ಕಸಾಪ ಉಡುಪಿ ಮತ್ತು ಮಲಬಾರ್ ವತಿಯಿಂದ ಶಿಕ್ಷಕರಿಗೆ ಗೌರವ ಪುರಸ್ಕಾರ

Spread the love

ಕಸಾಪ ಉಡುಪಿ ಮತ್ತು ಮಲಬಾರ್ ವತಿಯಿಂದ ಶಿಕ್ಷಕರಿಗೆ ಗೌರವ ಪುರಸ್ಕಾರ

ಉಡುಪಿ:  ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್  ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯ 5 ಹಿರಿಯ ಸಾಧಕ ಶಿಕ್ಷಕರಿಗೆ ಗೌರವ ಪುರಸ್ಕಾರ 2022 ನೀಡಿ ಗೌರವಿಸಲಾಯಿತು.

ಸೆಪ್ಟೆಂಬರ್ 5 ರಂದು ಉಡುಪಿಯ  ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಭಟ್ (ಶಿಕ್ಷಣ ಹಾಗೂ ರಂಗಭೂಮಿ) , ರಾಜೇಂದ್ರ ಭಟ್ ಕೆ (ಶಿಕ್ಷಣ ಹಾಗೂ ನಿರೂಪಣೆ ) , ಪ್ರೊ. ನಾರಾಯಣ ಎಂ. ಹೆಗಡೆ (ಶಿಕ್ಷಣ ಹಾಗೂ ಸಂಘಟನೆ), ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ( ಶಿಕ್ಷಣ ಹಾಗೂ ಅರ್ಥಶಾಸ್ತ್ರ) , ಡಾ. ರೇಖಾ ವಿ. ಬನ್ನಾಡಿ (ಶಿಕ್ಷಣ ಹಾಗೂ ಸಾಹಿತ್ಯ ) ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಈ ಪುರಸ್ಕಾರ ನೀಡಲಾಯಿತು.

ಸಭಾಧ್ಯಕ್ಷತೆಯನ್ನು ವಹಿಸಿದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ . ಎಂ. ಎಲ್ ಸಾಮಗ ಮಾತನಾಡಿ ಶಿಕ್ಷಕರ ಸೇವೆ ಬಹುದೊಡ್ಡ ಸೇವೆ ಸಮಾಜದಲ್ಲಿ ಅವರನ್ನು ಗುರುತಿಸಿ ಗೌರವಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶ್ಲಾಘನೀಯ ಕೆಲಸ ಮಾಡಿದೆ ಎಂದರು .

ಸಮಾರಂಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ,ಅಧ್ಯಕ್ಷರಾದ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಇದರ ವ್ಯವಸ್ಥಾಪಕ ಹಫೀಝ್ ರೆಹಮಾನ್ , ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್. ಪಿ ಉಪಸ್ಥಿತರಿದ್ದು , ಹಾಸ್ಯ ಭಾಷಣಕಾರರಾದ ಸಂಧ್ಯಾ ಶೆಣೈ ಸ್ವಾಗತಿಸಿ ಶ್ರೀನಿವಾಸ್ ಉಪಾಧ್ಯ ವಂದಿಸಿ,ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.


Spread the love

Leave a Reply

Please enter your comment!
Please enter your name here