ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ಅವರಿಂದ ನಗರದ ವಿವಿಧೆಡೆ ಮತಯಾಚನೆ

Spread the love

ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ಅವರಿಂದ ನಗರದ ವಿವಿಧೆಡೆ ಮತಯಾಚನೆ

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ನಗರದ ವಿವಿಧೆಡೆ ತೆರಳಿ ಮತಯಾಚನೆ ನಡೆಸಿದರು.

ನಗರದ ಜೆಪ್ಪುನಲ್ಲಿರುವ ಸಂತ ಅಂತೋನಿ ಜಾಕೋಬೈಟ್ ಕಾಥೇಡ್ರಲ್ ಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು  ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾರ್ಪೊರೇಟರ್ ಎ. ಸಿ. ವಿನಯರಾಜ್, ಎ. ಸಿ. ಜಯರಾಜ್, ಎಐಸಿಸಿ ಮೀನುಗಾರಿಕಾ ಘಟಕದ ಅಧ್ಯಕ್ಷ ಆರ್ಮ್ ಸ್ಟ್ರಾಂಗ್ ಫೆರ್ನಾಂಡೊ ರವರು ಉಪಸ್ಥಿತರಿದ್ದರು.

ಬಿಜೈ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೋಬೊರಿಂದ ಮತಯಾಚನೆ.

ನಗರದ ಬಿಜೈ ವಾರ್ಡಿನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ತಾ 7.5.2023ರಂದು ಮನೆಗಳಿಗೆ ಭೇಟಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡುತ್ತ ಲೋಬೊರವರು, ರಾಜ್ಯ ಬಿಜೆಪಿ ಸರಕಾರದ ಆಡಳಿತ ನೀತಿಯಿಂದ ಜನರಿಗೆ ಭ್ರಮನಿರಸನವಾಗಿದೆ. ಸರಕಾರ ಭ್ರಷ್ಟಾಚಾರದಿಂದ ಮುಳುಗಿ ಹೋಗಿದೆ. ಹಿಂದೆ ಕೊಟ್ಟ ಆಶ್ವಾಸನೆಗಳನ್ನು ಪೂರೈಸಲು ವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂತಹ ಕೆಟ್ಟ ಸರಕಾರವನ್ನು ಬದಲಾಯಿಸಲು ಜನ ತೀರ್ಮಾನ ಮಾಡಿದ್ದಾರೆ.ಖಂಡಿತವಾಗಿಯೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಜನರ ಅಶೋತ್ತರಗಳನ್ನು ಪೂರೈಸಲಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಪೊರೇಟರ್ ಲಾನ್ಸಿ ಲಾಟ್ ಪಿಂಟೋ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ವಾರ್ಡ್ ಅಧ್ಯಕ್ಷ ವರುಣ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾದಯಾತ್ರೆ.

ಚುನಾವಣಾ ಪ್ರಚಾರದ ಸಮಾರೋಪದ ಸಲುವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ನಾಳೆ ತಾ 8.5.2023ರಂದು ಮಧ್ಯಾಹ್ನ 3.00ಗಂಟೆಗೆ ಮಂಗಳೂರು ಮಿನಿ ವಿಧಾನಸೌದ ಕಚೇರಿಯಿಂದ ನವಭಾರತ್ ಸರ್ಕಲ್ ವರೆಗೆ ಪಾದಯಾತ್ರೆ ನಡೆಯಲಿದೆ. ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಜೆ. ಆರ್. ಲೋಬೊ ರವರು ವಿನಂತಿಸಿರುತ್ತಾರೆ.
ಕಸಬಾ ಬೆಂಗ್ರೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

ನಗರದ ಕಸಬಾ ಬೆಂಗ್ರೆಯಲ್ಲಿ ಇಂದು ತಾ 7.5.2023ರಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ನಡೆಯಿತು.ಸಭಯಲ್ಲಿ ಉಪಸ್ಥಿತರಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾದ ಜೆ. ಆರ್. ಲೋಬೊ ರವರು ಮಾತನಾಡುತ್ತಾ, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಹಳೆ ಬಂದರು ಮತ್ತು ಮೀನುಗಾರಿಕೆ ಉದ್ಯಮದ ಬಗ್ಗೆ ಯೋಜನೆ ವರದಿಯನ್ನು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಮಾಡಿದ ನಂತರವೇ ಸ್ಮಾರ್ಟ್ ಸಿಟಿ ಮಂಜೂರಾತಿ ಆದದ್ದು. ಅದಕ್ಕೆ ಬೇಕಾದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನಾನೇ ಕೊಡಿಸಿದ್ದ ಫಲದಿಂದ ನಮಗೆ ಎರಡನೇ ಪ್ರಯತ್ನದಲ್ಲಿ ಮಂಜೂರಾಯಿತು. ಮೊದಲ ಪ್ರಯತ್ನದಲ್ಲಿ ನಾವು ವಿಫಲರಾಗಿದ್ದೆವು. ಆಗ ಬಿಜೆಪಿ ಸಂಸದರು ಇದ್ದರೂ ಕೂಡ ಪ್ರಯೋಜನಕ್ಕೆ ಬರಲಿಲ್ಲ. ಆದರೆ ಚುನಾವಣೆಯಲ್ಲಿ ದುರದೃಷ್ಟವಶಾತ್ ನಾವು ಪರಾಭವಗೊಂಡೆವು. ಬಿಜೆಪಿ ಅಪ ಪ್ರಚಾರದಿಂದ ನಮಗೆ ಸೋಲಾಯಿತು. ಆದರೆ ಈಗಿನ ಶಾಸಕರು ಸ್ಮಾರ್ಟ್ ಸಿಟಿ ಯೋಜನೆಯನ್ನು ಹಳೆ ಬಂದರು ಮತ್ತು ಮೀನುಗಾರಿಕೆ ಉದ್ದಿಮೆಗೆ ಬಳಸಿಕ್ಕೊಳ್ಳದಿರುವುದು ದುರಂತ. ಅದೇ ರೀತಿ ಈ ಭಾಗದ ಜನತೆಗೆ ಹಕ್ಕುಪತ್ರ ಇರಲಿಲ್ಲ. ಅದೂ ಅಲ್ಲದೇ ಗ್ರಾಮ ಕೂಡ ಮಂಜೂರು ಆಗಿರಲಿಲ್ಲ. ನಾನು ಶಾಸಕನಾದ ಮೇಲೆ ಬೆಂಗ್ರೆ ಪ್ರದೇಶಕ್ಕೆ ಗ್ರಾಮ ಮಂಜೂರು ಮಾಡಿಸಿದೆ. ಎರಡು ಸಾವಿರಕ್ಕೂ ಅಧಿಕ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಿದೆ. ಅನೇಕ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಈ ಪ್ರದೇಶಕ್ಕೆ ಒದಗಿ ಬಂತು. ಬಿಜೆಪಿ ಅಧಿಕಾರ ಬಂದ ನಂತರ ಭ್ರಷ್ಟಾಚಾರ ಅತಿಯಾಯಿತು. ಅಗತ್ಯ ವಸ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ವಿಫಲರಾದರು. ಜನ ಬಿಜೆಪಿ ಸರಕಾರದ ಮೇಲೆ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈಗಾಗಲೇ ಪ್ರಣಾಳಿಕೆ ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗೆ ತಲುಪಿಸಿದೆ. ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಪ್ರಯಾಣ ಇಂತಹ ಮಹತ್ತರ ಯೋಜನೆಗಳನ್ನು ಪ್ರಥಮ ಕ್ಯಾಬಿನೇಟ್ ನಲ್ಲಿ ಮಂಜೂರು ಮಾಡುವುದಾಗಿ ಘೋಷಿಸಿರುವುದು ಬಿಜೆಪಿ ಗೆ ನಿದ್ದೆಗೆಡಿಸಿದೆ ಎಂದರು.
ಮಾಜಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಪದ್ಮರಾಜ್ ಆರ್., ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ, ವಾರ್ಡ್ ಅಧ್ಯಕ್ಷ ಅಶ್ರಫ್ ಅಬೂಬಕರ್, ಕಾರ್ಪೊರೇಟರ್ ಅಬ್ದುಲ್ ಲತೀಫ್, ಮಾಜಿ ಮೇಯರ್ ಅಶ್ರಫ್, ಮಾಜಿ ವಾರ್ಡ್ ಅಧ್ಯಕ್ಷ ಆಸೀಫ್ ಅಹ್ಮದ್ ಬೆಂಗ್ರೆ ಮಾತನಾಡಿದರು. ಪ್ರಮುಖರಾದ ಅಸ್ಲಾಂ ಬೆಂಗ್ರೆ,ರಮಾನಂದ ಪೂಜಾರಿ, ಭಾಸ್ಕರ್ ರಾವ್, ಸವಾನ್ ಜೆಪ್ಪು, ಅಬ್ದುಲ್ ಖಾದರ್,ಅಬ್ದುಲ್ ಜಬ್ಬಾರ್, ಎಸ್. ಕೆ. ಸಫಾನ್, ಷರೀಫ್ ಬಿ. ಎಂ., ರೆಹಮತ್ ಉಪಸ್ಥಿತರಿದ್ದರು.


Spread the love