ಕಾಂಕ್ರೀಟ್‌ ಪೇವ್‌ಮೆಂಟ್‌ ಕಾಮಗಾರಿ- ಬಾಳೆಬರೆ ಘಾಟ್‌ನಲ್ಲಿ ಸಂಚಾರ ನಿರ್ಬಂಧ

Spread the love

ಕಾಂಕ್ರೀಟ್‌ ಪೇವ್‌ಮೆಂಟ್‌ ಕಾಮಗಾರಿ- ಬಾಳೆಬರೆ ಘಾಟ್‌ನಲ್ಲಿ  ಸಂಚಾರ ನಿರ್ಬಂಧ
 

ಉಡುಪಿ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್‌ನಲ್ಲಿ ಕಾಂಕ್ರೀಟ್‌ ಪೇವ್‌ಮೆಂಟ್‌ ಕಾಮಗಾರಿ ನಡೆಯುವುದರಿಂದ ಫೆ.5ರಿಂದ ಏ.5ರವರೆಗೆ ವಾಹನಗಳ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಆದೇಶ ಹೊರಡಿಸಿದ್ದಾರೆ.

ಬಾಳೆಬರೆ ಘಾಟ್ ಬದಲಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಅನವು ಮಾಡಿಕೊಡಲಾಗಿದೆ.

ತೀರ್ಥಹಳ್ಳಿ ಮೂಲಕ ಕುಂದಾಪುರದ ಕಡೆಗೆ ಹೋಗುವ ಲಘು ವಾಹನಗಳು ತೀರ್ಥಹಳ್ಳಿ-ಹಾಲಾಡಿ-ಬಸ್ರೂರು-ಕುಂದಾಪುರ ರಸ್ತೆ, ತೀರ್ಥಹಳ್ಳಿ-ಹೆಬ್ರಿ-ಉಡುಪಿ-ಕುಂದಾಪುರ ರಸ್ತೆಯಲ್ಲಿ ಸಂಚರಿಸಬೇಕು.

ತೀರ್ಥಹಳ್ಳಿ ಮೂಲಕ ಕುಂದಾಪುರ ಕಡೆಗೆ ಹೋಗುವ ಭಾರಿ ವಾಹನಗಳು ತೀರ್ಥಹಳ್ಳಿ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ಮಾರ್ಗವಾಗಿ ಸಂಚರಿಸಬೇಕು.

ತೀರ್ಥಹಳ್ಳಿ-ಯಡೂರು-ಹುಲಿಕಲ್-ಕುಂದಾಪುರ ಕಡೆಗೆ ಹೋಗುವ ಲಘು ಹಾಗೂ ಭಾರಿ ವಾಹನಗಳು ತೀರ್ಥಹಳ್ಳಿ-ಯಡೂರು-ಮಾಸ್ತಿಕಟ್ಟೆ-ನಗರ-ಕೊಲ್ಲೂರು-ಕುಂದಾಪುರ ಮಾರ್ಗದಲ್ಲಿ ಹೋಗಬೇಕು.

ಹೊಸನಗರ-ನಗರ-ಕೊಲ್ಲೂರು-ಕುಂದಾಪುರ ರಸ್ತೆಯಲ್ಲಿ ಭಾರಿ ಸರಕು ವಾಹನ ಹೊರತುಪಡಿಸಿ ಲಘು ಸರಕು ವಾಹನಗಳು ಸಂಚರಿಸಬಹುದು.


Spread the love