
ಕಸ್ತೂರ್ಬಾನಗರ ಹಾಗೂ ಇಂದಿರಾನಗರ ವಾರ್ಡ್‌ಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ
ಉಡುಪಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕಸ್ತೂರ್ಬಾನಗರ ಹಾಗೂ ಇಂದಿರಾನಗರ ವಾರ್ಡ್‌ಗಳಲ್ಲಿ ಸಭೆಯನ್ನು ನಡೆಸಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆಯನ್ನು ಕಸ್ತೂರ್ಬಾನಗರದ ಬಬ್ಬಸ್ವಾಮಿ ದೈವಸ್ಥಾನದ ಸಭಾಭವನದಲ್ಲಿ ಮಾಡಲಾಯಿತು.
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಬಿಡುಗಡೆಗೊಳಿಸಿ ಈ ಕಾರ್ಡನ್ನು ಬೂತ್‌ನ ಕಾರ್ಯಕರ್ತರು ಪ್ರತಿಯೊಂದು ಮನೆಗೆ ತಲುಪಿಸಿ ಕಾಂಗ್ರೆಸ್ ಪಕ್ಷದ 3 ಜನಪರ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡಬೇಕು. ಈ ಯೋಜನೆಗಳಿಂದ ಜನಸಾಮಾನ್ಯರಿಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದು ರಮೇಶ್ ಕಾಂಚನ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳಾದ ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ದಿವಾಕರ್ ಕುಂದರ್, ಪ್ರಖ್ಯಾತ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಅಮೃತ್ ಶೆಣೈ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯ ನಾಯಕರು, ಪದಾಧಿಕಾರಿಗಳು, ಮುಂಚೂಣಿ ಘಟಕದ ಅಧ್ಯಕ್ಷರು, ಮುಖಂಡರಾದ ಅಣ್ಣಯ್ಯ ಶೇರಿಗಾರ್, ಶಾಂತಾರಾಮ್ ಸಾಲ್ವಂಕರ್, ಶಶಿರಾಜ್ ಕುಂದರ್, ಮೊಹಮ್ಮದ್ ಶೀಶ್, ಹೇಮಾಲತಾ ಹಿಲಾರಿ, ನಾಸಿರ್ ಯಾಕೂಬ್, ಪ್ರಣಮ್, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು