಪಿ: ವಸತಿ ಸಂಕೀರ್ಣವೊಂದರಿಂದ ಕಸವನ್ನು ಸಂಗ್ರಹಿಸುವ ವೇಳೆ ದೊರಕಿದ ಚಿನ್ನದ ಬ್ರಾಸ್ ಲೇಟ್ ಒಂದನ್ನು ಸೂಕ್ತ ವಾರಸುದಾರರಿಗೆ ಮರಳಿಸುವ ಮೂಲಕ ಕಾಪು ಪುರಸಭಾ ಪೌರಕಾರ್ಮಿಕರು ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದ್ದಾರೆ.
ಕಾಪು ಪುರಸಭಾ ವ್ಯಾಪ್ತಿಯಲ್ಲಿನ ಮಲ್ಲಾರು ಕೊಪ್ಪಲಂಗಡಿ ಅನಸೂಯ್ ಎನ್ಕ್ಲೇವ್ ನಲ್ಲಿ ವಾಸವಾಗಿರುವ ಮಹಮ್ಮದ್ ಸಫ್ವಾನ್ ಎಂಬವರ 16 ಗ್ರಾಂ ತೂಕದ ಚಿನ್ನದ ಬ್ರಾಸ್ ಲೇಟ್ ಬುಧವಾರ ಕಸದ ಜೊತೆಗೆ ಕಳೆದು ಹೋಗಿತ್ತು ಎನ್ನಲಾಗಿದೆ.
ಕಸ ವಿಲೇವಾರಿ ವೇಳೆ ಪೌರ ಕಾರ್ಮಿಕರಿಗೆ ಬ್ರಾಸ್ ಲೇಟ್ ಸಿಕ್ಕಿದ್ದು ಅದನ್ನು ವಾಪಾಸು ತಂದು ವಾರಸುದಾರರಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪ್ರಾಮಾಣಿಕತೆ ಮೆರೆದಿರುವ ಕಾಪು ಪುರಸಭೆಯ ಕಾರ್ಮಿಕರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಬ್ರಾಸ್ ಲೇಟ್ ನ ವಾರಸುದಾರರು ಪೌರಕಾರ್ಮಿಕರಾದ ಸುಧೀರ್ ಸುವರ್ಣ, ವಿಜಯ್, ಸುನೀಲ್ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ.
Spread the love