ಕಾಂಗ್ರೆಸ್ ಅಂತಿಮ ಪಟ್ಟಿ ಬಿಡುಗಡೆ – ಮಂಗಳೂರು ಉತ್ತರಕ್ಕೆ ಇನಾಯತ್ ಆಲಿ

Spread the love

ಕಾಂಗ್ರೆಸ್ ಅಂತಿಮ ಪಟ್ಟಿ ಬಿಡುಗಡೆ – ಮಂಗಳೂರು ಉತ್ತರಕ್ಕೆ ಇನಾಯತ್ ಆಲಿ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಕಾಂಗ್ರೆಸ್ನ 6ನೇ ಹಾಗೂ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ.
ನಿನ್ನೆ(ಏಪ್ರಿಲ್ 19) 5ನೇ ಪಟ್ಟಿ ಬಿಡುಗಡೆ ಮಾಡಿದ್ದ ಎಐಸಿಸಿ, ಬಳಿಕ ಮಧ್ಯ ರಾತ್ರಿ ಫೈನಲ್ ಪಟ್ಟಿ ಬಿಡುಗಡೆ ಮಾಡಿದೆ.

ಬಾಕಿ ಉಳಿದಿದ್ದ 5 ಕ್ಷೇತ್ರಗಳಿಗೆ ಬುಧವಾರ ತಡರಾತ್ರಿ 2 ಗಂಟೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಮೂಲಕ ಕಾಂಗ್ರೆಸ್ ಎಲ್ಲಾ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಪ್ರಮುಖವಾಗಿ ಎಐಸಿಸಿ ಕಾರ್ಯದರ್ಶಿ ಎಸ್ ಬೋಸರಾಜು ಅವರಿಗೆ ಟಿಕೆಟ್ ಕೈತಪ್ಪಿದೆ. ಎಸ್ ಬೋಸರಾಜು ಹಾಗೂ ಪುತ್ರ ರವಿ ಬೋಸರಾಜು ರಾಯಚೂರು ನಗರ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡುವಂತೆ ಬೋಸರಾಜು ಪಟ್ಟು ಹಿಡಿದಿದ್ದರು. ಜಿಲ್ಲೆಯ ಪ್ರಬಲ ನಾಯಕರಾಗಿರುವ ಬೋಸರಾಜುಗೆ ಟಿಕೆಟ್ ಕೈತಪ್ಪಿದ್ದು, ಅಂತಿಮವಾಗಿ ರಾಯಚೂರು ನಗರ ಟಿಕೆಟ್ ಅನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಿದೆ.

ಬಾಕಿ ಉಳಿದುಕೊಂಡಿದ್ದ ರಾಯಚೂರು ನಗರ, ಶಿಡ್ಲಘಟ್ಟ, ಸಿ.ವಿ ರಾಮನ್ ನಗರ, ಅರಕಲಗೂಡು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಬಾಕಿ ಉಳಿದಿದ್ದ 5 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಂತಿದೆ

  • ರಾಯಚೂರು – ಮೊಹಮ್ಮದ್ ಶಾಲಮ್
  • ಶಿಡ್ಲಘಟ್ಟ – ಬಿ ವಿ ರಾಜೀವ್ ಗೌಡ
  • ಸಿ ವಿ ರಾಮನ್ ನಗರ – ಎಸ್ ಆನಂದ್ ಕುಮಾರ್
  • ಅರಕಲಗೂಡು – ಎಚ್.ಪಿ. ಶ್ರೀಧರ್ ಗೌಡ
  • ಮಂಗಳೂರು ಉತ್ತರ – ಇನಾಯತ್ ಅಲಿ

Spread the love