ಕಾಂಗ್ರೆಸಿಗರ ಬಳಿ ಗೋವಾ ಸಿಎಂ ಮಾಂಸಾಹಾರ ಸೇವಿಸಿ ಕೃಷ್ಣ ಮಠಕ್ಕೆ ಹೋದ ಸಾಕ್ಷಿ ಇದ್ದರೆ ಬಿಡುಗಡೆ ಮಾಡಲಿ – ರಘುಪತಿ ಭಟ್

Spread the love

ಕಾಂಗ್ರೆಸಿಗರ ಬಳಿ ಗೋವಾ ಸಿಎಂ ಮಾಂಸಾಹಾರ ಸೇವಿಸಿ ಕೃಷ್ಣ ಮಠಕ್ಕೆ ಹೋದ ಸಾಕ್ಷಿ ಇದ್ದರೆ ಬಿಡುಗಡೆ ಮಾಡಲಿ – ರಘುಪತಿ ಭಟ್

ಉಡುಪಿ: ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೃಷ್ಣಮಠಕ್ಕೆ ತೆರಳುವ ಮುನ್ನ ಮಾಂಸಾಹಾರ ಸೇವಿಸಿದ್ದಾರೆ ಎಂಬ ಆರೋಪ ಮಾಡಿದವರಲ್ಲಿ ಸಾಕ್ಷ ಗಳಿದ್ದರೆ ಬಿಡುಗಡೆ ಮಾಡಲಿ ಎಂದು ಉಡುಪಿ ಶಾಸಕ ರಘುಪತಿ ಭಟ್ ಸವಾಲು ಹಾಕಿದ್ದಾರೆ

ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಭಟ್ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೃಷ್ಣ ಮಠಕ್ಕೆ ತೆರಳುವ ಮುನ್ನ ಮಾಂಸಹಾರ ಸೇವಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪ ಸುಳ್ಳು

ಶನಿವಾರ ಪ್ರಮೋದ್ ಸಾವಂತ್ ಊಟ ಮಾಡುವಾಗ ನಾನು ಜೊತೆಯಲ್ಲಿದ್ದು ಅವರು ಮಾಂಸಹಾರ ಸೇವಿಸಿಲ್ಲ ಖಾಸಗಿ ಹೋಟೆಲ್ ನಿಂದ ತರಿಸಲಾದ ಸಸ್ಯಹಾರ ಮಾತ್ರ ಸೇವಿಸಿ ಕೃಷ್ಣಮಠಕ್ಕೆ ಹೋಗಿದ್ದಾರೆ ಚುನಾವಣೆ ಹತ್ತಿರವಾಗುವಾಗ ಈ ಪ್ರೀತಿಯ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ ಪ್ರಮೋದ್ ಸಾವಂತ್ ಅವರ ಜೊತೆಗೆ ಬಂದಿದ್ದ ಅಧಿಕಾರಿಗಳಿಗೆ ಮಾತ್ರ ಮಾಂಸ ಆಹಾರದ ವ್ಯವಸ್ಥೆ ಮಾಡಲಾಗಿತ್ತು. ಆರೋಪಿಸುವವರು ಹೋಟೆಲಿನ ಆರ್ಡರ್ ಮೆನು ನೋಡಿ ಹೇಳಿರಬಹುದು ಎಂದು ಭಟ್   ಸ್ಪಷ್ಟನೆ ನೀಡಿದ್ದಾರೆ

ಈ ಹಿಂದೆ ಸಿದ್ದರಾಮಯ್ಯ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋದ ಬಗ್ಗೆ ಬಿಜೆಪಿ ವಿಡಿಯೋ ಫೋಟೋ ಸಹಿತ ಸಾಕ್ಷ ಮುಂದಿಟ್ಟಿತ್ತು. ಸಿದ್ದರಾಮಯ್ಯ ನಾನು ತಪ್ಪಿ ಹೋದೆ, ನೆನಪಿಲ್ಲ ಎಂದಿದ್ದರೇ ದೊಡ್ಡ ಸುದ್ದಿಯಾಗುತ್ತಿರಲಿಲ್ಲ ಆದರೆ ನಾನು ದನದ ಮಾಂಸ ತಿಂದು ಹೋಗುತ್ತೇನೆ ಏನಾಗುತ್ತದೆ ಎಂದು ದರ್ಪದಿಂದ ಮಾತನಾಡಿದ್ದರು ಅದು ವಿವಾದವಾಯಿತು. ಪ್ರಮೋದ್ ಸಾವಂತ್ ಮಾಂಸಾಹಾರ ಸೇವಿಸಿರುವ ಫೋಟೋ ಅಥವಾ ವಿಡಿಯೋ ಇದ್ದರೆ ಕಾಂಗ್ರೆಸ್ ನಾಯಕರು ನೀಡಲಿ ಎಂದು ರಘುಪತಿ ಭಟ್ ಹೇಳಿದ್ದಾರೆ


Spread the love