ಕಾಂಕ್ರೀಟ್ ಸಂಸ್ಥೆಯ ವಿದ್ಯಾರ್ಥಿ ಚಾಪ್ಟರ್‍ಗೆ ಚಾಲನೆ

Spread the love

ಕಾಂಕ್ರೀಟ್ ಸಂಸ್ಥೆಯ ವಿದ್ಯಾರ್ಥಿ ಚಾಪ್ಟರ್‍ಗೆ ಚಾಲನೆ

ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದಲ್ಲಿ `ಭಾರತೀಯ ಕಾಂಕ್ರೀಟ್ ಸಂಸ್ಥೆ”ಯ ಮಂಗಳೂರು ವಲಯದ ಪ್ರಥಮ ವಿದ್ಯಾರ್ಥಿ ಚಾಪ್ಟರ್ ಉದ್ಘಾಟಿಸಲಾಯಿತು. ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್, ಮಂಗಳೂರು ವಲಯದ ಅಧ್ಯಕ್ಷ ಹಾಗೂ ವಿಟಿಯು ತಾಂತ್ರಿಕ ವಿಶ್ವವಿದ್ಯಾಲಯದ ಮಾಜಿ ಕುಲಸಚಿವರಾದ ಡಾ. ಕೆ ಇ ಪ್ರಕಾಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾಂಕ್ರೀಟ್ ಸಂಸ್ಥೆಯೊಂದಿಗಿನ ವಿದ್ಯಾರ್ಥಿ ಚಾಪ್ಟರ್ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಬಹಳಷ್ಟು ಪೂರಕವಾಗಲಿದೆ. ಕಾಂಕ್ರೀಟ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಾರ್ಯಾಗಾರಗಳು, ವಿಶೇಷ ಉಪನ್ಯಾಸಗಳು, ಸಿವಿಲ್ ಇಂಜಿನಿಯರಿಂಗ್‍ಗೆ ಸಂಬಂಧಿಸಿದ ಕೈಗಾರಿಕಾ ಕ್ಷೇತ್ರಗಳಿಗೆ ಭೇಟಿ, ತಂತ್ರಜ್ಞರೊಂದಿಗೆ ಸಂವಾದ, ಸಂಶೋಧನಾ ಪ್ರಾಜೆಕ್ಟ್‍ಗಳು, ಕಾಂಕ್ರೀಟ್ ನಿಯತಕಾಲಿಕೆಗಳಿಗೆ ಕಾಂಕ್ರೀಟ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಪ್ರಯೋಜನ ಮಾಡಿಕೊಡಲಿದೆ ಎಂದು ಅವರು ತಿಳಿಸಿದರು

ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆನಾರ್ಂಡಿಸ್ ಮಾತನಾಡಿ, ಪ್ರಸಕ್ತ ಸೆಮಿಸ್ಟರ್ ಹಾಗೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಭಾರತೀಯ ಕಾಂಕ್ರೀಟ್ ಸಂಸ್ಥೆಯ ಸಹಯೋಗದೊಂದಿಗೆ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಈ ಚಾಪ್ಟರ್‍ನ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆಕೊಟ್ಟರು.

ಕಾರ್ಯಕ್ರಮದ ಕೊನೆಯಲ್ಲಿ ಬೆಂಗಳೂರಿನ ಕ್ಯೂಕ್ರೀಟ್ ಸಂಸ್ಥೆಯ ನಿರ್ದೇಶಕ ವಿ. ಆರ್. ಕೌಶಿಕ ಕಾಂಕ್ರೀಟ್ ಗುಣಮಟ್ಟದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಟ್ ಮಂಗಳೂರು ವಲಯದ ಕೋಶಾಧಿಕಾರಿ ಇಂಜಿನಿಯರ್ ಅನಿಲ್ ಬಾಳಿಗ, ಸಂಯೋಜಕರಾದ ವರದರಾಜ್, ಸಂತೋಷ್, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಿವಿಲ್ ವಿಭಾಗ ಮುಖ್ಯಸ್ಥ ಡಾ. ಅಜಿತ್ ಹೆಬ್ಬಾರ್ ಅತಿಥಿಗಳನ್ನು ಸ್ವಾಗತಿಸಿ, ವಿದ್ಯಾರ್ಥಿ ನಳನ್ ಕಾರ್ಯಕ್ರಮ ನಿರೂಪಿಸಿದರು.


Spread the love