ಕಾಂಗ್ರೆಸ್ಸಿನ ಮನಸ್ಸು ವಿಷಪೂರಿತ – ಖರ್ಗೆ ‘ವಿಷ ಸರ್ಪ’ ಹೇಳಿಕೆಗೆ ತಿರುಗೇಟು ನೀಡಿದ ಸುನಿಲ್ ಕುಮಾರ್

Spread the love

ಕಾಂಗ್ರೆಸ್ಸಿನ ಮನಸ್ಸು ವಿಷಪೂರಿತ – ಖರ್ಗೆ ‘ವಿಷ ಸರ್ಪ’ ಹೇಳಿಕೆಗೆ ತಿರುಗೇಟು ನೀಡಿದ ಸುನಿಲ್ ಕುಮಾರ್

ಕಾರ್ಕಳ: ಜಗತ್ತಿನ ಶ್ರೇಷ್ಠ ಪ್ರಧಾನಮಂತ್ರಿಗಳಲ್ಲಿ ಒಬ್ಬರಾದ ನರೇಂದ್ರ ಮೋದಿಯವರನ್ನು ವಿಷ ಸರ್ಪಕ್ಕೆ ಹೋಲಿಸಿರುವುದು ಕಾಂಗ್ರೆಸ್ ಪಕ್ಷದ ಹೀನ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಹೇಳಿದರು.

ಅವರು ಶುಕ್ರವಾರ ಕಾರ್ಕಳ ವಿಕಾಸ ಕಚೇರಿಯಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿ ನರೇಂದ್ರ ಮೋದಿ ಜಗತ್ತಿನ ನಾಯಕ ,ಉತ್ತಮ ಆಡಳಿತ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ . ಈ ಹೇಳಿಕೆಗಳನ್ನು ಸಮಾಜ ಸ್ವೀಕರಿಸುವುದಿಲ್ಲ. ಕಾಂಗ್ರೆಸ್ ಸಂಸ್ಕೃತಿ ಏನೆಂಬುದು ಮತ್ತೆ ಸಾಬೀತು ಪಡಿಸಿದೆ . ವಿಷ ಸರ್ಪ ಹೇಳಿಕೆ ನಾಗರೀಕ ಸಮಾಜಕ್ಕೆ ನೀಡುವ ಗೌರವವಲ್ಲ ಕಾಂಗ್ರೆಸ್ ಪಕ್ಷ ದಲ್ಲಿಯೆ ವಿಷವಿದೆ , ಕಾಂಗ್ರೆಸ್ ಪಕ್ಷದ ಮನಸ್ಸು, ಭರವಸೆಗಳು, ನಡವಳಿಕೆಗಳು ವಿಷಮಯವಾಗಿದೆ. ವಿಷಪೂರಿತ ಮನಸ್ಸುಗಳಿಂದ ಮಾತ್ರ ವಿಷಸರ್ಪ ಹೇಳಿಕೆ ಬರುತ್ತವೆ ಎಂದರು.

ಅಂದು ಸೋನಿಯಾ ಗಾಂಧಿ ಪ್ರಧಾನಿ ಮೋದಿಯವರನ್ನು ಮೌತ್ ಕಾ ಸೌಧಾಗರ್ ಎಂದು ಕರೆದಿದ್ದರು , ಸಿದ್ದರಾಮಯ್ಯ ನರಹಂತಕ ಎಂದಿದ್ದರು. ಪದೆ ಪದೇ ಕೀಳುಮಟ್ಟದ ಹೇಳಿಕೆಗಳನ್ನು ಪ್ರಧಾನಿ ಮೋದಿ ಬಗ್ಗೆ ನೀಡುವುದು ದೇಶವನ್ನು ಅವಮಾನಿಸಿದಂತೆ . ಕಾಂಗ್ರೆಸ್ ಪಕ್ಷ ಈಗಾಲೂ ಗಾಂಧಿಕುಟುಂಬದ ಕೃಪಕಟಾಕ್ಷದಲ್ಲಿ ಬದುಕುತ್ತಿದೆ. ನಾಮಕಾವಸ್ಥೆಗೆ ಖರ್ಗೆಯವರು ಅಧ್ಯಕ್ಷರಾಗಿದ್ದಾರೆ. ಗಾಂಧಿ ಕುಟುಂಬದ ಅಡುಗೆಮನೆಯಲ್ಲಿ ಮಾತನಾಡುವ ಮಾತನ್ನು ಇಂದು ಖರ್ಗೆಯವರು ತಮ್ಮ ಭಾಷಣ ರೂಪದಲ್ಲಿ ಹೇಳಿಕೆ ಕೊಡುತ್ತಿದ್ದಾರೆ .ಖರ್ಗೆಯವರಂತಹ ಹಿರಿಯ ರಾಜಕಾರಣಿ ,ಅನುಭವಿ ಗಳು, ಗಾಂಧಿ ಕುಟುಂಬವನ್ನು ಓಲೈಸುವ ಸಲುವಾಗಿ ಈ ಹೇಳಿಕೆಗಳನ್ನು ನೀಡುತಿದ್ದಾರೆ ಎಂದರು .

ಕ್ಯಾಮೆರಾ ಗಳು ಪತ್ರಕರ್ತರ ಮುಂದೆ ಖರ್ಗೆಯವರು ಕುಂಕುಮ ಅಳಿಸಿರುವುದು ಕಾಂಗ್ರೆಸ್ಸಿನ ಮಾನಸೀಕತೆ ಎಷ್ಟಿದೆ ಎಂದು ತೋರಿಸುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರ ಸಿಕ್ಕರೆ ರಾಜ್ಯದ ಜನರ ಕುಂಕುಮವನ್ನು ಕಾಂಗ್ರೆಸ್ ಪಕ್ಷ ಅಳಿಸಿಹಾಕಬಹುದು.. ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ತುಷ್ಠಿಕರಣದ ರಾಜಕಾರಣಕ್ಕೆ ಇತಿಮಿತಿಯಿದೆ . ಖರ್ಗೆಯವರ ನಡವಳಿಕೆ ಹಾಗೂ ಹೇಳಿಕೆಗಳನ್ನು ಸುನೀಲ್ ಕುಮಾರ್ ಖಂಡಿಸಿದರು.

ಕಾರ್ಕಳ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಬಗ್ಗೆ ಭಯವಿದೆ ಅದಕ್ಕಾಗಿ ಕಾರ್ಕಳ ಕಾಂಗ್ರೆಸ್ ಮುತಾಲಿಕ್ ಟೀಂ ಅನ್ನು ಸೃಷ್ಠಿಸಿದೆ. ಮುತಾಲಿಕ್ ಟೀಂ, ಉದಯಕುಮಾರ್ ಶೆಟ್ಟಿ ಎರಡೂ ಕಡೆಗಳಲ್ಲಿಯು ಅದೇ ಕಾಂಗ್ರೆಸ್ ಕಾರ್ಯಕರ್ತರೇ ಕಾಣಿಸುತಿದ್ದಾರೆ, ಮುತಾಲಿಕ್ ಕಾಂಗ್ರೆಸ್ ಪಕ್ಷದ ವಿರುದ್ಧ ಎಲ್ಲಿಯೂ ಮಾತನ್ನು ಆಡಿಲ್ಲ ಎಂದರು

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ನಾಯಕ್, ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು


Spread the love