ಕಾಂಗ್ರೆಸ್ ಅವಧಿಯಲ್ಲಿ ಮಂಜೂರಾದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದು ಬಿಜೆಪಿ ಶಾಸಕರ ಸಾಧನೆ – ಜೆ ಆರ್ ಲೋಬೊ

Spread the love

ಕಾಂಗ್ರೆಸ್ ಅವಧಿಯಲ್ಲಿ ಮಂಜೂರಾದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದು ಬಿಜೆಪಿ ಶಾಸಕರ ಸಾಧನೆ – ಜೆ ಆರ್ ಲೋಬೊ

ಮಂಗಳೂರು: ಮಂಗಳೂರಿಗೆ ರೂ 4750 ಕೋಟಿ ಅನುದಾನ ತಂದಿರುವುದಾಗಿ ಹೇಳಿರುವ ಶಾಸಕ ವೇದವ್ಯಾಸ ಕಾಮತ್ ಅವರು ದಾಖಲೆ ಬಿಡುಗಡೆ ಮಾಡಲಿ. ನನ್ನ ಅವಧಿಯಲ್ಲಿ ಮಂಜೂರಾದ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದು ಮಾತ್ರ ಅವರ ಸಾಧನೆಯಾಗಿದೆ ಎಂದು ಮಾಜಿ ಶಾಸಕ ಜೆ ಆರ್ ಲೋಬೊ ಆರೋಪಿಸಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂಗಳೂರು ಶಾಸಕ ವೇದವ್ಯಾಸ ಕಾಮತವರು ನಗರದ ಅಭಿವೃದ್ಧಿಗೆ ರೂ. 4,750 ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಂಡಿದ್ದಾರೆ ಇವೆಲ್ಲ ಅನುದಾನಗಳು ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರಕಾರ ಇದ್ದಾಗ ನಾನು ಶಾಸಕನಾಗಿದ್ದ ವೇಳೆ ತಂದಿರುವ ಯೋಜನೆಗಳಾಗಿವೆ ಎಲ್ಲಾ ಯೋಜನೆಗಳಿಗೆ ಮಂಜುರಾತಿ ನೀಡಿದ್ದು ಹಿಂದಿನ ಕಾಂಗ್ರೆಸ್ ಸರ್ಕಾರ ಆಗಿದೆ ಇದರಲ್ಲಿ ಮಂಗಳೂರಿನ ಶಾಸಕರ ಯಾವುದೇ ರೀತಿಯ ಕೆಲಸ ಇಲ್ಲ ಅವರಿಗೆ ಲಾಭ ಆಗಿದ್ದು ಕೇವಲ ಶಂಕುಸ್ಥಾಪನೆ ಮಾಡಲು ಅವಕಾಶ ಸಿಕ್ಕಿದ ಬಿಟ್ಟರೆ ಬೇರೇನು ಇಲ್ಲ ಹಿಂದೆ ಶಕ್ತಿ ನಗರದಲ್ಲಿ ಬಡವರಿಗೆ ಮನೆ ನಿರ್ಮಿಸಲು ಯೋಜನೆ ಹಾಕಿಕೊಂಡಾಗ ಪರಿಸರವಾದಿಗಳನ್ನು ಹಿಡಿದುಕೊಂಡು ಇದೇ ಬಿಜೆಪಿಯವರು ಪ್ರತಿಭಟನೆ ನಡೆಸಿ ಅಲ್ಲಿ ಆಕ್ಷೇಪಣೆ ತಂದು ನಿಲ್ಲಿಸುವಂತೆ ಮಾಡಿದರು ಬಳಿಕ ನಾನು ಜಿಲ್ಲಾಧಿಕಾರಿ ವರನ್ನು ಭೇಟಿ ಮಾಡಿ ಇದಕ್ಕೆ ಪರ್ಯಾಯ ಸ್ಥಳವನ್ನು ಕೂಡ ನಿಗದಿಪಡಿಸಿದೆ ಇದರಲ್ಲಿ ಪ್ರಸ್ತುತ ಶಾಸಕರ ಯಾವುದೇ ರೀತಿಯ ಪ್ರಯತ್ನ ಇಲ್ಲ ಎಕ್ಕಾರನಲ್ಲಿ 10 ಎಕರೆ ಜಾಗವನ್ನು ನನ್ನ ಪ್ರಯತ್ನದಿಂದ ಜಿಲ್ಲಾಧಿಕಾರಿಯವರು ನೀಡಿದ್ದು ಅದಕ್ಕೆ ಈಗ ಶಂಕುಸ್ಥಾಪನೆ ಮಾಡಲು ಹೊರಟಿದ್ದಾರೆ ಅಷ್ಟೇ ಎಂದರು.

ಅದೇ ಅಮೃತ ಯೋಜನೆಯನ್ನು ನಾವು ಮಂಜುರಾತಿ ಮಾಡಿಸಿಕೊಂಡು ಬಂದು ಹೂಳೆತ್ತಲು 120 ಕೋಟಿ ರೂಪಾಯಿಯನ್ನು ಮಂಜೂರು ಮಾಡಿಸಿಕೊಂಡು ಬರಲಾಗಿತ್ತು ಲಕ್ಷದ್ವೀಪದ ಜಟ್ಟಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿಕೊಂಡು ಬಂದಿರುವುದು ನನ್ನ ಅವಧಿಯಲ್ಲಿ ಸ್ಮಾರ್ಟ್ ಸಿಟಿಯಲ್ಲಿ ಮೀನುಗಾರಿಕೆ ಮತ್ತು ಬಂದರಿಗೆ ಪ್ರಮುಖ ಆದ್ಯತೆ ನೀಡಬೇಕಿತ್ತು, ಆದರೆ ಅದನ್ನು ಮರೆತು ನಗರದಲ್ಲಿ ಅನಾವಶ್ಯಕ ಅಭಿವೃದ್ಧಿ ಎಂಬ ಹೆಸರಿನಲ್ಲಿ ಹಣವನ್ನು ವ್ಯಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ಇವರ ಡಬಲ್ ಇಂಜಿನ್ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದು ಸ್ಥಳೀಯ ಶಾಸಕರು ಕೇಂದ್ರಕ್ಕೆ ಹೋಗಿ ನಗರದ ಅಭಿವೃದ್ಧಿಗೆ ಪ್ರತ್ಯೇಕ ಹಣ ತರಬೇಕಾಗಿದ್ದು ಅವರ ಜವಾಬ್ದಾರಿ ಆದರೆ ಸ್ಮಾರ್ಟ್ ಸಿಟಿಗೆ ಮಂಜೂರದ ಹಣವನ್ನು ರಸ್ತೆ ನಿರ್ಮಾಣಕ್ಕೆ ಉಪಯೋಗಿಸುತ್ತಿರುವುದು ಸರಿಯಲ್ಲ ಜನಶ್ರೀ ಯೋಜನೆಯನ್ನು ನಾನು ಮಂಜೂರಾತಿ ಮಾಡಿಸಿಕೊಂಡು ಬಂದಿದ್ದು ಈಗಿನ ಶಾಸಕರು ಇದು ತನ್ನ ಸಾಧನೆ ಎಂದು ಹೇಳಿಕೊಳ್ಳೂತ್ತಿದ್ದಾರೆ. ನಾನು ಸವಾಲು ಮಾಡುತ್ತಿದ್ದೇನೆ ತಾವು ತಂದಿರುವ ಯೋಜನೆಗಳ ದಾಖಲೆ ಬಿಡುಗಡೆ ಮಾಡಿ ಯಾವಾಗ ಆ ಯೋಜನೆಗಳು ಮಂಜೂರಾಗಿದ್ದವು ಎನ್ನುವ ದಾಖಲಾತಿ ನಿಮ್ಮಲ್ಲಿದ್ದರೆ ಕೂಡಲೆ ಬಿಡುಗಡೆ ಮಾಡಿ ಅದರ ಬದಲು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಲು ಹೋಗಬೇಡಿ ಎಂದರು

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವಾಗ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೆವು ಆದರೆಯೂ ಬಿಜೆಪಿಗರು ಜನರ ಅಭಿಪ್ರಾಯ ಕೇಳದೆ ಅವರಿಗೆ ಇಷ್ಟ ಬಂದ ರೀತಿ ವರ್ತಿಸುತ್ತಿರುವುದು ಖಂಡನೀಯ ಎಂದರು.

ಮಂಗಳೂರು ನಗರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಾವು ಮಂಜೂರು ಮಾಡಿಸಿಕೊಂಡು ಬಂದಿದ್ದೆವು ಅದರಲಿ ಸ್ಮಾರ್ಟ್ ಸಿಟಿ ಒಂದಾಗಿದೆ ಇತ್ತೀಚೆಗೆ ದಿನಪತ್ರಿಕೆಯಲ್ಲಿ ಒಂದು ವರದಿ ಬಂದಿತ್ತು ಬೊಳೂರ್ನಲ್ಲಿ ತಣ್ಣೀರು ಬಾವಿಗೆ ಹೋಗಲು ಸುಮಾರು 35 ಕೋಟಿ ವೆಚ್ಚದಲ್ಲಿ ತೂಗು ಸೇತುವೆಯನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಲಾಗುತ್ತಿದೆ ಸ್ಮಾರ್ಟ್ ಸಿಟಿಯ ಯಾವುದೇ ಕಾಮಗಾರಿಗಳು ನಮ್ಮ ನಗರಕ್ಕೆ ಯಾವುದು ಕೂಡ ಉಪಯೋಗಕ್ಕೆ ಬರುವಂತೆ ಆಗಿಲ್ಲ ಮುಂದಿನ 50ರಿಂದ 100 ವರ್ಷಗಳಿಗೆ ಉಪಯೋಗಕ್ಕೆ ಬರುವ ಯೋಜನೆಗಳನ್ನು ಹಾಕಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ ಆಗಿತ್ತು ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರುಗೆ ತರಲು ಮುಖ್ಯ ಕಾರಣ ಮಂಗಳೂರಿನ ಮೀನುಗಾರಿಕೆ ಮತ್ತು ಮಂಗಳೂರು ಬಂದರು. ಈ ಎರಡು ವಿಚಾರಗಳನ್ನು ಮುಂದಿರಿಸಿಕೊಂಡು ಯೋಜನಾ ವರದಿಯನ್ನು ತಯಾರಿಸಿ ಸ್ಮಾರ್ಟ್ ಸಿಟಿ ಮಂಜುರಾತಿ ಪಡೆಯಲಾಗಿತ್ತು ಆದರೆ ಎರಡು ಕ್ಷೇತ್ರಕ್ಕೆ ಯಾವುದೇ ರೀತಿಯ ಖರ್ಚು ಆಗಿಲ್ಲ ಎನ್ನುವುದು ಕಂಡು ಬಂದಿದೆ ಈ ಮೂಲಕ ಸ್ಮಾರ್ಟ್ ಸಿಟಿ ಯೋಜನೆ ಸಂಪೂರ್ಣ ವಿಫಲವಾಗಿದೆ

ತೂಗು ತೂಗು ಸೇತುವೆ ಮಾಡಿದ್ದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಅದನ್ನು ಕೇವಲ ನಡೆದಾಡಲು ಉಪಯೋಗಿಸಬಹುದು ನಮ್ಮ ಯೋಜನೆ ಪ್ರಕಾರ ತೂಗು ಸೇತುವೆ ಇದ್ದಲ್ಲಿ ಕಾಯಂ ಸೇತುವೆ ನಿರ್ಮಾಣ ಮಾಡಲು ಚಿಂತಿಸಲಾಗಿತ್ತು ಹಳೆ ಬಂದರನ್ನು ನವ ಮಂಗಳೂರೊಂದಿಗೆ ಜೋಡಿಸಬೇಕು ಈ ಮೂಲಕ ಸರಕು ವ್ಯವಹಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ನಿರ್ಧರಿಸಲಾಗಿತ್ತು ನೇತ್ರಾವತಿ ಸೇತುವೆಯಿಂದ ಹಿಡಿದು ನದಿ ತೀರದಲ್ಲಿ ರಸ್ತೆ ನಿರ್ಮಾಣ ಮಾಡಿ ಮೀನುಗಾರರಿಗೆ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ರಸ್ತೆ ನಿರ್ಮಿಸುವುದರ ಮೂಲಕ ಲಕ್ಷದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ನಮ್ಮದು ಚಿಂತನೆಯಾಗಿತ್ತು ಈ ನಿಟ್ಟಿನಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿ ಮಂಗಳೂರಿನಲ್ಲಿ 400 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲು ಚಿಂತನೆ ನಡೆಸಲಾಗಿತ್ತು

ಇಷ್ಟೆಲ್ಲಾ ಯೋಜನೆಗಳನ್ನು ಇಟ್ಟು ಲಕ್ಷದ್ವೀಪದಕೆ ಸಂಪರ್ಕ ಕಲ್ಪಿಸುವ ಚಿಂತನೆಯಲ್ಲಿ ಇರುವಾಗ ತೂಗು ಸೇತುವೆ ನಿರ್ಮಿಸುವುದು ಎಷ್ಟೊಂದು ಸಮಂಜಸ ತೂಗು ಸೇತುವೆ ಯೋಜನೆ ಮಾಡಿದರೆ ಸಂಪೂರ್ಣ ವಿಫಲವಾಗಲಿದೆ ತೋಟ ಬೆಂಗ್ರೆಯವರು ತೂಗು ಸೇತುವೆಗೆ ಬರಲು ತುಂಬಾ ದೂರ ಕ್ರಮಿಸಬೇಕು. ಖಾಯಂ ಸೇತುವೆ ನಿರ್ಮಾಣ ಮಾಡಿ ಲಕ್ಷದ್ವೀಪ ಜಟ್ಟಿಗೆ ಸಂಪರ್ಕ ನೀಡಿದ್ದರೆ ಇದರಿಂದ ಮೀನುಗಾರರಿಗೆ ಉಪಯೋಗವಾಗಲಿ ದೆ ಅದರ ಬದಲು ತೂಗು ಸೇತುವೆ ಮಾಡಿ ಅದನ್ನು ಸರಿಯಾಗಿ ನಿರ್ವಹಣೆ ಮಾಡದೆ ಅದು ವ್ಯರ್ಥವಾದರೆ ಸಂಪೂರ್ಣ ವಿಫಲವಾಗಲಿದೆ ಇದು ಸಂಪೂರ್ಣ ಅವೈಜ್ಞಾನಿಕವಾದ ಕೆಲಸವಾಗಿದ್ದು ಇದು ಯಾರಿಗೂ ಲಾಭ ವಾಗುವುದಿಲ್ಲ. ತಕ್ಷಣದಿಂದ ತೂಗು ಸೇತುವೆ ಯೋಜನೆ ಕೈ ಬಿಟ್ಟು ಕಾಯಂ ಸೇತುವೆ ನಿರ್ಮಾಣಿಸಬೇಕು ಎಂದು ಆದರೆ ಆಗ್ರಹಿಸಿದರು


Spread the love

Leave a Reply

Please enter your comment!
Please enter your name here